ಮುಂಗಾರು ಮಳೆ v/s ಚಿಗುರಿದ ಕನಸು
ನನ್ನನ್ನು ಬಹಳ ದಿನದಿಂದ ಕಾಡುತಿರುವ ಪ್ರಶ್ನೆ ಇದು
ಒಂದು ಕನ್ನಡ ಚಿತ್ರ ಸೊಗಸಾದ ಚಿತ್ರ
ಚಿಗುರಿದ ಕನಸು
ಶಿವರಾಮ ಕಾರಂತರ ಕಾದಂಬರಿ ಆಧಾರಿತ ಚಿತ್ರ ಅದು
ಶಿವರಾಜ್ ಕುಮಾರ್ ರವರ್ ಅಭಿನಯದಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿದೆ. ನಾನು ಆಗ ಆ ಚಿತ್ರವನ್ನು ಎರೆಡು ಸಲ ನೋಡಿದ್ದೆ.
ನಂತರ ಆ ಚಿತ್ರ ಟಿ.ವಿಯಲ್ಲಿ ಸುಮಾರು ಬಾರಿ ಪ್ರಸಾರವಾಗಿದೆ.
ಹೊರರಾಜ್ಯದ ಯುವಕನೊಬ್ಬನ ಮೂಲ ನಮ್ಮ ಕರ್ನಾಟಕದ ಬಂಗಾಡಿ ಎಂಬ ಊರಿನದಾಗಿದ್ದು , ಅದನ್ನು ಹುಡುಕಿಕೊಂಡು ಬರುವ ಆತ ತನ್ನ ಊರನ್ನು ಅಭಿವೃದ್ದಿಗೊಳಿಸಲು ಪಡುವ ಕಷ್ಟ . ಅದನ್ನು ವಿಫಲ ವಾಗಿಸಲು ಅದೇ ಊರಿನ ಮುಖಂಡನೊಬ್ಬ ಮಾಡುವ ಸಂಚು ಅದನ್ನು ಮೆಟ್ಟಿ ನಿಲ್ಲುವ ನಾಯಕ
ಇವುಗಳ ಮಧ್ಯೆ ಕಣ್ ತಣಿಸುವ ನಿಸರ್ಗ ಚೆಲುವು. ಹಳ್ಳಿಯವರ ಮುಗ್ಧತೆ ನಾಯಕನ ಅಜ್ಜಿಯ ಅಚ್ಚರಿ. ಇವುಗಳನ್ನೆಲ್ಲ ಬಹಳ ಚೆನ್ನಾಗಿ ನಿರೂಪಿಸಿದ್ದಾರೆ. (ನಿರ್ದೇಶಕರು ಗೊತ್ತಿಲ್ಲ)
ಅದಕ್ಕೆ ಪ್ರಶಸ್ತಿ ಒಂದು ಬಿಟ್ಟರೆ ಬೇರೆ ಯಾವದೇ ಪ್ರಚಾರ ಸಿಗಲಿಲ್ಲ.
ನನ್ನ ಪ್ರಶ್ನೆ ಏನೆಂದರೆ ಮುಂಗಾರು ಮಳೆ ಯಂತಹ ಚಿತ್ರವನ್ನು ಪೋಷಿಸಿದ ಪ್ರೇಕ್ಷಕರು ಚಿಗುರಿದ ಕನಸನ್ನು ಏಕೆ ಒಪ್ಪಲಿಲ್ಲ?
ಕತೆಯಲ್ಲಾಗಲಿ, ನಿರೂಪಣೆ ಯಲ್ಲಾಗಲಿ ಚಿಗುರಿದ ಕನಸು ಮುಂಗಾರು ಮಳೆಗೆ ಕಡಿಮೆ ಇಲ್ಲ. ಆದರೂ ನಮ್ಮ ಜನರಿಂದ ಅದಕ್ಕೆ ಮಣೆ ಸಿಗಲಿಲ್ಲ
ಅಥವ ಪ್ರೇಮ ಕತೆಗಳು , ಮಚ್ಹು ಲಾಂಗ್ ಚಿತ್ರಗಳೆ ನಮ್ಮವರಿಗೆ ಬೇಕೇನೋ ಗೊತ್ತಿಲ್ಲ
Comments
ಉ: ಮುಂಗಾರು ಮಳೆ v/s ಚಿಗುರಿದ ಕನಸು