ಮುಂದುವರೆದ ಭಾರತತೀರ್ಥ ( ಮಹಾಭಾರತದ ಓದು !) - ೨

ಮುಂದುವರೆದ ಭಾರತತೀರ್ಥ ( ಮಹಾಭಾರತದ ಓದು !) - ೨

( http://sampada.net/blog/shreekantmishrikoti/26/12/2007/6794 ) ದಿಂದ ಮುಂದುವರೆದಿದ್ದು .. ಅಲ್ಲಿ ಮುಂದುವರೆದೀತು ಅಂತ ಹೆದರಿಸಿದ್ದೆ ... ಈ ಬೆದರಿಕೆಯನ್ನ ಜಾರಿಗೆ ತಂದಿದ್ದೀನಿ ! )
ಇದು ಲೀನಕ್ಸ್ ನಿಂದ ಕನ್ನಡ ಬರಹದ ಟೆಸ್ಟಿಂಗ್ ಕೂಡ ....

ಶಾಪಗ್ರಸ್ತ ಗಂಗೆ ಭೂಮಿಯಲ್ಲಿ ಹುಟ್ಟಿ ಶಂತನುವನ್ನು ಮದುವೆಯಾಗುವಳು ತನ್ನ ಮೊದಲು ಏಳು ಮಕ್ಕಳನ್ನು ಕೊಲ್ಲುವಳು . ಆ ಮಕ್ಕಳು ಅದಾರೋ ಅಷ್ಟವಸುಗಳಂತೆ ಅವರೂ ಶಾಪ ಪಡೆದೇ ಭೂಮಿಯಲ್ಲಿ ಹುಟ್ಟಿದವರಂತೆ . ಭೂಮಿಯಲ್ಲಿನ ಬದುಕು ಬೇಗ ಮುಗಿದಷ್ಟು ಒಳ್ಳೆಯದು ಅಂತ ಅವರೇ ನಮ್ಮನ್ನ ಹುಟ್ಟಿದ ಕೂಡಲೇ ಕೊಲ್ಲು ಅಂತ ಕೇಳ್ಕೊಂಡಿದ್ದರಂತೆ ! ಇದು ದಯಾಹತ್ಯೆ - ಯೂಥನೇಸಿಯಾ ದ ಮೊಟ್ಟ ಮೊದಲ ಉದಾಹರಣೇ ಅಂತ ಕಾಣುತ್ತದೆ ! ಯೆಂಟನೇಯವನನ್ನ ( ಯೆ ಯಾಕೆ ಬರ್ದೆ ಅಂದ್ರಾ ? ಎಂಟು ಸರಿಯಾಗಿ ಬರ್ತಾ ಇಲ್ಲ , ಈ ಉಬುಂಟು ಲೀನಕ್ಸ್ ನ ಲ್ಲಿ ಅದಕ್ಕೆ !) ಕೊಲ್ಲಲಿಕ್ಕೆ ಆಗದೇ ಉಳಕೋತಾನೆ . ಅವನೇ‌ ದೇವವ್ರತ ಉರ್ಫ್ ಭೀಷ್ಮ .
ಆಮೇಲೆ ಶಂತನುವಿಗೆ ಮತ್ಸ್ಯಗಂಧಿ ಮೇಲೆ ಮನಸ್ಸಾಗಿ ಅವಳ ಅಪ್ಪ ಅವಳಿಂದ ಹುಟ್ಟೋ ಮಗನೇ ಪಟ್ಟಕ್ಕೆ ಬರಬೇಕಂತ ಕಂಡೀಷನ್ ಹಾಕ್ತಾನೆ .. ಮಾಸ್ತಿಯವರು ಶರತ್ತು/ಕಂಡೀಷನ್ ಗೆ ಬದಲಾಗಿ ಸಮಯ ಅಂತ ಬಳಸ್ತಾರೆ .. ಇದರಿಂದ ಶಂತನುವಿಗೆ ಬೇಜಾರಾದದ್ದು ಮಗನಿಗೆ ಗೊತ್ತಾಗಿ ಅವನು ಮತ್ಸ್ಯಗಂಧಿಯ ಅಪ್ಪ ದಾಶರಾಜನ್ನ ಭೆಟ್ಟಿಯಾಗಿ ನನಗೆ ರಾಜ್ಯ ಬೇಡ ; ನೀವು ಅವಳನ್ನ ಅಪ್ಪನಿಗೆ ಮದುವೆ ಮಾಡಿ ಅಂತ ಕೇಳ್ಕೋತಾನೆ . 'ನಿನಗೆ ಬೇಡ , ಸರಿ , ನಾಳೆ ನಿನ್ನ ಮಕ್ಕಳು ಸುಮ್ಮನಿರಬೇಕಲ್ಲ?' ಅಂತ ಅವನು ಅಂದಾಗ 'ನಾನು ಮದುವೆ ಆದ್ರೆ ತಾನೇ ಈ ಸಮಸ್ಯೆ ? ನಾನು ಮದ್ವೇನೇ ಆಗೋದಿಲ್ಲ 'ಅಂತ ಪ್ರತಿಜ್ಞೆ ಮಾಡ್ತಾನೆ.

ಈ ಮೆಗಾ ಧಾರಾವಾಹಿ ಮುಂದುವರೆದೀತು ಹುಶಾರ್ !

Rating
No votes yet