ಮಿಸ್.ಸದಾರಮೆ

ಮಿಸ್.ಸದಾರಮೆ

ಇಂದು ಸಂಜೆ ರವಿಂದ್ರ ಕಲಾ ಕ್ಷೇತ್ರದಲ್ಲಿ ನಮ್ಮ ಸ್ನೇಹಿತರ ಅಹ್ವಾನದಿಂದ ನಾಟಕ ನೋಡಲು ಹೋದೆ ಅಲ್ಲಿ ನಾಟಕ ಬೆಂಗ್ಳೂರು 2008 ರಂಗಭೂಮಿ ಸಂಭ್ರಮ ನಡಿತಾ ಇತ್ತು. ಅದನ್ನು ನೋಡಲು ಹೋದೆ ಈ ದಿನ ಅಲ್ಲಿ ಸಮಸ್ಟಿ ನಾಟಕ ತಂಡದಿಂದ ಮಿಸ್ .ಸದಾರಮೆ ನಾಟಕ ನಡಿಯುತ್ತಿತ್ತು, ಇದನ್ನು ನಿರ್ದೇಶಿಸುತ್ತಿದ್ದವರು ಮಂಜುನಾಥ್ ಎಲ್.ಬಡಿಗೇರ್ ಇವರ ಬಗ್ಗೆ ನಾನು ಮೊದಲೇ ಕೇಳಿದ್ದೆ ಇವರು ನೀನಾಸಂ ರಂಗ ಶಿಕ್ಷಣ ಕೆಂದ್ರದ ಪದವೀದರರಾಗಿದ್ದು, ತಿರುಗಾಟದಲ್ಲಿ ನಟರಾಗಿ ದುಡಿದಿದ್ದಾರೆ. ಉಡಿಪಿಯ ಯಕ್ಷಗಾನ ಕೇಂದ್ರದಲ್ಲಿ ಶಾಸ್ತ್ರೀಯವಾಗಿ ಯಕ್ಷಗಾನವನ್ನು ಅಭ್ಯಾಸ ಮಾಡಿದ ಇವರು ರಾಮನಗರದ ಜಾನಪದ ಲೋಕದಲ್ಲಿ ಜಾನಪದ ಡಿಪ್ಲಮೋ ಮಾಡಿರುತ್ತಾರೆ. ಪ್ರಸ್ತುತ ಬೆಂಗಳೂರಿನ 'ಸಮಸ್ಟಿ' ರಂಗತಂಡದಲ್ಲಿ ನಟರಾಗಿ, ನಿರ್ದೇಶಕರಾಗಿ, ಕಾರ್ಯನಿರ್ವಹಿಸುತ್ತಿದ್ದಾರೆ. ಇದುವರೆಗೂ ಇವರು ಹರಿಣಾಭಿಸರಣ, ಬೊಮ್ಮನಹಳ್ಳಿಯ ಕಿಂದರಿ ಜೋಗಿ, ಕಥನ, ಸಾಫಲ್ಯ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಸಮಸ್ಟಿ ತಂಡ 2000 ರಲ್ಲಿ ಹುಟ್ಟಿಕೊಂಡ ತಂಡ ಇದನ್ನು ಹುಟ್ಟಿ ಹಾಕಿದವರು ಉಡುಪಿ ಮೂಲದ ರವಿಂದ್ರ ಪೂಜಾರಿಯವರು. ಹೊಸ ಪ್ರತಿಭೆಗಳನ್ನು ಹುಡುಕಿ ಅವರಲ್ಲಿ ರಂಗಾಸಕ್ತಿಯನ್ನು ಬೆಳಸುವುದು ಈ ತಂಡದ ಉದ್ದೇಶ. ಇದಕ್ಕಾಗಿ ಹಲವಾರು ಉಚಿತ ರಂಗಶಿಬಿರಗಳನ್ನು ನಡೆಸಿದೆ. ಪ್ರಸ್ತುತ ಇದು ಭಾನುವಾರದ ರಂಗಶಾಲೆಯನ್ನು ಸಹ ಆರಂಭಿಸಿ ಎರಡನೇ ವರ್ಷದ ತರಗತಿಗಳನ್ನು ಸಹ ನಡೆಸುತ್ತಿದೆ. ಈವರೆಗೆ ಇದು ಆಷಾಡದ ಒಂದು ದಿನ, ಸಾಂಬಶಿವ ಪ್ರಹಸನ, ಮೃಚ್ಚಕಟಿಕ, ಹದ್ದು ಮೀರಿದ ಹಾದಿ,ಅಲೆಗಳಲ್ಲಿ ರಾಜಹಂಸಗಳು, ಹರಿಣಾಭಿಸರಣ, ಕಥನ, ಸಾಪಲ್ಯ ಮುಂತಾದ ನಾಟಕಗಳನ್ನು ಯಶಸ್ವಿಯಾಗಿ ರಂಗಕ್ಕೆ ತಂದಿದೆ. ಅದರಲ್ಲೂ ಸಹ ಇದು ಕೆ.ವಿ ಸುಬ್ಬಣ್ಣ ರವರ ರಚನೆಯಾಗಿದ್ದರಿಂದ ನನಗೆ ತುಂಬಾ ಸಂತೋಷವಾಯಿತು. ಒಳಗೆ ಹೋಗುವುದಕ್ಕೆ ಮುಂಚೆ ರವಿಂದ್ರ ಪೂಜಾರಿಯವರನ್ನ ಬೇಟಿ ಮಾಡಿ ತಂಡದ ಬಗ್ಗೆ ಚರ್ಚಿಸಿದೆ ನಂತರ ಹೋಗಿ ನಾಟಕ ನೋಡಿದೆ ನನಗಂತು ಅವರ ನಟನೆಯನ್ನು ನೋಡಿ ಸಂತೋಷವಾಯಿತು. ಅದರಲ್ಲೂ ಪಿ. ಆನಂದ್ ರವರ ಕಳ್ಳನ ಅಭಿನಯದಿಂದ ಎಲ್ಲರಲ್ಲಿ ಚಪ್ಪಾಳೆಯ ಮತ್ತು ಸಿಳ್ಳೆಯ ಸುರಿಮಳೆಯನ್ನು ಸುರಿಸಿತು. ಅಂದಹಾಗೆ ನಾಳೆ ಹಾಸನದಿಂದ ಒಂದು ತಂಡ ಬರುತ್ತಿದೆ ಯಾವುದೇ ಪ್ರವೇಶ ಶುಲ್ಕ ಸಹ ಇಲ್ಲ ನಾಟಕ ಪ್ರಿಯರು ಹೋಗಿ ನೋಡಿ ಆನಂದಿಸಿ.

Rating
No votes yet