ಮಿಂಚಿನ ಓಟ

ಮಿಂಚಿನ ಓಟ

ನೆನ್ನೆ ಮಿಂಚಿನ ಓಟ ಚಿತ್ರ ವಿಕ್ಷಿಸಲಾಯಿತು. ಮೊದಲರ್ಧ ಸ್ವಲ್ಪ ಅತಿಯೆನ್ನುವ ನಾಟಕೀಯತೆಯ ಸೀನುಗಳು ಉಪ್ಪಿದಾದಾ ಎಂಬಿಬಿಎಸ್ ಚಿತ್ರವನ್ನು ನೆನಪಿಸುತ್ತವೆ. ಸುಮಾರು ಮುಕ್ಕಾಲು ತಾಸಿನ ನಂತರವಷ್ಟೇ ಸಿನಿಮಾ ವೇಗ ಪಡೆಯುತ್ತದೆ. ನಿಮ್ಮಲ್ಲಿ ಮೊದಲ ಈ ೪೫ ನಿಮಿಷಗಳು ಕುಳಿತುಕೊಳ್ಳುವ ಸಹನೆಯಿದ್ದಲ್ಲಿ ಮುಂದೈತೆ ಊರ ಹಬ್ಬ. ಸ್ಟೀವನ್ ಸ್ಪಿಲ್ಬರ್ಗ್ ರ ೧೯೭೧ರಲ್ಲಿ ತಯಾರಿಸಲಾದ ಟೆಲಿಫಿಲ್ಮ್ ’ಡ್ಯೂಯೆಲ್’ ಇದಕ್ಕೆ ಸ್ಪೂರ್ತಿ ಎಂದು ಎಲ್ಲೋ ಓದಿದೆ. ವಿಜಯ್-ಮುರಳಿ ಅಭಿನಯದಲ್ಲಿ ಎರಡು ಮಾತಿಲ್ಲ. ಉತ್ತಮ ಅಭಿನಯ ನೀಡಿದ್ದಾರೆ. ವಿ.ಮನೋಹರ್ ಕರ್ಣ ಮನೋಹರ ಗೀತೆಗಳನ್ನು ನೀಡಿದ್ದಾರೆ. ಹಾಡುಗಳಲ್ಲಿನ ದೃಶ್ಯಗಳೂ ಉತ್ತಮ ಲೊಕೇಶನ್ಗಳಲ್ಲಿ ಚಿತ್ರಿತವಾಗಿವೆ. ಬೇಜಾರೆಂದರೆ ಈ ಹಾಡುಗಳು ಕೇವಲ ೩-೪ ನಿಮಿಷದವು. ಇನ್ನಷ್ಟು ಹೊತ್ತು, ಇನ್ನೂ ಕೆಲವು ಹಾಡುಗಳು ಇರಬಾರದಿತ್ತೇ ಎನಿಸುತ್ತದೆ. ’ಓ ಗೆಳೆಯಾ...’ ಹಾಡು ಚೆನ್ನಾಗಿ ಬಂದಿದೆ. ಯಾರು ಇದನ್ನು ಹೇಳಿದ್ದು? ಕೇಳೋಕ್ಕೆ ’ಮಾದೇಸ್ವರಾ..’ ಹಾಡಿದ ದೀಕ್ಷಿತ್ ದ್ವನಿಯಂತಿದೆ. ಚಿತ್ರದ ಉತ್ತರಾರ್ಧದಲ್ಲಿ ಬರುವ ಮೂರೂ ಹಾಡುಗಳೂ ಒಂದೇ ರಾಗದಲ್ಲಿವೆ ಅನ್ನಿಸಿತು. ಕಾಮೆಡಿ ಸೀನುಗಳು ಇನ್ನೂ ಸ್ವಲ್ಪ ಜಾಸ್ತಿ ಇದ್ದರೆ ಚೆನ್ನಿತ್ತು. ಒಮ್ಮೆ ನೋಡಬಹುದಾದ ಚಿತ್ರ. ಕಮರ್ಶಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಮಸಾಲೆಗಳೂ ಇದರಲ್ಲಿವೆ. ಅತಿಯಾದ, ಉದ್ದ್ದುದ್ದುದ್ದ ಡಯಲಾಗ್ ಗಳು ಇಲ್ಲ.

Rating
No votes yet