"ಮುಂಬೈ- ಪೂನಾ ಕನ್ನಡ ಸಾಹಿತ್ಯ.ಕಾಂ", ಮುಂಬೈ ನಗರದಲ್ಲಿ ವಿಧ್ಯುಕ್ತವಾಗಿ ನೆರೆವೇರಿತು !!
ಮುಂಬೈ-ಪೂನಾ ಕನ್ನಡಸಾಹಿತ್ಯ.ಕಾಂ ವಿಧ್ಯುಕ್ತವಾಗಿ ಅಕ್ಟೋಬರ್, ೧೫ ರಂದು, ಮುಂಬೈಯ 'ಕರ್ನಾಟಕ ಸಂಘ'ದ ಆವರಣದಲ್ಲಿ ಉದ್ಘಾಟನೆಯಾಯಿತು. ಪ್ರಾ. ಜಯದೇವ ಹಟ್ಟಂಗಡಿಯವರ ಹಸ್ತದಿಂದ ಶುರುವಾದ ಈ ಅಭಿಯಾನ, ಶ್ರೀ ಶೇಖರ್ ಪೂರ್ಣರವರ ಕನಸಿನ ಕೂಸನ್ನು ಮೇಲೆತ್ತಿ ನಲಿಸಿ, ಮೆರೆಸಲು, ಬೆಳೆಸಲು ಅನುವು ಮಾಡಿಕೊಟ್ಟಿದೆ. ಮೇಲಾಗಿ ಇದು ಕನ್ನಡಿಗರೆಲ್ಲರ ಆಶೋತ್ತರಗಳಿಗೆ ಹಿಡಿದಿಟ್ಟ ದರ್ಪಣವೆಂದರೆ ಅತಿಶಯೋಕ್ತಿಯಲ್ಲ !
ಕನ್ನಡ ಸಾಹಿತ್ಯ ಡಾ.ಕಾಂ, ೬ ವರ್ಷಗಳ ಹಿಂದೆ ಜನಿಸಿದ ಮಗು. ಬೆಂಗಳೂರಿನ ಎಮ್.ಜೆ. ರೋಡಿನ 'ಕಾಫಿ ಹೌಸಿ'ನಲ್ಲಿ ನಿರ್ಧರಿಸಿ, ರೂಪಗೊಂಡ ಬಯಕೆ, ಒಂದೇ ವರ್ಷದಲ್ಲಿ ನನಸಾಗಿ ಮೂರ್ತರೂಪ ಪಡೆಯಿತು. ಈಗ ಅದು ಒಂದು 'ಸಾಮುದಾಯಿಕ ಚಟುವಟಿಕೆ'ಯಾಗಿ ಹೊರಹೊಮ್ಮಿರುವುದು ಆರೊಗ್ಯಕರ ಬೆಳವಣಿಗೆಯ ಲಕ್ಷಣ ವೆನ್ನಿಸುತ್ತಿದೆ. ಬೆಂಬಲಿಗರ ಬಳಗಗಳು ಈಗಾಗಲೇ ಅಮೆರಿಕ, ಇಂಗ್ಲೆಂಡ್, ಮತ್ತಿತರ ದೇಶಗಳಲ್ಲಿ ಪ್ರಚಾರದಲ್ಲಿವೆ. 'ಶ್ರೀ ಶೇಶಾದ್ರಿ ವಾಸು'ರವರ "ಬರಹ ಕನ್ನಡ ಸಾಫ್ಟ್ವೇರ್" ಇದಕ್ಕೆ ಪೂರಕವಾಗಿರುವುದು ಹೆಮ್ಮೆಯ ವಿಶಯ !
ಈಗ ತಾನೇ ಶುರುವಾದ 'ಮುಂಬೈ-ಪೂನಾ ಕನ್ನಡಸಾಹಿತ್ಯ.ಕಾಂ' ಮುಂಬೈ, ಪುಣೆ ಗಳಂತಹ ಊರಿನ ಕವಿಗಳಿಗೆ, ಸಾಹಿತ್ಯಾಸಕ್ತರಿಗೂ ಮುದನೀಡಿದೆ ! ಬೆಂಗಳೂರು, ಮೈಸೂರಿನ ಜನರಿಗೆ ಮೊದಲೇ ಇದು ಲಭ್ಯವಾಗಿತ್ತು !
ದಿನ ವಿಡೀ ನಡೆದ 'ವಿಚಾರ ಸಂಕಿರಣ'ದಲ್ಲಿ 'ಕನ್ನಡ ಸಾಹಿತ್ಯ.ಕಾಂ' ನಮ್ಮ ಸಂಸ್ಕ್ರುತಿ ಮತ್ತು ಸಾಹಿತ್ಯಗಳನ್ನು ಸುಲಭವಾಗಿ ಪ್ರಪಂಚದ ಮೂಲೆ ಮೂಲೆಗಳಿಗೆ ದೊರಕಿಸುವಹಾದಿಯಲ್ಲಿ ದುಡಿಯುತ್ತಿದ್ದು,ಅದರ ಸಾಮರ್ಥ್ಯವನ್ನು ,ಸಾಧ್ಯತೆಗಳನ್ನೂ ಎಲ್ಲರೊಡನೆ ವಿಚಾರವಿನಿಮಯ ಮಾಡಿಕೊಂಡಿತು, ಎಂದು ಧಾರಾಳವಾಗಿ ಹೇಳಬಹುದು. ಯುವ ಜನರಿಗೆ ತಾವು ಕೂಡ ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಸಹಾಯ ಹಸ್ತ ವನ್ನು ಕೊಡುವುದರ ಮೂಲಕ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಬಹುದೆಂದು ಶೆಖರ್ ಬಿನ್ನವಿಸಿಕೊಂಡರು. ಕಾರ್ಯಕ್ರಮಕ್ಕೆ
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲು ಸಾಧ್ಯವಾಗಲಿಲ್ಲ. ಅದೇ ದಿನ ಮುಂಬೈನಲ್ಲಿ ಸ್ವಾಮಿಗಳ ಕಾರ್ಯಕ್ರಮ ಕೂಡ ಇತ್ತು. ಪುಣೆಯ ಕನ್ನಡ ವಿಧ್ಯಾರ್ಥಿನಿಯರು 'ಸ್ವಾಗತ ಗೀತೆ' ಹಾಡಿ ಕಾರ್ಯಕ್ರಮಕ್ಕೆ 'ಶ್ರೀಗಣೇಶ'ಮಾಡಿದರು. ಶೇಖರ್ ಜೊತೆ, ಯುವ ಮನಸ್ಸುಗಳಾದ ಬಿ.ಚಿದಾನಂದ, ನರಸಿಂಹದತ್ತ, ರೋಹಿತ್, ಅರೇಹಳ್ಳಿರವಿ,ಮುಂತಾದವರು ಅನವರತವಾಗಿ ದುಡಿಯುತ್ತಿದ್ದು, ಈ ಅಭಿಯಾನದ ಯಶಸ್ಸಿಗೆ ಕಾರಣ ರಾಗಿದ್ದಾರೆ.
ಕನ್ನಡದ ಅತ್ಯುತ್ತಮ ಸಾಹಿತ್ಯ, ಚಿಂತನಶೀಲ ಲೇಖನಗಳನ್ನೂ, ನಾಟಕ, ಕಾವ್ಯ ಮುಂತಾದ ಪಠ್ಯ ಗಳನ್ನೂ ಲೇಖಕರ ಅನುಮತಿಯೊಂದಿಗೆ ಮೊದಲು ಒಂದೊಂದಾಗಿ ಪ್ರಕಟಿಸಲು ಪ್ರಾರಂಭಿಸಿದ್ದು, ಇಂದು ಅಂತರ್ಜಾಲದಲ್ಲಿ ಸಿಗುವ ಏನೆಲ್ಲಾ ಸೊಗಸಾದ ಕೃತಿಗಳ ಪಟ್ಟಿ ಓದಿ :
೧. ಕೆ.ವಿ.ಸುಬ್ಬಣ್ಣ (ಮ್ಯಗ್ ಸೆಸೆ ಪ್ರಶಸ್ತಿ ವಿಜೇತರು)
೨. ಡಾ. ಯು.ಆರ್. ಅನಂತಮೂರ್ತಿ (ಜ್ಞಾನ ಪೀಠ ಪ್ರಶಸ್ತಿ ವಿಜೇತರು)
೩. ಎಸ್.ಎಲ್.ಬೈರಪ್ಪ (ಸಾಹಿತ್ಯ ಅಕೇಡಮಿ ವಿಜೇತರು)
೪. ಚಂದ್ರ ಶೇಖರ ಕಂಬಾರ
೫. ಯಶವಂತ ಚಿತ್ತಾಲ
೬. ಶಂಕರ ಮೊಕಾಶಿ ಪುಣೇಕರ
೭. ಕುಂ. ವೀರಭದ್ರಪ್ಪ
೮. ಅಬ್ದುಲ್ ರಶೀದ್
೯. ಕೆ.ಎಸ್. ನಿಸಾರ್ ಅಹಮದ್
೧೦. ನಾ. ಡಿಸೋಜ
೧೧. ದೇವನೂರು ಮಹದೇವ
೧೨. ಬಿ.ಎಂ.ಶ್ರಿ. ಇತ್ಯಾದಿ.
ಒಟ್ಟಿನಲ್ಲಿ , ಇದೊಂದು 'ಮಾಹಿತಿ ತಂತ್ರ ಜ್ಞಾನ'ದ ಬಳಕೆಯಿಂದ ಕನ್ನಡದ ಸಾಹಿತ್ಯ ಸಂಪತ್ತನ್ನು ಬೆಳೆಸುವ ದಿಶೆಯಲ್ಲಿ ಇಟ್ಟ ಇನ್ನೊಂದು ದಿಟ್ಟ ಹೆಜ್ಜೆ !!
ಕೃಪೆ : ಕನ್ನಡಸಾಹಿತ್ಯ.ಕಾಂ, "ಕನ್ನಡದ ಕಣ್ಣಲ್ಲಿ ವಿಶ್ವದ ಕನಸು"- ಚಿ.ಅರೇಹಳ್ಳಿ ರವಿಯವರ ಲೇಖನ. ಮತ್ತು ನಾನೇ ಸ್ವತಃ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆ !
Comments
ನಿಮ್ಮಂಥ ಹಿರಿಯರ ಮಾರ್ಗದರ್ಶನ ಕನ್ನಡಸಾಹಿತ್ಯಡಾಟ್ಕಾಂಗಿರಲಿ.........
In reply to ನಿಮ್ಮಂಥ ಹಿರಿಯರ ಮಾರ್ಗದರ್ಶನ ಕನ್ನಡಸಾಹಿತ್ಯಡಾಟ್ಕಾಂಗಿರಲಿ......... by ravee...
ನಿಮ್ಮಂತಹ ಹಿರಿಯರ.........