ಮೀಸಲಾತಿ: ಭಾರತಕ್ಕೆ ಅಂಟಿದ ಅಭಿಶಾಪವೋ?
೧. ಪ್ರಧಾನಮಂತ್ರಿ: ಗುಜರಾತಿನಲ್ಲಿ ಅಲ್ಪಸಂಖ್ಯಾತರಿಗೆ ಅಭದ್ರತೆ ಕಾಡುತ್ತಿದೆ .
೨. ಕೆಂದ್ರಗ್ರಹ ಮಂತ್ರಿ: ಹಿಂದು ಉಗ್ರರು ದೇಶದ ಶಾಂತಿಗೆ ಭಂಗತರುತಿದ್ದಾರೆ.
೩. ಸರ್ಕಾರೀ ಉದ್ಯೋಗಗಳ ಬಡ್ತಿಯಲ್ಲಿ ಮೀಸಲಾತಿ. ಕೇಂದ್ರದ ಈ ಉದ್ದೆಶೀತ ಕ್ರಮದ ಬಗ್ಗೆ ದೇಶಾದ್ಯಂತ ವಿರೋದ.
೪. ಖಾಸಗಿ ಉದ್ಯಮಗಳಲ್ಲಿಯೂ ಮೀಸಲಾತಿಗೆ ಒತ್ತು.
೫. ಶ್ರೀರಂಗಪಟ್ಟಣದ ಅಲ್ಪಸಂಖ್ಯಾತರ ವಿಶ್ವವಿದ್ಯಾಲಯಕ್ಕೆ "ಟಿಪ್ಪು" ನ ಹೆಸರಿಡಲು ಸರ್ಕಾರದ ತವಕ.
೬. ಕಮಲಹಾಸನ ನಿರ್ದೇಶಿಸಿದ "ವಿಶ್ವರೂಪಂ" ಪ್ರದರ್ಶನಕ್ಕೆ ವಿರೋಧ.
೭. ಅಂಬೇಡ್ಕರ ಪ್ರತಿಮೆ ಸ್ಥಳಾಂತರಿಸಲು ವಿರೋಧ, ಮೆಟ್ರೋ ಕಾಮಗಾರಿ ವಿಳಂಬ.
ದಿನ ಬೆಳಗಾದರೆ ಪತ್ರಿಕೆಗಳಲ್ಲಿ ಮೆಲೆ ಕಂಡುಬರುವ ವಿಷಯಗಳು ಸಾಮಾನ್ಯವಾಗಿಬಿಟ್ಟಿವೆ. ದೇಶದ ಪ್ರಮುಖ ರಾಜಕೀಯ ಪಕ್ಷಗಳು ಕೇವಲ ಅಲ್ಪಸಂಖ್ಯತರನ್ನು ಒಲೈಕೆಯೇ ಸರ್ಕಾರದ ತನ್ನ ಉದ್ದೇಶ ಮಾಡಿಕೊಂಡತ್ತಿದೆ . ಅಲ್ಪಸಂಖ್ಯತರ ಏಳಿಗೆಗೆ ಯಾರದು ವಿರೋಧವಿಲ್ಲ ಆದರೇ ನಮ್ಮ ಘನಸರ್ಕಾರಗಳು ತಮ್ಮ ಅತಿಯಾದ ಕ್ರಮಗಳಿಂದ ದೇಶದ ಒಳಿತನ್ನು ಬಲಿಕೊಡುತ್ತಿದ್ದಾರೆ. ಕೇವಲ ಅಧಿಕಾರಕ್ಕಾಗಿ ದೇಶದ ಒಳಿತನ್ನೇ ಬಲಿಕೊಡುವ ರಾಜಕಾರಣಿಗಳು ಕೇವಲ ಭಾರತದಲ್ಲೇ ಹೆಚ್ಚಾಗಿ ಕಂಡುಬರುವುದು ನಮ್ಮಲ್ಲೆರ ದುರಾದ್ರಷ್ಟವೆ ಸರಿ.
ಅಸ್ಪಶ್ರತೆ ಭಾರತೀಯ ಸಮಾಜಕ್ಕೆ ಅಂಟಿದ ಕಳಂಕ. ಶತಮಾನಗಳಿಂದ ನಡಿದು ಬಂದ ಈ ಕೆಟ್ಟ ಸಂಪ್ರದಾಯ ಸುಮಾರು ಭಾರತೀಯರನ್ನು ಅವರ ಮೂಲಭೂತ ಹಕ್ಕುಗಳಿಂದ ವಂಚನೆ ಮಾಡಿದ್ದು ಒಂದು ವಿಪರ್ಯಾಸವೇ ಸರಿ. ಈ ಅಸತೋಮಲವನ್ನು ಕಿತ್ತುಹಾಕಲು ಸಂವಿಧಾನದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಿಕೊಡಲಾಯಿತು. ಈ ಮೀಸಲಾತಿಯು ಸ್ವಾತಂತ್ರದ ನಂತರ ತನ್ನ ಮೂಲ ಸ್ವರೂಪದಿಂದ ತುಂಬಾ ಬದಲಾವಣೆ ಗೊಂಡಿದೆ, ಈ ಬದಲಾವಣೆ ದೇಶದ ಹಿತಕ್ಕೆ ಮಾರಕವಾಗಿದೆ. ಮುಂದೆ ನನ್ನ ಒಂದು ಸ್ವಂತ ಅನುಭವವನ್ನು ಹಂಚಿಕೊಳ್ಳುತಿದ್ದೇನೆ.
ರಾಮ "ನನ್ನ ಹತ್ತಿರ ಮಾರ್ಕ್ಸ ಇದೆ" ಭೀಮ "ನನ್ನ ಹತ್ತಿರ ಮೀಸಲಾತಿ ಇದೆ" ಇದು ಇಬ್ಬರು ಸ್ನೇಹಿತರ ನಡುವೆ ನಡೆದ ಸಂಭಾಷಣೆ. ಆಗ ತಾನೇ ದ್ವಿತೀಯ ಪಿ.ಯು.ಸಿ ರಿಸಲ್ಟ್ ಬಂದಿತ್ತು. ಪರಿಕ್ಷೆಯಲ್ಲಿ ಕ್ರಮವಾಗಿ ರಾಮ ಮತ್ತು ಭೀಮಗೆ ೮೦%, ೪೫% ಮಾರ್ಕ್ಸ ಬಂದಿತ್ತು. ಕೊನೆಗೆ ಇಬ್ಬರು ಒಂದೇ ಕಾಲೇಜ ನಲ್ಲಿಯೇ ಒಂದೇ ಬ್ರಾಂಚ ಆಯ್ಕೆ ಮಾಡಿಕೊಂಡು ಬಿ.ಇ ಗೆ ಸೇರಿದರು. ರಾಮ ಮನೆಯಲ್ಲಿ ಅರ್ಥಿಕ ಪರಸ್ತಿತಿ ಗಂಭೀರವಾಗಿತ್ತು ಆದರೇ ಭೀಮನು ಶ್ರೀಮಂತ ಮನೆಯಿಂದ ಬಂದಿದ್ದ. ಭೀಮನಿಗೆ ಕಾಲೇಜಿನಲ್ಲಿ ಅವಶ್ಯಕತೆ ಇಲ್ಲದಿದ್ದರೂ ಎಲ್ಲ ರೀತಿಯ ಸೌಲಭ್ಯಗಳು ದೊರೆತವು. ಉಚಿತ ಪುಸ್ತಕಗಳು, ಉಪಕರಣಗಳು.ಇದಲ್ಲದೇ ಕಾಲೇಜಿನ ಫೀ ಕೂಡ ಭೀಮನು ಇತರಿಗಿಂತ ಕಡಿಮೆ ಕೊಡಬೇಕಾಗಿತ್ತು. ಇದು ಇಂದಿನ ಭಾರತೀಯ ಸಾಮಾಜಿಕ (ಅ)ವ್ಯವಸ್ಥೆಯ ಒಂದು ಮುಖವಾಗಿದೆ. ಅವಕಾಶಗಳಿಗೆ ಪ್ರತಿಭೆಯೇ ಮಾನ ದಂಡವಾಗಿರಬೇಕು. ಯೋಗ್ಯತೆ ಇಲ್ಲದ ಅವರಿಗೆ ಅವಕಾಶ ಕೊಟ್ಟರೆ ಅದರಿಂದ ಆಗುವ ಹಾನಿ ದೇಶಕ್ಕೆ ತಾನೇ ?.
ಇದೆ ರೀತಿಯಾಗಿ ತುಂಬಾ ಜನ ಶಿಕ್ಷರಾಗಿ, ವೈದ್ಯರಾಗಿ ಹೊರಬಿಳುತ್ತಿದ್ದಾರೆ ಇಂತಹ ವ್ಯವಸ್ಥಯಿಂದ ಹೇಗೆ ನಮ್ಮ ದೇಶಕ್ಕೆ ಇಂತಹವರು ಯಾವ ರೀತಿಯಾಗಿ ಸೇವೆ ಸಲ್ಲಿಸುವುರೋ ದೇವರಿಗೆ ಗೊತ್ತು. ಇಂದು ಸರ್ಕಾರೀ ಶಿಕ್ಷಣ ವ್ಯವಸ್ಥೆ ಅಧೋಗತಿಗೆ ಜಾರಿದೆ. ಪಾಲಕರು ತಮ್ಮ ಮಕ್ಕಳನ್ನು ದುಬಾರಿಯಾದರೂ ಖಾಸಗಿ ಶಾಲೆಗಳಿಗೆ ಮಾತ್ರ ಸೇರಿಸುತ್ತಿದ್ದಾರೆ. ಯಾಕೆ ಹೀಗೆ? ಅಂತ ನಮ್ಮ ಸರ್ಕಾರ ಅವಲೋಕನ ಮಾಡುವುದೇ ಇಲ್ಲಾ. ಶಾಲಾ ಶಿಕ್ಷಕರ ಆಯ್ಕೆ ಯನ್ನು ಕೇವಲ ಪ್ರತಿಭೆ ಮೇಲೆ ಆಯ್ಕೆ ಮಾಡಿದರೆ ಸರ್ಕಾರಿ ಶಾಲೆಗಳು ಕೂಡ ಮಾದರಿ ಶಾಲೆಗಳಾಗುವಲ್ಲಿ ಯಾವುದೇ ಸಂದೇಹವೇ ಇಲ್ಲಾ. ಇದರಿಂದ ಖಾಸಗಿ ಶಾಲೆಗಳು ಶಿಕ್ಷಣದ ನೆಪದಲ್ಲಿ ಪಾಲಕರನ್ನು ಸುಲಿಯುವುದು ತಪ್ಪಿಸಬಹುದು. ನಾವೆಲ್ಲಾ ಸರ್ಕಾರಿ ಶಾಲೆಗಳಲ್ಲಿಯೇ ಓದಿದ್ದು ಆದರೆ ಅಂದು ಶಿಕ್ಷರ ಗುಣಮಟ್ಟ ಉತ್ತಮವಾಗಿತ್ತು.
ವೈದ್ಯೋನಾರಾಯಣ ಹರಿ ಎಂದು ನಮ್ಮ ಪೂರ್ವಿಕರು ಹೇಳಿದ್ದರು. ಆದರೆ ಇಂದು ಭಾರತದಲ್ಲಿ ಆಸ್ಪತ್ರಗೆ ಹೋಗಿ ಸುರಕ್ಷಿತವಾಗಿ ವಾಪಸ ಬಂದರೆ ಅದು ಒಂದು ದೊಡ್ಡ ಅಚ್ಚರಿಯೇ ಸರಿ. ವೈದ್ಯರ ನಿರ್ಲ್ಕಷ್ಯದಿಂದ ಸಾಯುವ ಸಾಮಾನ್ಯ ಜನರ ಲೆಕ್ಕವೇ ಇಲ್ಲಾ. ಅದೇ ನಮ್ಮ ರಾಜಕಾರಣಿಗಳು ತಮ್ಮ ಆರೋಗ್ಯದಲ್ಲಿ ಏರುಪೇರಾದರೆ ಅಮೆರಿಕಾಕ್ಕೆ ಹಾರಿ ಬಿಡುತ್ತಾರೆ. ಏಕೆಂದರೆ ಅವರಿಗೊತ್ತು ಭಾರತದ ವೈದ್ಯರ ಗುಣಮಟ್ಟ ಎಂತಹದು ಅಂತ.
ಈ ತರಹದ ಮೀಸಲಾತಿ ವ್ಯವಸ್ಥೆ ಪ್ರಪಂಚದ ಯಾವುದೇ ದೇಶದಲ್ಲಿ ಇಲ್ಲ. ಅಮೇರಿಕದಲ್ಲೂ ಕೂಡ ಆಫ್ರಿಕ ಮೂಲದ ಜನರು ಶೋಷಣೆಗೆ ಒಳಗಾಗಿದ್ದರು ಆದರೆ ಆ ದೇಶದಲ್ಲಿ ಇಂದು ಕೇವಲ ಪ್ರತಿಭೆಯೇ ಅವಕಾಶಗಳಿಗೆ ಮಾನದಂಡ ಆಗಿದೆ. ಇಂದು ಅದೇ ಆಫ್ರಿಕನ ಮೂಲದ ವ್ಯಕ್ತಿ ದೇಶದ ರಾಷ್ಟ್ರಪತಿಯಾಗಿ ಆಳುತ್ತಿರುವುದು ನಾವೆಲ್ಲರೂ ನೋಡುತಿದ್ದೇವೆ. ಒಬಾಮಾ ತನ್ನ ಪ್ರತಿಭೆಯಿಂದ ಮಾತ್ರ ಉನ್ನತ ಸ್ಥಾನವನ್ನು ಏರಿದ್ದು. ಅಮೆರಿಕಾವನ್ನು ಅವಕಾಶಗಳ ದೇಶ ಎಂದು ಕರೆಯಲು, ಏನು ಕಾರಣ ಎಂದು ಅರ್ಥ ಮಾಡಿಕೊಳ್ಳಲು ಇದಕ್ಕಿಂತ ಒಳ್ಳೆ ಉದಾಹರಣೆ ಬೇಕಿಲ್ಲ. ಇಂದು ಆಫ್ರಿಕನ ಮೂಲದ ಜನರು ಅಮೇರಿಕಾದಲ್ಲಿ ಸವರ್ಣಿಯರ ಜೊತೆಗೆ ಪ್ರತಿವಿಭಾಗದಲ್ಲಿಯು ಸರಿಸಾಟಿಯಾಗಿ ದುಡಿಯುತಿದ್ದಾರೆ.
ಇಂದು ಅಮೇರಿಕಾ ತಂತ್ರಜ್ಞಾನದಲ್ಲಿ ಸ್ವಾವಲಂಬಿಯಾಗಿದೆ, ಇದರಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಅಪಾರ.ನಾವು ಇಂದಿಗೂ ನಮ್ಮ ದೇಶದ ರಕ್ಷಣೆಗಾಗಿ ಅಮೇರಿಕಾ, ಇಸ್ರೇಲ, ರಶಿಯಾ ಮತ್ತು ಫ್ರಾನ್ಸ್ ದೇಶಗಳ ತಂತ್ರಜ್ಞಾನದ ಮೊರೆ ಹೋಗಬೇಕಾಗಿದೆ. ಅದೇ ನಾವು ನಮ್ಮ ದೇಶದಿಂದ ಬೇರೆ ದೇಶಗಳಿಗೆ ಅವಕಾಶಗಳನ್ನು ಹುಡುಕಿಕೊಂಡು ಹೋದ ಪ್ರತಿಭೆಗೆಗಳಿಗೆ ಸೂಕ್ತ ಅವಕಾಶ ಮಾಡಿಕೊಟ್ಟಿದ್ದರೆ ಇಂದು ನಾವು ನಮ್ಮ ರಕ್ಷಣೆಗಾಗಿ ಸಾವಿರಾರು ಕೋಟಿ ರುಪಾಯಿಗಳನ್ನು ಸುರಿಯುವ ಪ್ರಮೇಯವೇ ಬರುತಿರಲಿಲ್ಲ.
ನಮ್ಮ ದೇಶದಲ್ಲಿ ಇಂದು ನಾವು ಕೂಡ ಅನುಸರಿಸಬೇಕಾಗಿದ್ದು ಇದನ್ನೇ ಶೋಷಿತ ವರ್ಗದ ಜನರ ಸಬಲೀಕರಣ.
ಆದರೆ ಉದ್ಯೋಗದ ಅವಕಾಶಗಳು ವ್ಯಕ್ತಿಯ ಯೋಗ್ಯತೆಯ ಆಧಾರದ ಮೇಲೆ ದೊರೆಯಬೇಕು. ರತನ ಟಾಟಾ ಕೂಡ ಮೊನ್ನೆ ಹುಬ್ಬಳ್ಳಿಯಲ್ಲಿ ಹೇಳಿದ್ದು ಇದನ್ನೇ.
ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಶೊಷಣೆಯನ್ನು ಹೋಗಲಾಡಿಸಲು ಹಲವಾರು ಸಾಮಾಜಿಕ ಸುಧಾರಕರು ನಮ್ಮ ಇತಿಹಾಸದಲ್ಲಿ ಕಂಡು ಬರುತ್ತಾರೆ. ೧೨ನೇ ಶತಮಾನದಲ್ಲಿ ಬಸವಣ್ಣ ಶೋಷಿತರ ಏಳಿಗೆಗೆ ಕ್ರಾಂತಿಯ ಕಹಳೆಯನ್ನು ಊದಿದ ಹರಿಕಾರ. ಬಸವಣ್ಣ ಮಾಡಿದ ಸುಧಾರಣೆಗಳನ್ನು ಅವಲೋಕಿಸಿದರೆ ನಮಗೆ ಗೋಚರವಾಗುವ ಅಂಶ ಏನೆಂದರೆ ಸಬಲೀಕರಣ. ಅವರು ಶಿಕ್ಷಣದ( ವಚನ ಸಾಹಿತ್ಯ) ಸಹಾಯದಿಂದ ಕ್ಲಿಷ್ಟವಾದ ವೇದಗಳ ಸಾರವನ್ನು ಸಾಮಾನ್ಯ ಜನರಿಗೆ ಅರುಹಿದರು. ಜನರನ್ನು ಜಾತೀಯ ಆಧಾರದ ಮೇಲೆ ಭೇದಭಾವ ಮಾಡದೇ, ಎಲ್ಲರು ಒಂದೇ ಎಂದರು. ಕಾಯಕವೇ ಕೈಲಾಸ ಎಂದು ಭೋದಿಸಿದರು. ಮಾಡುವ ಕೆಲಸದಿಂದ ಯಾರನ್ನು ಕೀಳಾಗಿ ಕಾಣ ಕುಡದು ಎಂದು ಹೇಳಿದರು.
ಇನ್ನು ಒಂದು ಒಳ್ಳೆ ನಿದರ್ಶನ "ಚಂದ್ರಗುಪ್ತ ಮೌರ್ಯನ"ದು. ದಾಸಿಯ ಮಗನಾಗಿದ್ದರು ಚಾಣಕ್ಯನ ಸೂಕ್ತ ಮಾರ್ಗದರ್ಶನದಿಂದ ಅಖಂಡ ಭಾರತವನ್ನು ಆಳಿದ ಪ್ರಥಮ ಚಕ್ರವರ್ತಿ ಹೆಗ್ಗಳಿಕೆ ಅವನಿಗೆ ಸೇರುತ್ತದೆ. ಚಾಣಕ್ಯನು ಚಂದ್ರಗುಪ್ತನನ್ನು ಚಿಕ್ಕನಿಂದಲೇ ಒಬ್ಬ ರಾಜನಿಗೇ ಬೇಕಾದ ಶಿಕ್ಷಣ ಮತ್ತು ಯುದ್ದ ತರಬೇತಿ ನೀಡಿದನು.
ಹಿಂದು ಸಂಸ್ಕ್ರತಿಯ ಅಧಾರ ಸ್ತಂಭಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಕ್ರತಿರೂಪದಲ್ಲಿ ತಂದಿದ್ದು ವಾಲ್ಮೀಕಿ ಮತ್ತು ವ್ಯಾಸ ಮಹರ್ಷಿಗಳು. ವಾಲ್ಮೀಕಿ ಜನ್ಮದಿಂದ ಬೆಟೆಗಾರನಾಗಿದ್ದರು ನಾರದ ಮಹರ್ಷಿಯ ಆಶೀರ್ವಾದದಿಂದ ಶ್ರೇಷ್ಠ ಮಹರ್ಷಿ ಆದರು. ವ್ಯಾಸ ಮಹರ್ಷಿಯ ತಾಯಿ ಸತ್ಯವತಿ ಒಬ್ಬ ಬೆಸ್ತರ ಮಗಳಾಗಿದ್ದಳು.
ಕೇವಲ ಉಚ್ಚ ಕುಲದಲ್ಲಿ ಹುಟ್ಟಿದರೆ ಮಾತ್ರ ಸಾಧನೆ ಮಾಡಬೇಕು ಅಂತೆನಿಲ್ಲ. ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಸಿಕ್ಕರೆ ಎಲ್ಲರು ಸಾಧಕರಾಗಬಹುದು.
ಇಂದು ಮೀಸಲಾತಿಯ ಮತ್ತು ಸರ್ಕಾರಗಳ ಮ್ರದು ಧೋರಣೆಯಿಂದ ಕೆಲವರಿಗೆ, ಆವರುಗಳು ಹೇಳಿದ್ದೆ ಮಾತು ಮತ್ತು ಮಾಡಿದ್ದೆ ದಾರಿ ಎಂಬಂತಾಗಿದೆ. ಲೇಖನದ ಆರಂಭದಲ್ಲಿ ಕಂಡು ಬರುವ ಘಟನೆಗಳೇ ಇದಕ್ಕೆ ಸಾಕ್ಷಿ. ಈ ರೀತಿಯ ಬೆಳವಣಿಗೆ ನಮ್ಮ ದೇಶಕ್ಕೆ ತುಂಬಾ ಆಘಾತಕಾರಿ.
ನಮ್ಮ ದೇಶವನ್ನು ನಾವು ಜಾತ್ಯತೀತ ರಾಷ್ಟ್ರವೆಂದು ಹೇಳಿಕೊಳ್ಳುತ್ತೇವೆ, ಆದರೇ ನಮ್ಮ ಸವಿಂಧಾನ ಮತ್ತು ಸರ್ಕಾರಗಳೇ ಶಿಶುವಿನ ಜನನದೊಂದಿಗೆ ಜಾತಿಯ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಕಾರ್ಯ ಆರಂಭಿಸುತ್ತವೆ. ಜನನ ಧಾಖಲೆಯೊಂದಿಗೆ ಪ್ರಾರಂಭವಾಗುವ ಈ ಪ್ರಹಸನ ಕೊನೆಗೆ ಮರಣದ ಪ್ರಮಾಣ ಪತ್ರದೊಂದಿಗೆ ಮುಗಿಯತ್ತದೆ. ಇಂತಹ ವಿಡಂಬನೆ ನಮ್ಮ ದೇಶದಲ್ಲಿ ಮಾತ್ರ ಸಾಧ್ಯ.
ಇಂದು ನಮ್ಮ ದೇಶದಲ್ಲಿ ಅತ್ಯವಶಕ ಸುಧಾರಣೆಗಳು ಎಂದರೆ
೧.ಸರ್ಕಾರೀ ಉದ್ಯೊಗಳಲ್ಲಿ ಎಲ್ಲ ರೀತಿಯ ಮೀಸಲಾತಿಯನ್ನು ನಿಧಾನವಾಗಿ ತೆಗೆದುಹಾಕುವುದು, ಇದರಿಂದ ಸರ್ಕಾರೀ ಸೌಮ್ಯದ ಉತ್ಪಾದಕತೆ ತಾನಾಗಿಯೇ ಹೆಚ್ಚುಹುದು.
----ಇದರಿಂದ ದೇಶದ ಸರ್ವೋತೊಮುಖ ಬೆಳವಣಿಗೆ ಸಾಧ್ಯ.
೨. ಹಿಂದುಳಿದ ವರ್ಗದ ಜನರೊಂದಿಗೆ ಇತರೇ ಆರ್ಥಿಕವಾಗಿ ಹಿಂದುಳಿದ ಇತರೆ ಬಹುಸಂಖ್ಯಾತರಿಗೂ ಸರ್ಕಾರೀ ಸೌಲಭ್ಯಗಳನ್ನು ನೀಡುವುದು.
Comments
ಜಾತಿ, ಮತ ಆಧಾರಿತ ನೀತಿಗಳು,
ಜಾತಿ, ಮತ ಆಧಾರಿತ ನೀತಿಗಳು, ನಡೆಗಳು ಮಾನವರಲ್ಲಿ ಭಿನ್ನತೆಯನ್ನು ಪೋಷಿಸುತ್ತವೆ. ಅಭಿವೃದ್ಧಿ ಹೊಂದಲು ಸಮಾನ ಅವಕಾಶಗಳು ಎಲ್ಲರಿಗೂ ಯಾವುದೇ ಬೇಧವಿರದಂತೆ ಸಿಗಬೇಕು. ಜಾತಿ ಆಧಾರದಲ್ಲಿ ತಾರತಮ್ಯ ಸಲ್ಲದು.
+1
+1
ಉತ್ತಮ ವಿಚಾರಯುಕ್ತ ಲೇಖನ
ಉತ್ತಮ ವಿಚಾರಯುಕ್ತ ಲೇಖನ ಚಿಕ್ಕು. ಪ್ರತಿಯೊಬ್ಬ ಭಾರತೀಯನೂ ವಿಚಾರವನ್ನು ಅರ್ಥೈಸಿ ನಡೆಯಬೇಕು. ನಮ್ಮ ನಾಯಕರುಗಳೂ ಅಷ್ಟೆ , ತಮ್ಮ ಸ್ವಾರ್ಥ ಸಾಧನೆಯನ್ನು ಮರೆತು ಕಿ0ಚಿತ್ತಾದರೂ ದೇಶ ಪ್ರೇಮ ಹಾಗೂ ಪ್ರಜಾ ಹಿತವನ್ನು ಬೆಳೆಸಿಕೊಳ್ಳಬೇಕು. ಕುಳಿತಲ್ಲೆ ಸೌಲಭ್ಯ ಒದಗಿಸುವುದರಿ0ದ ಜನರಿಗೆ ಒಳಿತು ಮಾಡಿದ0ತಾಗುವುದಿಲ್ಲ, ಬದಲಿಗೆ ಅವರೇ ಸ್ವ0ತ ದುಡಿದು, ಸೌಲಭ್ಯಗಳನ್ನು ಮಡಿಕೊ0ಡು, ತಿನ್ನುವ ದಾರಿ ತೋರಿಸಬೇಕು. ಆಗ ಆ ನಾಯಕ ಜನಾನುರಾಗಿಯಾಗುತ್ತಾನೆ. ಅಲ್ಲದೆ ದೇಶವೂ ಸುಭಿಕ್ಷವಾಗುತ್ತದೆ.
ಧನ್ಯವಾದಗಳು, ರಾಮೋ.
In reply to ಉತ್ತಮ ವಿಚಾರಯುಕ್ತ ಲೇಖನ by RAMAMOHANA
ಧನ್ಯವಾದಗಳು ರಾಮ.
ಧನ್ಯವಾದಗಳು ರಾಮ.
ಅಮೇರಿಕಾದಲ್ಲಿ ಮೀಸಲಾತಿ ಇಲ್ಲ ಎಂಬ
ಅಮೇರಿಕಾದಲ್ಲಿ ಮೀಸಲಾತಿ ಇಲ್ಲ ಎಂಬ ನಿಮ್ಮ ಹೇಳಿಕೆಗೆ ಆಕರ ಎಲ್ಲಿಯದು ಎಂದು ಗೊತ್ತಾಗುತ್ತಿಲ್ಲ. ಆದರೆ ಅದು ತಪ್ಪು ಮಾಹಿತಿ.
ಅಂತೆಯೇ ಒಬಾಮಾ ತಾವು Affirmative actionನ ಫಲಶೃತಿ ಎಂದು ಹೇಳಿಕೊಂಡಿದ್ದಾರೆ. ಈ ಕೆಳಗಿನ ಕೊಂಡಿಗಳನ್ನು ಗಮನಿಸಿ...
http://en.wikipedia.org/wiki/Racial_quota
http://en.wikipedia.org/wiki/Civil_Rights_Act_of_1964
http://en.wikipedia.org/wiki/Affirmative_action_in_the_United_States
In reply to ಅಮೇರಿಕಾದಲ್ಲಿ ಮೀಸಲಾತಿ ಇಲ್ಲ ಎಂಬ by ರಾಮಕುಮಾರ್
ನಿಮ್ಮ ಪ್ರತಿಕ್ರಿಯೆಗೆ ತುಂಬಾ
ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ರಾಮ. ನಾನು ಅರ್ಥ ಮಾಡಿಕೊಂಡ ಹಾಗೆ ಭಾರತೀಯ ಮೀಸಲಾತಿ ಮತ್ತು ಅಮೆರಿಕಾದ Affirmative action ಎರಡಕ್ಕೂ ಅಜಾಗಜಾಂತರ ವ್ಯತ್ಯಾಸ ಇದೆ. Affirmative action ಯಾವುದೇ ವ್ಯಕ್ತಿ ಒಂದು ಹುದ್ದೆಗೆ ಯೋಗ್ಯನಗಿದ್ದರೆ ಅವನನ್ನು ಜಾತಿ, ಬಣ್ಣಗಳ ಆಧಾರದ ಮೇಲೆ ಆ ಅವಕಾಶವನ್ನು ನಿರಾಕರಿಸಬಾರದು ಎಂದು ಹೇಳುತ್ತದೆ. ಆದರೆ ನಮಲ್ಲಿ ಜಾತಿಯೇ ಆಯ್ಕೆಗೆ ಮುಖ್ಯ ಆಧಾರವಗಿರುತ್ತದೆ , ಯೋಗ್ಯತೆ ಆಮೇಲೆ ಬರುತ್ತದೆ.
Main article: Affirmative action in the United States
Affirmative action was first created from Executive Order 10925, which was signed by President John F. Kennedy on 6 March 1961 and required that government employers "not discriminate against any employee or applicant for employment because of race, creed, color, or national origin" and "take affirmative action to ensure that applicants are employed, and that employees are treated during employment, without regard to their race, creed, color, or national origin".[14]