ಮುಂಬಯಿಯಲ್ಲಿ ವಲಸೆ ಬಂದವರ ಮೇಲೆ ಹಾವಳಿ - ಈ ಸಮಸ್ಯೆಗೆ ಕಾರಣರಾರು?

ಮುಂಬಯಿಯಲ್ಲಿ ವಲಸೆ ಬಂದವರ ಮೇಲೆ ಹಾವಳಿ - ಈ ಸಮಸ್ಯೆಗೆ ಕಾರಣರಾರು?

ಸದ್ಯ ಮುಂಬಯಿ ಪತ್ರಿಕೆಗಳ ಮುಖ್ಯ ಸುದ್ದಿ ರಾಜ್ ಠಾಕರೆಯ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯವರು ನಡೆಸಿದ ಉತ್ತರ ಭಾರತೀಯರ ( ಅಂದರೆ ಬಿಹಾರ, ಉತ್ತರ ಪ್ರದೇಶದವರು).
ಟ್ಯಾಕ್ಸಿ ಚಾಲಕರ ಮೇಲೆ ಹಲ್ಲೆಯಾಗಿದೆ. ಲೋಕಲುಗಳಲ್ಲಿ ಭೈಯ್ಯಾ ( ಬಿಹಾರಿ, ಉಪ್ರದವರು) ಗಳ ಮೇಲೆ ಜನ ತಲೆಗೊಂದೇಟು ಹಾಕುತ್ತಿದ್ದಾರೆ.

ಎಲ್ಲ ಪತ್ರಿಕೆಗಳಲ್ಲಿ ಖಂಡನೆಯಾಗುತ್ತಿದೆ.

ಅತ್ತ ನಿತೀಶ್ ಕುಮಾರ್‍ ಇದರ ವಿರುದ್ಧ ಆಕ್ರೋಶಿಸುತ್ತಿದ್ದಾರೆ. ಲಾಲು ಯಾದವ್ ಪ್ರಧಾನಮಂತ್ರಿಯತ್ತ ದೂರು ನೀಡಿದ್ದಾರೆ. ಮಾಯಾವತಿ ನಾನೇನು ಕಡಿಮೆ ಎಂದು ತನ್ನ ಪಾಲನ್ನೂ ಈ ಖಂಡನೆಗೆ ನೀಡಿದ್ದಾರೆ.

ವಿ಼ಷಯ ಇದು. ಮುಂಬಯಿ , ಅಥವಾ ಯಾವುದೇ ನಗರ ( ಬೆಂಗಳೂರು ಸೇರಿದಂತೆ)ಕ್ಕೆ ಅದರದೇ ಆದ ಮಿತಿಯಿರುತ್ತದೆ. ಅದನ್ನು ಮೀರಿ ಜನಸಂಖ್ಯೆ ಬೆಳೆದರೆ ನಿಭಾಯಿಸುವುದು ಕಷ್ಟವಾಗುತ್ತದೆ. ನಾವು ಸರಕಾರವನ್ನು ಎಷ್ಟೇ ದೂರಿದರೂ ಸರಿ, ರಸ್ತೆ , ನೀರು, ಸಾರಿಗೆ, ಜೀವನಾವಶ್ಯಕ ಸಾಮಗ್ರಿಗಳ ಪೂರೈಕೆ, ಮನೆ, ಟಾಯ್ಲೆಟ್ಟುಗಳು ಇವುಗಳನ್ನೆಲ್ಲಾ ಬರುತ್ತಿರುವ ಮಹಾಪೂರಕ್ಕೆ ಪೂರೈಸುವುದು ಹೇಗೆ?

ಇದರರ್ಥ ವಲಸೆ ಬಂದವರನ್ನು ಬಗ್ಗು ಬಡಿಯಿರಿ ಎಂದಲ್ಲ. ಜನ , ಅದರಲ್ಲೂ ಬಡ ಜನ , ಊರು ಬಿಟ್ಟು ವಲಸೆ ಯಾಕೆ ಬರುತ್ತಾರೆ? ಇರುವ ಊರಿನಲ್ಲಿ ಜೀವನ ನಿರ್ವಹಣೆ ಕಷ್ಟವಾದರೆ, ಹೊಟ್ಟೆಪಾಡಿಗೆ ಎಲ್‌ಇ ಅನುಕೂಲವೋ ಅಲ್ಲಿ ನೆಲೆಸುತ್ತಾರೆ.

ಅದರಲ್ಲಿಯೂ ಬಿಹಾರ ಉಪ್ರದಿಂದಲೇ ಏಕೆ?

ಬಿಹಾರ ಲಾಲೂ ಆಡಳಿತದಲ್ಲಿ ಮಣ್ಣು ತಿಂದದ್ದು ಹಳೆಯ ಕಥೆ. ಹಾಗೆಯೇ ಉಪ್ರ ಮಾಯಾವತಿ, ಮುಲಾಯಮ್ , ಮಾಯಾವತಿ ಎಂಬ ಚಕ್ರದಲ್ಲಿ , ಅಮರ ಸಿಂಗ್ ಎಂಬ ತಂತ್ರಗಾರನ ಕೈಯಲ್ಲಿ ಸಿಕ್ಕಿಕೊಂಡು ನರಳುತ್ತಿದೆ. ಅಲ್ಲಿಯ ಬಡ ಜನ , ಇಂಥಾ ಪರಿಸ್ಥಿತಿಯಲ್ಲಿ ವಲಸೆ ಹೋಗದೇ ಮತ್ತೇನು ಮಾಡಿಯಾರು?

ಈ ಪ್ರಶ್ನೆಗೆ ಉತ್ತರ ಕೊಡಬೇಕಾದವರು ಈ ಬಡ ವಲಸೆಗಾರರಲ್ಲ. ಅವರನ್ನು ಈ ಸ್ಥಿಗೆ ತಂದ ಲಾಲೂ, ಮುಲಾಯಮ್ , ಅಮರ ಸಿಂಗ್ ಇಂಥಹವರು. ತಮಾಷೆಯೆಂದರೆ ಇಂದು ಇವರೆಲ್ಲ ಈ ವಲಸೆ ಬಂದವರ ಹಿತೈಷಿಗಳೋತೆ ಸೋಗು ಹಾಕಿ ಪತ್ರಿಕಾ ಹೇಳಿಕೆ ನೀಡುತ್ತಿದ್ದಾರೆ. ಅಮರ ಸಿಂಗ್ ಹಲ್ಲೆಗೊಳಗಾದವರ ಜೊತೆಗೆ ಮಾತುಕಥೆಯಾಡುವ ಚಿತ್ರವನ್ನೂ ಪತ್ರಿಕೆಗಳಲ್ಲಿ ಪ್ರಕಟಿಸಿಕೊಂಡು ಧನ್ಯರಾದರು.

ಇವರಿಗೆ ಜನ ಬುದ್ಧಿ ಕಲಿಸುವುದು ಯಾವಾಗ?

ಇದರಿಂದ ಅಲ್ಲಿ ಯ ಮೂಲನಿವಾಸಿಗಳಿಗೆ ಮುನಿಸು ಸಹಜವೇ. ಯಾಕೆಂದರೆ, ಅವರ ಜೀವನ ಮಟ್ಟ ಇದರಿಂದ ಕುಸಿಯುತ್ತದೆ.

Rating
No votes yet