ಮಿಥುನ್ ನಂಬರ್ ಟೂ - ಜಯಂತ್ ಕಾಯ್ಕಿಣಿ ಕಥೆ .

ಮಿಥುನ್ ನಂಬರ್ ಟೂ - ಜಯಂತ್ ಕಾಯ್ಕಿಣಿ ಕಥೆ .

ಮಲೆನಾಡಿನ ಒಂದು ಹಳ್ಳಿಯಲ್ಲಿ ಒಬ್ಬ ಹುಡುಗ ; ಆಗ ಎಲ್ಲೆಲ್ಲೂ ಕಾಣಿಸಿಕೊಳ್ತಿರುವ ಸಿನೇಮಾ ಪೋಸ್ಟರಿನಲ್ಲಿನ ಮಿಥುನ್ ಚಕ್ರವರ್ತಿಗೆ ಸ್ವಲ್ಪ ಹೋಲಿಕೆ ಇದೆ ಅಂತ ಅನೇಕರು ಹೇಳಿದಾಗ ಅವನೂ ಮಿಥುನ್ ತರ ಹೇರ್ ಸ್ಟೈಲ್ ಮಾಡ್ಕೊಂಡು ಅವನ ಸಿನೇಮ ಅನೇಕ ಸಲ ನೋಡಿ ಅವನ ಹಾವ ಭಾವ ಅನುಕರಿಸಲು ಆರಂಭಿಸುತ್ತಾನೆ . ಒಂದು ದಿನ ಸಿನೇಮಾ ಸೇರಲು ಮುಂಬೈಗೇ ಓಡಿ ಬರುತ್ತಾನೆ ...
ಯಾವ್ದೋ ಸಿನಿಮಾ ಸ್ಟುಡಿಯೋ ತಲುಪಿದಾಗ ಅವನ ಆರಾಧ್ಯ ದೈವ ಮಿಥುನ್ ಚಕ್ರವರ್ತಿ ಯ ಸಿನೇಮಾದ್ದೇ ಶೂಟಿಂಗ್ ನಡೆದಿದ್ದು ಅವನ ಹೋಲಿಕೆ ಇರುವ ಈ ಹುಡುಗನಿಗೇ ಸಾಹಸ ದೃಶ್ಯದಲ್ಲಿ ಅವನ ಡೂಪ್ಲಿಕೇಟ್ ಆಗಿ ಪಾಲ್ಗೊಳ್ಳುವ ಅವಕಾಶ ಕೊಡ್ತಾರೆ .. ಮಿಥುನ್ ಚಕ್ರವರ್ತಿ ಧರಿಸುವಂಥದ್ದೇ ಬಟ್ಟೆ ಹಾಕಿಸಿ , ಕ್ಯಾಮೆರಾದತ್ತ ಮುಖ ಮಾಡ್ಬಾರ್ದು ಎಂದು ಹೇಳಿ ಅವನನ್ನು ಆಕ್ಷನ್ ಸೀನಲ್ಲಿ ಉಪಯೋಗಿಸ್ಕೊಳ್ಳ್ತಾರೆ .. ಖಳರೊಂದಿಗೆ ಹೋರಾಡುವ ದೃಶ್ಯ . ಏಟೂ ತಿನ್ನುತ್ತಾನೆ ... ನಂತರ ಇವನನ್ನ ಚಕ್ಕಡಿ ಹಿಂದೆ ಕಟ್ಟಿ ಸುಮಾರು ದೂರ ಎಳೆದುಕೊಂಡು ಹೋಗುತ್ತಾರೆ ...
ಅಷ್ಟು ಹೊತ್ತಿಗೆ ಮಿಥುನ್ ಚಕ್ರವರ್ತಿಯೇ ಅಲ್ಲಿಗೆ ಭಾರೀ ಕಾರೊಂದರಲ್ಲಿ ಬರುತ್ತಾನೆ ... ಅವನಿಗೆ ಮೇಕಪ್ ಮಾದ್ತಾರೆ ... ಬಟ್ಟೆಗೆ ಒಂದಿಷ್ಟು ಮಣ್ಣು , ಧೂಳು ಹಚ್ಚಿ , ಅವನ ಮುಖಕ್ಕೆ ರಕ್ತದ ಎಫೆಕ್ಟ್ ಗಾಗಿ ಟೊಮ್ಯಾಟೋ ಕೆಚಪ್ ಹಚ್ಚಿ ಒಂದೆರಡು ಷಾಟ್ ತೆಗೆಯುತ್ತಾರೆ ... ಆಗ ಅವನ ಅಭಿಮಾನಿ , ನಮ್ಮ ಕಥಾನಾಯಕನಿಗೆ ಇದ್ದಕಿದ್ದಂತೇ ತಾನೇ ಅಸಲೀ ಹೀರೋ , ಮಿಥುನನೇ ತನ್ನ ಡೂಪ್ಲಿಕೇಟ್ ಅನ್ನಿಸಿ ತನ್ನ ಅನನ್ಯತೆಯ ಅರಿವಾಗುತ್ತದೆ ..

ಇದು ಜಯಂತ್ ಕಾಯ್ಕಿಣಿಯವರ ಕಥೆ . ಕತೆಯನ್ನು ಪೂರ್ತಿಯಾಗೇ ಓದಿದರೆ ಒಳ್ಳೇದು . ಕಾರಣಾಂತರದಿಂದ ಓದದವರಿಗೆ ಸಣ್ಣದರಲ್ಲಿ ಹೇಳಿದ್ದೀನಿ .

Rating
No votes yet

Comments