ಮುಂಗಾರು ಮಳೆ ಸಂಭಾಷಣೆ ಐ.ಟಿ ನೌಕರನ ಮಾತಲ್ಲಿ.
Ganesh's Mungaaru Male Hero DIALOUGE IF HE IS WORKING IN MNC... (May be with lady Manager!!!)
ನಿಮ್ಮ ಟ್ರೇನಿಂಗು, ನಿಮ್ಮ ಪ್ರೊಜೆಕ್ಟು, ನಿಮ್ಮ ಮಾತು, ನಿಮ್ಮ ಆನ್ಸೈಟು,ಈ ಬಿಕನಾಸಿ ಅಪ್ರೈಸಲ್ಲು, ಆ ಸುಪರ್‍ವೈಸರ್ ಬೈಗುಳ,ಆ ಟಾರ್ಗೆಟ್ಸು, ಆ ಟೀಮ್ ಮೀಟಿಂಗ್ಸು,ಅದರಜ್ಜಿ ಕಸ್ಟಮರ್ ಫೋನ್ ಮಾಡೋ ಸದ್ದು ಎಲ್ಲಾ ಸೇರಿ ನನ್ನ ಕರಿಯರ್ ನಲ್ಲಿ ರಿಪೇರಿ ಮಾಡಕ್ಕಾಗ್ದೆ ಇರುವಷ್ಟು ಗಾಯ ಮಾಡಿಬಿಟ್ಟಿದೆ ಕಣ್ರಿ.
ನಂಗೊತ್ತಾಯ್ತು ಕಣ್ರಿ ನಂಗೆ ಹೈಕ್ ಸಿಗಲ್ಲಾ ಅಂತ..ಬಿಟ್ಕೊಟ್ಬಿಟ್ಟೆ ಕಣ್ರಿ...
ಕತ್ತೆ ತರ ದುಡಿದು ’ಅಸೋಸಿಯೇಟ್ ಆಫ್ ದ ಇಯರ್’ ಅನ್ನಿಸಿಕೊಳ್ಳೋದಕ್ಕಿಂತ ಒಬ್ಬ ಡೀಸೆಂಟ್ ಪರ್ಫಾರ್ಮರ್ ಆಗಿ ಇದ್ದುಬಿಡಬೇಕು ಅಂತ ಅನಿಸಿಬಿಟ್ಟಿದೆ ಕಣ್ರಿ..ಆದರೆ ಒಂದು ವಿಷ್ಯ ನೆನಪಿಟ್ಟುಕೊಳ್ಳಿ ನನಷ್ಟು ಈ ಕೆಲಸಾನ ಇಷ್ಟು ನೀಯತ್ತಾಗಿ ಮಾಡೋರು ಈ ಇಂಡಸ್ಟ್ರೀನಲ್ಲೇ ಯಾರು ಸಿಕ್ಕಲ್ಲಾ ಕಣ್ರಿ..
ಥ್ಯಾಂಕ್ಸ ಕಣ್ರಿ , ಅಪ್ರೈಸಲ್ ವಿಷ್ಯದಲ್ಲಿ ನನ್ ಕಣ್ತೆರೆಸಿದ ದೇವತೆ ಕಣ್ರಿ ನೀವು..ಈ ಕಣ್ಣು ಕ್ಲೋಸ್ ಆಗಿ ಮಣ್ಣು ಸೇರಿದ್ಮೇಲೂ, ನಾನು ಈ ಉಪಕಾರಾನ ಮರೆಯಲ್ಲ ರೀ...ಒಳ್ಳೆ ರೇಟಿಂಗ್ ಸಿಗಲಿಲ್ಲಾ ಅಂತ ನನಗೆನು ಬೇಜಾರ್ ಇಲ್ಲಾ ರೀ...ನಿಮ್ಮ ಪ್ರೊಜೆಕ್ಟನಲ್ಲಿದ್ದಾಗ ಕೊಟ್ರಲ್ಲಾ ಆ ನೂರು(೧೦೦)ದಿನಗಳು, ಅಷ್ಟು ಸಾಕು ಕಣ್ರಿ ಅದೇ ನೆನಪಲ್ಲಿ ಈ ಜೀವನ ತಳ್ಳಿ ಬಿಡ್ತೀನಿ..
ಲೈಫಲ್ಲಿ ಈ ಲೆವೆಲ್ಲಿಗೆ ಕನ್ಫೂಸ್ ಆಗಿದ್ದು ಇದೆ ಮೊದ್ಲು ಕಣ್ರೀ..ಎಲ್ಲಾ ನಿಮ್ಮ ಆಶಿರ್ವಾದ...
ಅರ್ಥ ಆಗಲಿಲ್ಲವಾ? ಆಗೋದು ಬೇಡಾ ಬಿಡಿ...
Comments
ಉ: ಮುಂಗಾರು ಮಳೆ ಸಂಭಾಷಣೆ ಐ.ಟಿ ನೌಕರನ ಮಾತಲ್ಲಿ.
In reply to ಉ: ಮುಂಗಾರು ಮಳೆ ಸಂಭಾಷಣೆ ಐ.ಟಿ ನೌಕರನ ಮಾತಲ್ಲಿ. by balaglobal
ಉ: ಮುಂಗಾರು ಮಳೆ ಸಂಭಾಷಣೆ ಐ.ಟಿ ನೌಕರನ ಮಾತಲ್ಲಿ.
ಉ: ಮುಂಗಾರು ಮಳೆ ಸಂಭಾಷಣೆ ಐ.ಟಿ ನೌಕರನ ಮಾತಲ್ಲಿ.