ಮಾನವನೇ ಶ್ರೇಷ್ಠ ಎಂಬುದೊಂದೇ ಪ್ರಾಣಿವಾಣಿ! -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೩

ಮಾನವನೇ ಶ್ರೇಷ್ಠ ಎಂಬುದೊಂದೇ ಪ್ರಾಣಿವಾಣಿ! -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೩

(೨೨೧) ಸಾಂಸ್ಕೃತ್ಕ ಸಂವಾದವೆಂಬುದು ’ಸರಳ’ತೆಯನ್ನು ತೊಂದರೆಗೀಡುಮಾಡುತ್ತದೆ. ಆದರೆ ಸರಳತೆಯು ಆ ಸಾಂಸ್ಕೃತಿಕ ಸಂವಾದವನ್ನೇ ನಾಶಮಾಡಿಬಿಡುತ್ತದೆ!


(೨೨೨) ದುಃಖಿತನಾಗುವುದು ವಿಧಿನಿಯಮವಾಗಿತ್ತು ಎಂದು ಅರಿಯದೆ ವಿಧಿಯನ್ನೇ ತರ್ಕದ ತೆಕ್ಕೆಗೊಪ್ಪಿಸಿದಾಗ ಆಗುವುದೇ ನಿಜವಾದ ದುಃಖ!


(೨೨೩) ಸಾರ್ವತ್ರಿಕ ಆಗುಹೋಗುಗಳಲ್ಲಿ ತೊಡಗಿಸಿಕೊಂಡವರ ವೈಯಕ್ತಿಕ ಆಗುಹೋಗುಗಳಲ್ಲಿ ತಲೆ ತೂರಿಸುವುದೂ ಒಂದು ತೆರನಾದ ಸಾರ್ವತ್ರಿಕ ವ್ಯವಹಾರವೇ.


(೨೨೪) ಮಾನವ ಇತರ ಪ್ರಾಣಿಗಳಿಗಿಂತಲೂ ಶ್ರೇಷ್ಠ ಎಂದು ಸಾಬೀತು ಪಡಿಸುವ ಯಾವುದಾದರೂ ಒಂದು ಉದಾಹರಣೆ ನೀಡಿ, ನಾನು ಅದಕ್ಕೆ ಪ್ರತಿಯಾಗಿ ಹಲವು ಉದಾಹರಣೆಗಳನ್ನು ನೀಡುವೆ. ಏಕೆಂದರೆ ನಾವೆಲ್ಲರೂ ಮಾನವರೇ ಅಲ್ಲವೆ!


(೨೨೫) ಸಮಕಾಲೀನ ದೈವವಾಣಿಃ ನಾನು ನಿನಗೆ ನೀಡಿದ ಎಲ್ಲ ಭರವಸೆಗಳನ್ನೂ ಈಡೇರಿಸುವಲ್ಲಿ ಸೋತಿದ್ದಕ್ಕೆ ಕ್ಷಮೆ ಇರಲಿ. ನಿನಗೆ ನಾನು ಬೇರಿನ್ಯಾವ ರೀತಿಯಲ್ಲಾದರೂ ಸಹಾಯ ಮಾದಬೇಕಿದ್ದರೆ ಸಂಕೋಚಿಸದೆ ತಿಳಿಸು!//


 


 

Rating
No votes yet

Comments