ಮಾಧ್ಯಮಗಳಿಗೊಂದು ಮನವಿ
ಗುಜರಾತ್ ಮತ್ತು ಹಿಮಾಚಲಗಳ ಚುನಾವಣೆ ಮುಗಿದಿವೆ. ಮಾಧ್ಯಮಗಳು ಅಂದಾಜಿಸಿರುವಂತೆಯೇ ಫಲಿತಾಂಶಗಳೂ ಬಂದಿವೆ. ನಮ್ಮ ಭಾಗಕ್ಕೆ, ಚುನಾವಣೆ, ಯಾರೋ ಗೆದ್ದು, ಯಾರೋ ಸೋತು, ಇನ್ಯಾರೋ ಠೇವಣಿ ಕಳೆದುಕೊಳ್ಳುವ ಕುದುರೆ ಜೂಜು ಎನಿಸತೊಡಗಿದೆ. ಗೆದ್ದ ಅಭ್ಯರ್ಥಿ, ಸಮೀಪದ ಪ್ರತಿಸ್ಪರ್ಧಿಗಿಂತಾ ಎಷ್ಟು ಹೆಚ್ಚು ವೋಟುಗಳ ಮುನ್ನಡೆ ಸಾಧಿಸಿದರು ಎಂದು ಹೇಳುವುದು, ಚುನಾವಣಾ ಆಯೋಗದ್ದೆ ಅಧೀಕೃತ ನುಡಿಗಟ್ಟಾಗಿದೆ. ಆದರೆ ಚುನಾವಣೆ, ಅಭ್ಯರ್ಥಿಗಳು ಜಿದ್ದಾಜಿದ್ದಿನಿಂದ ಹೊಡೆದಾಡಿ, ಒಬ್ಬೊಬ್ಬರನ್ನಾಗಿ ಮಣ್ಣು ಮುಕ್ಕಿಸುವ ಮಟ್ಟಿಕಾಳಗವಲ್ಲ. ವಿವೇಕಶಾಲೀ ಮಾಧ್ಯಮಗಳಾದರೂ, ಚುನಾವಣಾ ಫಲಿತಾಂಶ ಪ್ರಕಟಣೆಯಲ್ಲಿ, ಹೊಸ ದೃಷ್ಟಿಕೋನ ಬೆಳೆಸಿಕೊಳ್ಳಬೇಕಾಗಿದೆ. ಸೋತವರನ್ನು ಬಿಟ್ಟುಬಿಡಿ, ಗೆದ್ದವರು, ಕ್ಷೇತ್ರದ ಶೇ. ಎಷ್ಟು ಮಂದಿಯ ಮತ (ಅಭಿಮತ) ಗಳಿಸಿದರೆನ್ನುವುದನ್ನು ಹೇಳುವ ಶೈಲಿ - ಫಾರ್ಮೆಟ್’ ಕಡ್ಡಾಯ ಮಾಡಿಕೊಂಡರೆ, ಆಯೋಗದ ಅಧೀಕೃತ ಮೂರ್ಖತನ ಅಥವಾ ಮಂಕುತನಕ್ಕೆ ಬೆಳಕು ಬರುತ್ತದೆ; ವ್ಯವಸ್ಥೆಗೆ ತಿದ್ದುಪಡಿಯಾಗುತ್ತದೆ.
Rating