ಮಾತುಪಲ್ಲಟ - ೧೬
ಇದು ಮಾತುಪಲ್ಲಟ ಸರಣಿಯ ಹದಿನಾರನೆಯ ಹಾಡು. ಈ ಸಂಚಿಕೆಯ ಮಾತುಪಲ್ಲಟದಲ್ಲಿ ತಮಿಳು ಭಾಷೆಯ ಗೋವಾ ಚಿತ್ರದಿಂದ ಆಯ್ದ ಹಾಡೊಂದನ್ನು ಬಳಸಿಕೊಳ್ಳಲಾಗಿದೆ.
ಮೂಲ: ಇದು ವರೈ ಇಲ್ಲಾದ ಉಣರ್ವಿದು
ಮನಸ್ಸಿದು ಏನೇನೋ ಬಯಸಿತು
ವಯಸ್ಸಿದು ಏನೇನೋ ಕನಸಿತು
ನನಸಿದು ಕಣ್ಮುಂದೆ ಬಂದಿತು ತಾಳ ಮೇಳದೊಲು
ಕಣ್ಣಿಂದ ಕಾಣಬಯಸಿದ
ಕಿವಿಯಿಂದ ಕೇಳಬಯಸಿದ
ಸೊಂಪೆಲ್ಲ ಭೂಮಿಗಿಳಿಯಿತು ಇಂದು
ಎಂದೋ ಕಂಡ ಕನಸಿನ ನೆನಕೆ
ಇಂದೂ ಕೂಡ ಕಾಣುವ ಬಯಕೆ
ಕನವರಿಸುತ್ತ ತಡವರಿಸುತ್ತ ದಿನ ಕಳೆಯಿತು
ದಿನ ಇರುಳಾದರೆ ಏನೇನೋ ಕಾಟ ಕನಸಲ್ಲಿ ಎಂದೂ
ಕಾಡಿ ಕೊಲುವಂಥ ನೋವು
ಕಾದು ಸುಡುತಿದೆ ವಿರಹ
ನೀನೇ ಒಮ್ಮೆ ಬಾ ಸನಿಹ
ಬಂದೂ ಬಂದೂ ಸುಡುತಿದೆ ವಿರಹ
ಬಿಟ್ಟೂ ಬಿಟ್ಟೂ ಕೊಲುತಿದೆ ಮೋಹ
ಈ ಬೇಗೆಯ ಈ ತಾಪವ ಯಾರರಿತವರು
ಇದು ಹೆಚ್ಚು ದಿನವರದು
ಹಾರಿ ಹೋಗುವಂಥದಿದು
ಕಾಡಿದ ನೂರೆಂಟು ಬಯಕೆಯ
ಮನಸ್ಸಲ್ಲಿ ಸುಟ್ಟುರಿವ ದೊಂದಿಯ
ಒಳಗಿನ ಉರವಣೆಯ ಸಹಿಸೆನು ತೋರು ಕಣ್ಮುಂದೆ
ಹೊಸದೊಂದು ಹರುಷ ಮೊಳೆತಿತು
ಒಳಗೆ ಹೊಸ ಭಾವ ತುಂಬಿತು
ಮೋಹ ತಾನಾಗಿ ಚಿಗುರಿತು ಇಂದು
Rating