ಮಾತಿನ ಹುರಿಗಾಳು, ಬೇಕಾದಷ್ಟು ಬಳಸಿ
ಇವು ಅಲ್ಲಲ್ಲಿ ಕಿವಿಗೆ, ಕಣ್ಣಿಗೆ ಬಿದ್ದ ಮಾತಿನ ಹುರಿಗಾಳು. ಕಚಗುಳಿ ಇಡುತ್ತವೆ, ನಮ್ಮ ಪರಿಚಿತ ಕಲ್ಪನೆಗಳನ್ನು ಕೆಣಕುತ್ತವೆ, ಗೊತ್ತಿರುವ ಸಂಗತಿಗಳಿಗೆ ಹೊಸ ಡೆಫೆನಿಶನ್ ಕೊಡುತ್ತವೆ. ಇಷ್ಟವಾದರೆ ತಿಳಿಸಿ. ಆಗಾಗ ಇನ್ನಷ್ಟು ಹುರಿಗಾಳು ಸಪ್ಲೈ ಮಾಡುತ್ತೇನೆ.
1) ನನ್ನದು ಪರಿಶುದ್ಧವಾದ ಮನಸ್ಸು ಅನ್ನುವವರ ನೆನಪಿನ ಶಕ್ತಿ ದುರ್ಬಲವಾಗಿರುತ್ತದೆ.
2) ಪ್ರಬುದ್ಧ ವ್ಯಕ್ತಿ ಎಂದರೆ ಜವಾಬ್ದಾರಿಗಳಿಂದ ನರಳುತ್ತಿರುವ ವ್ಯಕ್ತಿ.
3) ಯಾರಿಂದ ಇನ್ನೂ ನೀವು ಇನ್ನೂ ಸಾಲ ಪಡೆದಿಲ್ಲವೋ ಅವನೇ ಆತ್ಮೀಯ ಜೀವದ ಗೆಳೆಯ.
4) ಸ್ವಚ್ಛವಾದ ಮೇಜು ಅಸ್ತವ್ಯಸ್ತವಾಗಿರುವ ಡ್ರಾದ ಕುರುಹು.
5) ನಿರಾಶಾವಾದಿಯ ರಕ್ತದ ಗುಂಪು ಸದಾ b-negative.
6) ಕಷ್ಟ ಬಂದಾಗಲೂ ನಗುತ್ತಿರುವವನಿಗೆ ಬಹುಶಃ ಸಂದರ್ಭದ ಸೀರಿಯಸ್‌ನೆಸ್ ತಿಳಿದಿರುವುದಿಲ್ಲ
7) ಅವಕಾಶ ಬಂದು ಬಾಗಿಲು ತಟ್ಟಿದಾಗ “ಏನಿದು ಗದ್ದಲ” ಎಂದು ಗೊಣಗುವವನೇ ನಿರಾಶಾವಾದಿ
8) ಹೆಣ್ಣಿನ ಸ್ಥಾನ ಮನೆಯಲ್ಲಿ, ಅಡುಗೆಮನೆಯಲ್ಲಿ, ವಿಧಾನಸೌಧದಲ್ಲಿ, ಮತ್ತೆ ಆಕೆ ಎಲ್ಲೆಲ್ಲಿ ಬಯಸುತ್ತಾಳೋ ಅಲ್ಲಲ್ಲಿ.
9) ನೀವು ಅತ್ಯಂತ ವಿಶಿಷ್ಟವ್ಯಕ್ತಿ, ಉಳಿದ ಎಲ್ಲರಂತೆಯೇ—ಇದನ್ನು ಮರೆಯಬೇಡಿ.
10) ಯಶಸ್ವೀ ಡಯಟಿಂಗ್: ಊಟದ ತಟ್ಟೆಯ ಮೇಲೆ ಮನಸ್ಸು ಸಾಧಿಸಿದ ವಿಜಯ
Comments
ಇನ್ನಷ್ಟು ಹುರಿಗಾಳು
ನಿಜವಾದ ಹುರಿಗಾಳು