ಮಾತುಪಲ್ಲಟ - ೧೨
♫♫♫ಮಾತುಪಲ್ಲಟ - ೧೨♫♫♫
ಇದು ಮಾತುಪಲ್ಲಟ ಸರಣಿಯ ಹನ್ನೆರಡನೆಯ ಹಾಡು. ಮೂಲದ ಆಶಯವನ್ನು ಸಾಧ್ಯವಾದಷ್ಟು ಹಿಡಿದಿಡಲು ಯತ್ನಿಸಿರುವೆನು. ♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
ಚಿತ್ರ : ಅನ್ವೇಶಿಚ್ಚು ಕಣ್ಡೆತ್ತಿಯಿಲ್ಲ♪
ಸಂಗೀತ : ಶ್ರೀ ಎಂ. ಎಸ್. ಬಾಬುರಾಜ್♪
ಮೂಲ ಸಾಹಿತ್ಯ : ಶ್ರೀ ಪಿ. ಭಾಸ್ಕರನ್♪
ಹಾಡುಗಾರರು : ಶ್ರೀ ಕೆ. ಜೆ. ಯೇಸುದಾಸ್♪
ವಿಡಿಯೋ : http://www.youtube.com/watch?v=NWpVQ6ZF4vo
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
♪ಮೂಲ ಸಾಹಿತ್ಯ♪ :
ಇನ್ನಲೆ ಮಯಂಗುಂಬೋಳ್ | ಒರು ಮಣಿ ಕಿನಾವಿನ್ಡೆ |
ಪೊನ್ನಿನ್ ಚಿಲಂಬೊಲಿ ಕೇಟ್ಟುಣರ್ನು ||
ಮಾಧವ ಮಾಸತ್ತಿಲ್ ಆದ್ಯಂ ವಿರಿಯುನ್ನ | ಮಾದಳ ಪೂ ಮೊಟ್ಟಿನ್ ಮಣಂ ಪೋಲೆ |
ಓರ್ಕಾದಿರುನ್ನಪ್ಪೋಳ್ ಒರುಂಗಾದಿರುನ್ನಪ್ಪೋಳ್ | ಓಮನೇ ನೀ ಎನ್ಡೆ ಅರಿಕಿಲ್ ವನ್ನು ||
ಪೌರ್ಣಮಿ ಸಂಧ್ಯತನ್ ಪಾಲಾೞಿ ನೀನ್ದಿ ವರುಂ | ವಿಣ್ಣಿಲೆ ವೆಣ್ಮುಗಿಲ್ ಕೊಡಿ ಪೋಲೆ |
ತಂಗ ಕಿನಾವಿಂಗಲ್ ಏದೋ ಸ್ಮರಣತನ್ | ತಂಬುರು ಶ್ರುತಿ ಮೀಟ್ಟಿ ನೀ ವನ್ನು ||
ವಾನತ್ತಿನ್ ಇರುಳಿಲ್ ವೞಿತೆಟ್ರಿ ವನ್ನು ಚೇರ್ನ | ವಾಸನ್ತ ಚಂದ್ರಲೇಖ ಎನ್ನ ಪೋಲೆ |
ಮೂಡುಪಡಮಣಿಞ್ಞ ಮೂಕಸಂಕಲ್ಪಂ ಪೋಲೆ | ಮಾಡಿವಿಳಿಕ್ಕಾದೆ ನೀ ವನ್ನು ||
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
♪ಮಾತುಪಲ್ಲಟ♪ :
ನಿನ್ನೆಯ ಇರುಳಿನೊಳ್ | ನಿದಿರೆಯ ಕನಸಿನೊಳ್ |
ನಿನ್ನ ಕಾಲ್ಗೆಜ್ಜೆಯ ನಾದದಿಂದೆಚ್ಚಱಿತೆ ||
ಮಧುಮಾಸದೊಳು ಮೊದಲರಳಿದಂಥ | ಮಲರಿನ ಮಕರನ್ದವ ಹೀರುವ ತುಂಬಿಯನ್ತೆ |
ನೆನಕೆಗೆ ನಿಲುಕದ ನಲ್ಲೊಸಗೆಯ ನಿರುಕಿಸಿ | ನನ್ನರಗಿಣಿಯೇ ನನ್ನ ನೀ ಸೇರು ||
ಹುಣ್ಣಮೆಯಿರುಳಿನ ಹಾಲ್ ಬೆಳ್ದಿಂಗಳ | ಬಾನಿನೊಳ್ ಮುಗಿಲಿನ ಓಡದನ್ತೆ |
ಇರುಳಿನ ಕನಸಿನ ಯಾವುದೋ ನೆನಪಿನ | ಇನಿದಾದೊನ್ದು ಹಾಡನ್ನು ಗುನುಗುತ್ತಲೇ ||
ಬೆಳ್ಳನೆ ಬಾನಿನ ಬೆಳ್ದಿಂಗಳ ಬೆಳಕಿನನ್ತೆ | ನನ್ನರಗಿಣಿಯೇ ನನ್ನ ನೀ ಸೇರು ||
ಮೊಗವಾಡವಿಲ್ಲದೆ ಮಾತಿನ ಮೊನಚಿರದೆ | ನನ್ನರಗಿಣಿಯೇ ನನ್ನ ನೀ ಸೇರು ||
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
♪ಟಿಪ್ಪಣಿ♪ :
೧. ನಿದಿರೆ = ನಿದ್ರೆ.
೨. ನಿರುಕಿಸು = ನಿರೀಕ್ಷಿಸು.
೩. ಎಚ್ಚಱಿತೆನು = ಎಚ್ಚರಗೊಣ್ಡೆನು.
೪. ಮಲರು = ಹೂವು.
೫. ನೆನಕೆ = ನೆನೆಯುವಿಕೆ.
೬. ಹುಣ್ಣಮೆ = ಹುಣ್ಣಿಮೆ.
೭. ಓಡ = ದೋಣಿ.
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣