ಮುಂಜಾನೆ
ಮೂಡಣದಿ ಪಲ್ಲವಿಸಿದೆ ಚೆಲುವು
ನೇಸರನ ಹಾಡಿನ ಪಲ್ಲವಿಯು
ನಭದಲಿ ಹೊಂಗಿರಣಗಳ ಆಗಮನ
ಇಳೆಯಲದೇನು ಹೊಸಸಂಚಲನ !
ಬಣ್ಣ ಬಣ್ಣದ ಹೂಗಳು ಮುಗುಳ್ನಗಲು
ಚಿಟ್ಟೆ ದುಂಬಿಗಳಿಗೆಲ್ಲ ರಸದೌತಣವು
ಸುಮಲತೆಗಳಲಿ ಮುತ್ತಿನ ಹಿಮಮಣಿಗಳು
ಮರೆಯಾಗಿ ತೊಟ್ಟಿಕ್ಕುವ ಕಣ್ಮಣಿಗಳು !
ಹಕ್ಕಿಬಳಗದ ಚಿಲಿಪಿಲಿ ಸ್ವರಮೇಳಗಳು
ತಂಗಾಳಿಗೆ ನಲಿಯುವ ಹಸಿರಸಿರಿಗಳು
ಪಲ್ಲಕ್ಕಿ ತೇಲುತಿದೆ ಬೆಳ್ಳಕ್ಕಿಸಾಲುಗಳು
ತೆರೆದಿದೆ ಮನಮೋಹಕ ನವಕಾವ್ಯವು !
Rating
Comments
ಸೂರ್ಯೋದಯವನ್ನು ಕಣ್ಣಾರೆ
ಸೂರ್ಯೋದಯವನ್ನು ಕಣ್ಣಾರೆ ಕಂಡಸ್ತೆ ಸಂತಸವಾಯ್ತು..ಆ ದೃಶ್ಯ ಕಣ್ಣ ಮುಂದೆ ಬಂತು.....
ಅದೇನು ಸೂರ್ಯೋದಯವನ್ನು ನೋಡಿಲ್ಲವೇ? ಎನ್ನಬಹ್ದು ನೀವು- ನಾ ಎಮಳಗೋದು ಲೇಟು-ಏಳೋದು ಲೇಟು....ನಾ ಎದ್ದಾಗ ಸೂರ್ಯ ಮನೆ ಮೇಲೆ ಬಂದಿರುತ್ತಾನೆ..!!
ಶುಭವಾಗಲಿ..
\|
In reply to ಸೂರ್ಯೋದಯವನ್ನು ಕಣ್ಣಾರೆ by venkatb83
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.ಈಗಿನವರು ಹೆಚ್ಚಾಗಿ ಮಲಗೋದು ಲೇಟು, ಏಳೋದು ಲೇಟು.ನನ್ನ ಮಕ್ಕಳೂ ಹೀಗೆಯೇ.