ಮುಂಗೈಯಲ್ಲಿ ಒಪ್ಪುವ ಶ್ರಿಂಗಾರದ ಬಳೆ
ಮುತ್ತೈದೆತನದ ಹಿರೆಮೆ, ಹೆಂಗಳೆಯರ ಅಚ್ಚು ಮೆಚ್ಚು ರಮಣಿಯರನ್ನು ರಮಿಸುವುದಿ ಬಳೆ.
ಮೊದಲು ಬೇಕೆಂಬ, ಮಾರು ಹೋಗುವ, ಮಂಗಳದಾಯಕವಾದಂತಹ, ಮಧುರ ಧ್ವನಿಗೈಯುವ, ಮನಸ್ಸಿಗೆ ತಂಪನ್ನು ನೀಡುವ ಈ ಬಳೆಯನ್ನು ತೊಟ್ಟುಕೊಂಡರೆ ಎಲ್ಲರಿಗೂ ಒಮ್ಮೆ ತೋರಿಬರುವ ಆಸೆ .ಬಳೆಯಿಂದ ಆಕರ್ಷಿತರಾಗದ ಹೆಣ್ಣು ಮಕ್ಕಳೇ ಇಲ್ಲ.ಮುಂಗೈಯಿಯಲ್ಲೇ ವಪ್ಪುವಂತಹ ಇದು ತನ್ನ ಗಂಡನನ್ನು ಅವಳ ಹತ್ತ್ರ ಸೆಳೆಯುತ್ತದೆ. ಬಳೆಯಿಂದ ಹೊರಹೊಮ್ಮುವ ತರಂಗವು ತಾಯಿ ಕಂದಮ್ಮನಿಗಾಗಿ ಹಾಡುವ ಜೋಗುಳಕ್ಕೆ ತಾಳವಾಗುತ್ತದೆ , ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಹಿಂದಿಯಲ್ಲಿ ಬನ್ನ್ಗಲಿ ಅಂದ್ರೇ ಗಾಜು ಎಂದು ಆದ್ದರಿಂದ ಆಂಗ್ಲ ಭಾಷೆಯಲ್ಲಿ ಬಳೆಯು ಬ್ಯಾಂಗಲ್ ಎಂಧು ಕರೆಸಿಕೊಳ್ಳುತ್ತದೆ. ಇಂಥ ಸುಂಧರ ಬಳೆಗೆ ಐದು ಸಾವಿರ ವರ್ಷದ ಇತಿಹಾಸವಿದೆ. ಮಹಾಭಾರತ, ರಾಮಾಯಣದ ಕಾಲದಲ್ಲೂ ಬಳೆಯನ್ನು ತೊಟ್ಟು ಅಲಂಕರಿಸಿದ ದೇವಾನೂದೇವಿಯರ ಉದಾಹರಣೆ ಇದೆ. ವೇದ ಪೂರ್ವ ಕಾಲದಲ್ಲೂ ಬಳೆಗಳನ್ನು ಅಲಂಕಾರಕ್ಕಾಗಿ ಉಪಯೋಗಿಸುತ್ತಿದರು. ವೇದದ ಆಗಮನದ ನಂತರದ ಕಾಲದಲ್ಲಿ ಬಳೆಯನ್ನು ಮುತ್ತೈದೆತನದ ಸಂಕೇತವಾಗಿ ಮದುವೆಯಲ್ಲಿ ಧರಿಸಲೇಬೇಕೆಂಬ ಹಾಗೂ ಮದುವೇನಂತರದ ದಿನಗಳಲ್ಲಿ ಹೆಣ್ಣುಮಕ್ಕಳು ಬರಿಕೈಯಲ್ಲಿ ಇರುವುದು ಅಶುಭಯೆಂದು ಸಾರಿತು.
ಮೌರ್ಯ ರಾಜರ ಕಾಲವಾದಂತಹ 322-185 ಕ್ರಿ ಪೂರ್ವದಲ್ಲಿ ಶಂಕದಿಂದ ಮಾಡಿದಂತ ಬಂಗಾರದ ಎಲೆ ಹಾಗೂ ಹಿತ್ತಾಳೆಯನ್ನು ಹೊಂದಿದಂತಹ ಬಳೆಗಳ ಉಪಯೋಗವಾಗುತಿತ್ತಂತೆ. ಹಾಗೆ 2600 ಕ್ರಿ ಪೂ ಮಹೇಂಜೋದಾರೊನಲ್ಲಿ ನಾಟ್ಯಗಾರ್ತಿ ಎಡಗೈತೋಳಿನಲ್ಲಿ ಬಳೆಗಳನ್ನು ಧರಿಸಿದ ಚಿತ್ರಗಳು ಇದಕ್ಕೆ ಉದಾಹರಣೆಯಾಗಿದೆ. 1500 ಕ್ರಿ. ಪೂದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರು ಬಳೆ ಧರಿಸುತ್ತಿದ್ದರಂತೆ. ಆದರೆ ಆ ದಿನಗಳ ನಂತರದಲ್ಲಿ ಹೆಣ್ಣು ಮಕ್ಕಳು ಮಾತ್ರ ಧರಿಸುವ ಪದ್ದತಿ ಜಾರಿಗೆ ಬಂತು.
ಹಿಂದೂ ಕಣಿವೆ ಪದ್ದತಿಯಲ್ಲಿ ಮುತ್ತು ಹಾಗೂ ಬಂಗಾರದಿಂದ ಮಾಡಿದಂತಹಬಳೆಗಳ ಬಗ್ಗೆಯೂ ಉಲ್ಲೇಖವಿದೆ.
ಇಷ್ಟೊಂದು ಪೂರ್ವ ವೃಂತಾಂತವಿರುವ ಈ ಗೋಳಾಕಾರದ ಬಳೆ ಸಿಂಗರಿಸಲು ಸುಲಭ. ಸಾಣಿಯ, ವರ್ಕಿನ ಹಸಿರು ಬಳೆಗಳನ್ನು ಸುಧತೆಯರು ಮದುವೆ ಅಥವಾ ಮುಂಜಿಯ ಸಂಧರ್ಭದಲ್ಲಿ ಬಳೆಗಾರನ ಕೈಯಲ್ಲಿ ತೊಡಿಸ್ಕೊಳ್ಳುತ್ತಾರೆ .ನಂತ್ರ ಬಳೆ ಮಲ್ಲಾರಕ್ಕೆ ಪೂಜೆ ಸಲ್ಲಿಸುತ್ತಾರೆ.ನ್ಯೆವೇದ್ಯ ಅರ್ಪಿಸುತ್ತಾರೆ . ಅಕ್ಕಿ,ಬೆಲ್ಲ,ಕಾಯೀ,ದಕ್ಷಿಣೆಯನ್ನು ಬಳೆಗಾರನಿಗೇ ಕೊಡುತ್ತಾರೆ. ಲಕ್ಷ್ಮಿ,ಗೌರಿ ಪೂಜೆಯಲ್ಲಿ ದೇವಿಯರಿಗೇ ಬಳೆಯನ್ನು ಉಡಿತುಂಬುತ್ತಾರೆ . ಶಾಶ್ವತವಾಗಿ ಮುತೈದೆತನವನ್ನು ಪಡೆಯಲು ಬಯಸುತ್ತಾರೆ.ಬಳೆ ಹಾಗೂ ಬಳೆಮಲ್ಲಾರವನ್ನು ಚಾತುರ್ಮಾಸದಲ್ಲಿ ದಾನವಾಗಿ ಕೊಡುತ್ತಾರೆ.ಇದರಿಂದ ಸೌಭಾಗ್ಯ ಸ್ಥಿರವಾಗುವುದೆಂಬ ನಂಬಿಕೆ ಇದೆ . ಬಸಿರಿಗೇ ಐದನೇ ತಿಂಗಳಿನಲ್ಲಿ ಹಸಿರು ಬಳೆ ತೊಡಿಸಿ ಆರತಿ ಮಾಡುತ್ತಾರೆ.ಹಬ್ಬಗಳಲ್ಲೂ ಸ್ತ್ರೀ ಯರು ಹೊಸ ಬಳೆಗಳನ್ನು ತೊಟ್ಟು ಸಂಬ್ರಮಿಸುತ್ತಾರೆ.
ಜಗತ್ತಿನ ಅತೀ ಸುಂದರ ಶ್ರುಂಗಾರ ಸಾಮಗ್ರಿಯಾದ ಇದು. ಗಂಡನಿಗೆ ಅದ್ರ್ರುಷ್ಟ ಹಾಗೂ ಶಕ್ತಿಯನ್ನು ತಂದುಕೊಡುತ್ತದೆ. ಆದ್ದರಿಂದಲೇ ಭಾರತದ ಹಲವೆಡೆ ಲಲನೆಯರು ವಿವಿಧ ರೀತಿಯ ಬಳೆಗಳನ್ನು ಧರಿಸುತ್ತಾರೆ. ಕರ್ನಾಟಕದ ಮಂದಿ ಪಾಟ್ಲಿ,ಬಿಲ್ವಾರ,ತೋಡೆ,ಗ್ಲಾಸ್ ಪಾಟ್ಲಿ,ಮೆಣಸಿನ ಬೀಜದ ಬಳೆ, ಬಂಗಾರದ ಗುಂಡಿನೊಂದಿಗೇ ಕರಿಮಣಿ ಸುತ್ತಿದ ಬಳೆಗಳನ್ನು ಹಸಿರು ಬಣ್ಣದ ಗಾಜಿನ ಬಳೆಯೊಂದಿಗೇ ಧರಿಸುತ್ತಾರೆ.ಬಿಹಾರಿ ಮಹಿಳೆಯರು’’ ಲಹಾಟಿ’’ ಎಂಬ ವಿಶೇಷ ಬಳೆಯನ್ನು ಮದುವೆ ಸಂದರ್ಭದಲ್ಲಿ ತೊಡುತ್ತಾರೆ.
ಈ ಬಳೆಯ ಬಗ್ಗೆ ಸಣ್ಣ ವಿವರಣೆ ಕೊಡಲು ಬಯಸುತ್ತೇನೆ.ಲಹ,ಲಾಕ್ ಎನ್ನುವ ಹೆಸರು ಸಂಸ್ಕೃತದ ‘”ಲಾಕ್ಷ್ಯ’’ದಿಂದ ಉತ್ಪತಿಯಾಗಿದೆ.”ಲಾಕ್ ‘’ ಎಂಬ ಲುಕ್ಕಿಫೇರ ಲುಕ್ಕ ಎನ್ನುವ ವೈಜ್ಞಾನಿಕ ಹೆಸರುಳ್ಳ ಈ’’ ಹುಳು’’, ಏಶಿಯಾ ಖಂಡದ ಮರಗಳಲ್ಲಿ ಹೆಚ್ಚಾಗಿ ವಾಸಿಸುತ್ತದೆ.ಈ ಹುಳುವು ತನ್ನ ರಕ್ಷಣೆಗಾಗಿ ಕೆಂಪು ರಸಾಯನಿಕ ವನ್ನು ಹೊರ ಉಗುಳುತ್ತದೆ. ಆ ರಾಸಾಯನಿಕವನ್ನು ಬಳಸಿ’’ ಲಾಕ್’’ ಅಥವಾ ‘’ಲಹಾಟಿ’’ಬಳೆಯನ್ನು ತಯಾರಿಸುತ್ತಾರೆ.
ತಮಿಳಿನಲ್ಲಿ ‘’ವಲ್ಯಲ’’,ಮಲಯಾಳಿಯಲ್ಲಿ’’ವಾಲಾ’’ ಆಂದ್ರದಲ್ಲಿ ‘’ ಗಾಜುಲು’’ ಎಂದು ಕರೆಸಿಕೊಳ್ಳಲ್ಪಡುತ್ತದೆ ಈ ಬಳೆ.ಸಿಕ್ಕ ಸಂಪ್ರದಾಯದಲ್ಲಿ ಕಬ್ಬಿಣ ಅಥವಾ ಉಕ್ಕಿನಿಂದ ಮಾಡಿದಂತಹ ‘’ಕಾಡ’’ಬಳೆಯನ್ನು ಹೆಣ್ಣಿನ ತಂದೆ ಅಳಿಯನಿಗೆ ನೀಡುತ್ತಾರೆ. ಪಂಜಾಬಿ ಮಹಿಳೆಯರು ಕೆಂಪು ಅಥವಾ ಬಿಳಿಯ ದಪ್ಪ ಬಳೆಗಳನ್ನು ಮದುವೆಯಲ್ಲಿ ಶ್ರುಂಗರಿಸುತ್ತಾರೆ .
ಬೆಂಗಾಲಿ ಬೆಡಗಿಯರು ಕಬ್ಬಿಣದಿಂದ ಮಾಡಿದಂತಹ ‘’ಲೋಹ’’ ಬಳೆಗಳನ್ನು ದುರ್ಗಾ ಮಾತೆಗೇ ಅರ್ಪಿಸಿ ನಂತರ ಕೈಗಳಿಗೇ ಅಲಂಕರಿಸುತ್ತಾರೆ ಹಾಗೆಕೆಂಪು ಬಣ್ಣದ ಲಾಕ್ ಬಳೆಯನ್ನು ಹಾಗೂ ಬಿಳಿಯ ಗಾಜಿನ ಬಳೆಯನ್ನು ಮದುವೆಯಲ್ಲಿ ಹೆಚ್ಚಾಗಿ ತೊಡುತ್ತಾರೆ. ರಾಜಸ್ತಾನಿಯರು ಗಲ್ಲ್ ಗಲ್ಲ್ ಶಬ್ದ ಮಾಡುವ’’ ಬಂಗರಿ’’ ಬಳೆಗಳನ್ನು ,’’ಗೋಖರು’’ ಬಳೆಗಳನ್ನು ಹಾಗೂ ಚಪ್ಪಟೇಯಾಗಿ ಅಗಲವಾಗಿರುವ’’ ಪಾಟಲ’’ ಬಳೆಗಳನ್ನು,ಬಟಾಣಿ ಕಾಳಿನಂತಹ ಆಕೃತಿ ಹೊಂದಿದಂತಹ ‘’ಮಟರಿಯಾ’’ ಬಳೆಗಳನ್ನು ಹಾಗೂ ತಾಯಿಯ ಸಹೋದರನಿಂದ ಪಡೆದುಕೊಳ್ಳುವ’’ ಐವರಿ ‘’ಬಳೆಗಳನ್ನು ಅಥವಾ’’ಆನೆಕೊರಿಯ ಚೂಡ’’ವನ್ನು ಸಪ್ತಪದಿಯ ಮುಂಚೆ ಧರಿಸುತ್ತಾರೆ. ಶುಭದ ಸಂಕೇತವಾಗಿ’’ ಲಾಕ್’’ ಬಳೆಗಳನ್ನು ವಿಶೇಷವಾಗಿ ಮದುವೆಯ ಸಂದರ್ಭದಲ್ಲಿ ತೋಳಿನಿಂದ ಮುಂಗೈನವರೆಗೂ ಧರಿಸುತ್ತಾರೆ. ಮುತ್ತಿನ ಕಲಾಕೃತಿ ಹೊಂದಿದ ಬಿಕಾನೇರ್ ಬಳೆಗಳನ್ನು, ವಿವಿಧ ಹರಳಿನ ಬಳೆಗಳನ್ನು ಹಾಗೂ ಕುಂದಣ ಕೆತ್ತಿದ ಬಳೆಗಳಿಂದ ಸಿಂಗರಿಸುತ್ತಾರೆ.
‘’ಸಂಖ’’ ಎಂಬುದು ಕಬ್ಬಿಣದ ಬಳೆಗೆ ಮಣ್ಣಿನ ಕಲಾಕೃತಿ ಹೊಂದಿದ ವಿಶೇಷ ಬಳೆಗಳು. ಇದನ್ನು ಒಡ್ಡಿಸ್ಸಿ ಮಹಿಳೆಯರು ಮದುವೆಯಲ್ಲಿ ಗಂಡನ ಕೈಯಲ್ಲಿ ತೊಡಿಸಿ ಕೊಳ್ಳುತ್ತಾರೆ. ಅಲ್ಲದೆ ಸಂಖ ಹಾಗೂ ಸಿಂಧೂರವನ್ನು ಮಾಘದಲ್ಲಿ ಬರುವ ಲಕ್ಷ್ಮಿ ಪೂಜೆಯಲ್ಲಿ, ವಟ ಸಾವಿತ್ರಿ ಹಾಗೂ ದಶಹರದಲ್ಲಿ ಪ್ರಮುಖ್ಯವಾಗಿ ಧರಿಸುತ್ತಾರೆ. ಕೆಂಪು ಬಣ್ಣದ ದಪ್ಪ ಪ್ಲಾಸ್ಟಿಕ್ ಹೊಂದಿರುವ ಬಂಗಾರದ ಬಳೆಯಾದ ‘ಸಂಖಿ’’ ಬಳೆಯನ್ನು ವಿಶೇಷ ಸಂದರ್ಭದಲ್ಲಿ ಹಾಕುತ್ತಾರೆ. ದೆಹೆಲ್ಲಿ ಮಾನಿನಿಯರು ‘’ಚೂಡಿ’’ಯನ್ನು ಕರವಾಚೌತ್ ನ ದಿನ ಬಿಂದಿ ಹಾಗೂ ಮೆಹೆನ್ದಿಯೊಂದಿಗೇ ಮುಖ್ಯವಾಗಿ ಧರಿಸುತ್ತಾರೆ.
ಮದುವೆಯಲ್ಲಿ ಸಿಂಗರಿಸುವ ಹಸಿರು ಬಳೆಗಳನ್ನು ಮಹಾರಾಷ್ಟ್ರದ ಮಾನಿನಿಯರು ‘’ರೇಷ್ಮೀ ಚೂಡ’’ ಎಂದು ಕರೆಯುತ್ತಾರೆ. ನವಿಲಿನ ಅಥವಾ ಆನೆಯ ಮುಖ ಗಳನ್ನು ಹೊಂದಿದ ‘’ಕಾಡ’’ವನ್ನು ಹಾಗೂ ತೊಡೆಯನ್ನು ಗಾಜಿನ ಬಳೆಯೊಂದಿಗೆ ಕೈಗಳಿಗೆ ಅಲಂಕರಿಸುತ್ತಾರೆ.
ಇದನ್ನೆಲ್ಲಾ ಓದಿದೊಡನೆ ಬಳೆ ತರಲು ಹೊರಟಿರೇನು? ತರುವ ಮುಂಚೆ ಬಳೆಯ ಬಣ್ಣದ ಬಗ್ಗೆ ತಿಳಿಯೊಣ ಬನ್ನಿ. ಕರಿಯ ಗಾಜಿನ ಬಳೆ ಶಕ್ತಿ ಹಾಗೂ ಪ್ರೋತ್ಸಾಹದ ಸಂಕೇತವಾದರೆ, ಹಸಿರು ಆದ್ರೂಸ್ಟದ ಸಂಕೇತ ,ಹಳದಿ ಸಂತೋಷದ, ಕಿತ್ತಳೆ ಗೆಲುವಿನ ಸಂಕೇತ,ಬಿಳಿ ಹೊಸತಿನ ಆಗಮನದ ಸಂಕೇತ ,ಬಂಗಾರ ಸಮೃದ್ದಿಯ ಹಾಗೂ ನೇರಳೆ ಸ್ವಾಂತಂತ್ರದ ,ಕೆಂಪು ಶಕ್ತಿಯ ಹಾಗೂ ಪ್ರೀತಿಯ ಸಂಕೇತಗಳಾಗಿರುತ್ತದೆ. ನೀಲಿ ಬುದ್ದಿವಂತಿಕೆ ಹಾಗೂ ಅನುಭವವನ್ನು ಸೂಚಿಸುತ್ತದೆ, ಬೆಳ್ಳಿ ಶಕ್ತಿಯನ್ನು ಪ್ರತಿಪಾದಿಸುತ್ತದೆ. ಈಗ ಯೋಚಿಸಿ ನೀವು ಯಾವ ಬಣ್ಣದ ಬಳೆ ಕರಿದಿಸಬೇಕೆಂದು?
ವೈಜ್ಞಾನಿಕದೃಷ್ಟಿ ಕೊನದಲ್ಲಿ ನೋಡಿದರೆ ಈ ಬಳೆ ದೇಹದ ಉಷ್ಣತೆಯನ್ನು ಕಾಪಾಡಲು ಸಹಕರಿಸುತ್ತದೆ . ಬಂಗಾರ, ಬೆಳ್ಳಿ , ಪ್ಲಾಟಿನಮ್ ಇತ್ಯಾದಿ ಲೋಹಗಳು ಚರ್ಮದೊಂದಿಗೇ ದಿನಾಲು ಒಡನಾಡುವುದರಿಂದ ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ. ಮುಂಗೈನಿಂದ ಮೊಣಕೈನ ಒಳಗಿನ ಭಾಗದಲ್ಲಿ ಧರಿಸುವುದರಿಂದ ಆ ಭಾಗಕ್ಕೆ ಇದು ಆಕ್ಯುಪೆಂಚರ್ ರೀತಿಯ ಶುಶ್ರೂಷೆ ಮಾಡುತ್ತದೆ. ಯಾವುದೇ ಲೋಹವನ್ನು ಮೈಮೇಲೇ ಧರಿಸುವುದರಿಂದ ದಾರಿದ್ರ್ಯವನ್ನು ನಿವಾರಿಸುತ್ತೆ ಎಂದು ನಮ್ಮ ಹಿರಿಯರು ಹೇಳುತ್ತಾರೆ.
ಇದನ್ನೆಲ್ಲಾ ತಿಳಿದ ಮೇಲೆ ಗಾಜಿನ ಬಳೆಯ ಮಾರುಕಟ್ಟೆಯ ಬಗ್ಗೆ ಖಂಡಿತ ತಿಳಿಯಬೇಕಲ್ಲವೇ? ಹೈದ್ರಾಬಾದ್ ನಲ್ಲಿರುವ ‘’ಲಾಡ್ ಬಜಾರ್’’ ಪುರಾತನ ಬಳೆ ಬಜಾರ್ ಆದ್ರೆ, ಉತ್ತರಭಾರತದ ಫಿರೋಜಾಬಾದ್ ಸಹಾ ಬಳೆಯ ತ ಯಾರಿಯಲ್ಲಿ ಮೊದಲ ಸ್ಥಾನ ಪಡೆಯುತ್ತದೆ. ರಾಜಸ್ಥಾನದ ಜೈಪುರದಲ್ಲಿರುವ ‘’ಬಡಾ ಚೌಪಳ್’’ ಲಾಕ್ ಬಳೆ ಯ ದೊಡ್ಡಬಾಜಾರ್ ಆಗಿದೇ.
ಭಾರತದ ಮಹಿಳೆಯರ ಅತೀ ಮುಖ್ಯ ಶ್ರಿಂಗಾರ ವಸ್ತುವಾದಂತಹ ಈ ಬಳೆಗಳನ್ನು ವಯಸ್ಸಿನ ಅಂತರವಿಲ್ಲದೆ,ಜಾತಿ,ಮತದಬೇಧವಿಲ್ಲದೆ ಎಲ್ಲಾ ವಯಸ್ಸಿನವರು ಧರಿಸಬಹುದಾಗಿದೇ. ಭಾರಿ ಜಗಜಗಿಸುವ ಈ ಬಳೆಯ ಮಹತ್ವವನ್ನು ಎಷ್ಟು ಹೇಳಿದರು ಸಾಲದು, ಎಷ್ಟು ತೊಟ್ಟರು ಸಾಲದು, ಎಷ್ಟು ಅಮೋಘವಾಗಿದೇ ಅಲ್ಲವೇ ನಮ್ಮ ಈ ಭಾರತೀಯ ಸಂಸ್ಕೃತಿ!
Comments
ಉ: ಮುಂಗೈಯಲ್ಲಿ ಒಪ್ಪುವ ಶ್ರಿಂಗಾರದ ಬಳೆ
In reply to ಉ: ಮುಂಗೈಯಲ್ಲಿ ಒಪ್ಪುವ ಶ್ರಿಂಗಾರದ ಬಳೆ by gopinatha
ಉ: ಮುಂಗೈಯಲ್ಲಿ ಒಪ್ಪುವ ಶ್ರಿಂಗಾರದ ಬಳೆ
ಉ: ಮುಂಗೈಯಲ್ಲಿ ಒಪ್ಪುವ ಶ್ರಿಂಗಾರದ ಬಳೆ
ಉ: ಮುಂಗೈಯಲ್ಲಿ ಒಪ್ಪುವ ಶ್ರಿಂಗಾರದ ಬಳೆ
ಉ: ಮುಂಗೈಯಲ್ಲಿ ಒಪ್ಪುವ ಶ್ರಿಂಗಾರದ ಬಳೆ
In reply to ಉ: ಮುಂಗೈಯಲ್ಲಿ ಒಪ್ಪುವ ಶ್ರಿಂಗಾರದ ಬಳೆ by asuhegde
ಉ: ಮುಂಗೈಯಲ್ಲಿ ಒಪ್ಪುವ ಶ್ರಿಂಗಾರದ ಬಳೆ
ಉ: ಮುಂಗೈಯಲ್ಲಿ ಒಪ್ಪುವ ಶ್ರಿಂಗಾರದ ಬಳೆ
ಉ: ಮುಂಗೈಯಲ್ಲಿ ಒಪ್ಪುವ ಶ್ರಿಂಗಾರದ ಬಳೆ