ಮುಂಗಾರು ಮಳೆ ಭಟ್ಟರ ಹಾಡಿನ ಗುಂಗು...

ಮುಂಗಾರು ಮಳೆ ಭಟ್ಟರ ಹಾಡಿನ ಗುಂಗು...


ಮುಂಗಾರು ಮಳೆಗೆ ಹೊಸ ರೂಪಕೊಟ್ಟ ಯೋಗರಾಜ್ ಭಟ್ಟರಿಗೆ ಹಾಡಿನ ಗುಂಗು ಜಾಸ್ತಿಯಿದೆ.ಕನ್ನಡ ಚಿತ್ರಗೀತೆಗಳು ಬರೆಯುವುದು ಗೊತ್ತೆಯಿದೆ. ಆದ್ರೆ, ಹಿಂದಿ ಚಿತ್ರದ ಆ ಸೆಳತೆ ತುಂಬಾನೆ ಇದೆ. ಗುಲ್ಜಾರ್ ಅವರ ಗೀತೆಗೆ ಇವರು ತಮ್ಮದೇ ಶೈಲಿಯ ಟಚ್ ಕೊಟ್ಟಿದ್ದಾರೆ. ನಾಸೀರುದ್ದೀನ್ ಷಾ, ವಿದ್ಯಾಬಾಲನ್, ಅರ್ಷದ್ ಅಭಿನಯದ ಇಷ್ಕಿಯಾ ಚಿತ್ರದ ಹಾಡೊಂದು ಭಟ್ಟರಿಗೆ ತುಂಬಾನೆ ಇಷ್ಟವಾಗಿದೆ.ಅದಕ್ಕೇನೆ ಅಂತಹ ಅದ್ಭುತ ಸಾಹಿತ್ಯದ ಗೀತೆಯನ್ನ ಭಟ್ಟರು ಕನ್ನಡದಲ್ಲಿ ಬರೆದುಕೊಂಡಿದ್ದಾರೆ.ಅಷ್ಟೇಅಲ್ಲ, ಪಂಚರಂಗಿ ಚಿತ್ರದ ಹಾಡಿನ ಕೆಲಸದ ಸಮಯದಲ್ಲಿ ಅದನ್ನ ಗಾಯಕ ಚೇತನ್ ಬಳಿ ಹಾಡಿಸಿದ್ದಾರೆ...


 ಇಷ್ಟಕ್ಕೆ ಮುಗಿದಿದ್ದರೆ ಭಟ್ಟರ ಹಾಡಿನ ಪ್ರೀತಿ ಗೊತ್ತಾಗಿರುತ್ತಿತ್ತೋ ಇಲ್ವೊ. ಇಷ್ಕಿಯಾ ಚಿತ್ರದ ಹಿಂದಿ ಹಾಡಿಗೆ ಕನ್ನಡದ ಸಾಹಿತ್ಯವನ್ನು ಮ್ಯಾಚ್ ಕೂಡ ಮಾಡಲಾಗಿದೆ. ಹಾಗೆ ಸಿದ್ಧವಾದ ಹಿಂದಿ ದೃಶ್ಯದ ಕನ್ನಡದ ಹಾಡು ಸದ್ಯ ಫೇಮಸ್. ಫೇಮಸ್ ಅಂದರೆ, ಭಟ್ಟರು ಇದನ್ನ ತಮ್ಮ ಪಂಚರಂಗಿಗಾಗಿ ಬಳಸುತ್ತಿಲ್ಲ. ಬದಲಿಗೆ ಯುಟ್ಯೂಬ್ ನಂತಹ ಸೈಟ್ ನಲ್ಲಿ ಇದು ಎಲ್ಲರ ಗಮನ ಸೆಳೆಯುತ್ತಿದೆ. ಕನ್ನಡದ ಹಾಡಿನಷ್ಟೆ ಮಾಧುರ್ಯತೆ ಆ ಹಾಡಿಗೆ ಬಂದು ಬಿಟ್ಟಿದೆ.ಹಾಗೆ ಭಟ್ರು ಬರೆದ ಹಾಡಿನ ಸಾಲು ಒಮ್ಮೆ..ಇನ್ನೊಮ್ಮೆ ಅಂತಲೆ ಗುಂಗು ಹಿಡಿಸುತ್ತವೆ...ನನ್ನ ಬೆನ್ನಲ್ಲಿಯ ಕಣ್ಣೆಲ್ಲ ನಿನ್ನ ಕಡೆ...ಅಂತಲೇ ಕನ್ನಡಿಗರ ಗಮನ ಸೆಳೆಯುತ್ತಿದೆ ಈ ಹಾಡು..


 ಆದ್ರೆ, ಗುಲ್ಜಾರ್ ಅವರ ಗೀತೆಗೂ..ಭಟ್ರ ಕನ್ನಡ ಗೀತೆಗೆ ಹೋಲಿಕೆ ಇದ್ದೇ ಇದೆ. `ದಿಲ್ ತೋ ಬಚ್ಚಾ ಹೈಜೀ' ಅಂತ ಗುಲ್ಜಾರ್  ಬರೆದುಕೊಡ್ತಾರೆ. ಭಟ್ರು ಅದನ್ನ `ಹೃದಯ ಸಣ್ಣ ಮಗು' ಅಂತ ಹೇಳ್ತಾರೆ.ಇವೆರಡರಲ್ಲೂ ಸರಿಯಾದ ಸೆಳೆತವಿದೆ.ಹಾಗಂತ ಇಡೀ ಹಾಡಿಗೆ ಹಾಡೇ ಇಲ್ಲಿ ಕನ್ನಡಕ್ಕೆ ಬಂದಿಲ್ಲ. ಹಿಂದಿಯ ಭಾವ ಬಿಡದೇನೆ ಕನ್ನಡದ ಪದ್ಯದಂತೆ  ಯೋಗರಾಜ್ ತಮ್ಮ ಹಿಂದಿಯ ಹಾಡಿನ ಪ್ರೀತಿಯನ್ನ ಇಲ್ಲಿ ತೋರಿದ್ದಾರೆ ಅಂತ  ಹೇಳಬಹುದು.


 ಯೋಗರಾಜ್ ಭಟ್ಟರ ಈ ಹಿಂದಿ ಗೀತೆಯ ಕನ್ನಡ ಹಾಡನ್ನ ಒಮ್ಮೆ ಕೇಳಲೇಬೇಕು.ಕಾರಣ ಹಾಡಿನ ಸಂಗೀತಕ್ಕೆ...ಬಳಸಿದ ಪದಗಳಿಗೆ...ಚೇತನ್ ಹಾಡಿನ ಭಾವಕ್ಕೆ ಸರಿಯಾಗಿಯೆ ಹೊಂದಾಣಿಕೆಯಾಗಿದೆ. ಅದ್ದರಿಂದಲೋ ಏನೋ.ಯೂಟ್ಯೂಬ್ ನಲ್ಲಿ ಇದನ್ನ ಕೇಳುವ  ಮಂದಿ ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ದಿಲ್  ತೋ ಬಚ್ಚಾ ಹೈ ಜೀ ಕನ್ನಡ ಸಾಂಗ್ ಅಂತ ಇಂಗ್ಲಿಷ್ ನಲ್ಲಿ ಟೈಪ್ ಮಾಡಿದರೇ ಸಾಕು. ಕನ್ನಡದ ಇಷ್ಕಿಯಾ ಹಾಡು ಹಾಜರ್. ಕೇಳಿ ನೀವೂ ಎಂಜಾಯ್ ಮಾಡಿ. ನಾನಂತು ಸರಿ ಸುಮಾರು ಹಲವು ಬಾರಿ ಕೇಳಿದ್ದೇನೆ. ಅದರ ಗುಂಗು ಇನ್ನು ಹೋಗ್ತಾಯಿಲ್ಲ. ಅದಕ್ಕೇನೆ ಇಲ್ಲಿ ಆ ಎಲ್ಲ ಸೆಳೆತವನ್ನ ಬರೆದು ಹೊರ ಬರಲು ಪ್ರಯತ್ನಿಸುತ್ತಿದೇನೆ....


-ರೇವನ್ ಪಿ.ಜೇವೂರ್

Rating
No votes yet

Comments