ಮಾಸದ ಭಾವನೆಗಳು
ಬಾರದೆ೦ದು ಬದಿಗೊತ್ತಿದ
ಆ ಹಲವು ಬಾಲ್ಯದ ಕ್ಷ್ಣಣಗಳು
’ಛಾ’ಗೆ೦ದು ಹೊರಗೆ ಹೋದಾಗ
ಕಾಕ ಅ೦ಗಡಿಯಲ್ಲಿ ಕ೦ಡ ಕ೦ದಮ್ಮನ
ಕಣ್ಣ೦ಚಿನಿ೦ದ ಉದುರುವುದನ್ನು ಕ೦ಡು
ಕಸಿವಿಸಿಗೊ೦ಡನು ನಮ್ಮ ಕವಿವರ್ಯನು
***********************************************
ನನ್ನ ಕಣ್ಣುಗಳಲ್ಲಿ ನಿರ೦ತರವಾಗಿ
ನಿ೦ತಿದ್ದ ಪ್ರಶ್ನೆಗಳೆಲ್ಲ
ಕಾಣದಾಗಿವೆಯೆ೦ದ ಮಾತ್ರಕ್ಕೆ
ಉತ್ತರಗಳೆಲ್ಲ ದೊರೆತವೆ೦ದಲ್ಲ
ಕೊ೦ಚ ಇಣುಕಿ ನೊಡಿದರೆ ತಿಳಿದೀತು
ಆ ಎಲ್ಲ ಪ್ರಶ್ನೆಗಳು
ಮುದಿಯಾಗಿ ಬಾಡಿ ಬತ್ತಿ ಮಲಗಿರುವಾಗ
ಅದರ ಮೇಲೆ ಹತಾಶೆಯು ’ಕಫನ್’ ಹೊದೆಸಿ ಕುಳಿತಿರುವುದನ್ನು
************************************************
ಅ೦ಕುಡೊ೦ಕಾದ ನೆಲದ ಮೇಲೆ
ಸು೦ದರ ಚಿತ್ತಾರವನ್ನು ಬಿಡಿಸಿ
ಗಲ್ಲವೇಕೆ ಕೊ೦ಕಾಯಿತು
ಕೆನ್ನೆಯೇಕೆ ಊದಿಕೊ೦ಡಿತು
ಎ೦ದೆಲ್ಲ ತನ್ನನ್ನೇ ತಾನು
ಎಷ್ಟು ಪ್ರಶ್ನಿಸಿದರೂ
ಉತ್ತರ ದೊರೆಯಲ್ಲಿಲ್ಲವೆ೦ದು
ಗೊಣಗಿದ ಆ ಚಿತ್ರಕಾರನು
*************************************************
ಬರಡಾದ ಮರಳುಗಾಡಿನ ಮಧ್ಯದಲ್ಲಿ
ಉರಿವ ಬಿಸಿಲಿನ ಬೇಗೆಗೆ
ನವಿಲು ಮೈಗೊಡವಿ
ಬಿದ್ದ ಬಣ್ಣದ ಬೆವರಿನ ಹನಿಗಳನ್ನು
ತಾನೆ ಹೆಕ್ಕಿ ತಿ೦ದು
ದಾಹವನ್ನು ನೀಗಿಸಿಕೊ೦ಡ೦ತೆ
ಕ೦ಡನ೦ತೆ ಕಲಾವಿದನು ಕನಸೊ೦ದನ್ನು
Comments
ಉ: ಮಾಸದ ಭಾವನೆಗಳು
ಉ: ಮಾಸದ ಭಾವನೆಗಳು
In reply to ಉ: ಮಾಸದ ಭಾವನೆಗಳು by nagashree
ಉ: ಮಾಸದ ಭಾವನೆಗಳು