ಮುಕುಲ್ ಶರ್ಮ ಎಂಬುವವರಿಗೆ ನನ್ನ ಶ್ರದ್ಧಾಂಜಲಿ

ಮುಕುಲ್ ಶರ್ಮ ಎಂಬುವವರಿಗೆ ನನ್ನ ಶ್ರದ್ಧಾಂಜಲಿ

ಮುಕುಲ್ ಶರ್ಮಾ ಇನ್ನಿಲ್ಲ ಎಂಬ ಸುದ್ದಿ ನಿನ್ನೆಯ ಪತ್ರಿಕೆಯಲ್ಲಿ ಬಂದಿದೆ. ಇದನ್ನು ಈಗ ತಾನೇ ಗಮನಿಸಿದೆ.
ಯಾರು ಈ ಮುಕುಲ್ ಶರ್ಮ? ಪತ್ರಿಕೆಯಲ್ಲಿ ಈತ ಕಿಡಿಗೇಡಿತನ ಮತ್ತು ತುಂಟತನದ ಹಾಸ್ಯ ಪ್ರಜ್ಞೆ ಉಳ್ಳ ಹಾಗೂ ಸ್ವತಂತ್ರ ವಿಚಾರ ದ ವ್ಯಕ್ತಿ, ವೈಜ್ಞಾನಿಕ ಬರಹಗಾರ, ಈತ ಸಾಯನ್ಸ್ ಟುಡೇ ಎಂಬ ಪತ್ರಿಕೆಯ ಸಂಪಾದಕನಾಗಿದ್ದ ಮತ್ತು ಈತನ ಮೊದಲ ಹೆಂಡತಿ ಸುಪ್ರಸಿದ್ಧ ನಿರ್ದೇಶಕಿ ಅಪರ್ಣಾ ಸೇನ್, ಈತ ಬರೆದ ಕಥೆಗಳನ್ನು ಆಧರಿಸಿ ಮೂರು ನಾಲ್ಕು ಚಲನಚಿತ್ರ ಗಳು ಬಂದಿವೆ ಎಂದೆಲ್ಲಾ ಬಂದಿದೆ.

ಜೊತೆಗೆ ಈ ಮಾಹಿತಿಯೂ ಇದೆ. ಈತ ಮೈಂಡ್ ಸ್ಪೋರ್ಟ್ ಎಂಬ ಅಂಕಣವನ್ನು ಹಿಂದೆ ಪ್ರಸಿದ್ಧವಾಗಿದ್ದು ನಂತರ ನಿಂತು ಹೋದ ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ ವಾರಪತ್ರಿಕೆಯಲ್ಲಿ ಮತ್ತು ಅದು ನಿಂತು ಹೋದ ಮೇಲೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಸುಮಾರು 25 ವರ್ಷಗಳ ಕಾಲ ಬರೆಯುತ್ತಿದ್ದ. ಇದಕ್ಕೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದರು ಎಂಬ ಮಾಹಿತಿ ಕೂಡ ಇದೆ.

ಈ ಅಂಕಣವನ್ನು ನಾನು ಸುಮಾರು 30 ವರ್ಷಗಳ ಹಿಂದೆ ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ ವಾರಪತ್ರಿಕೆಯಲ್ಲಿ ನಾನು ಗಮನಿಸಿದೆ. ನನ್ನ ಸಹೋದ್ಯೋಗಿ ಸ್ನೇಹಿತ ಕೂಡ ಅಂಕಣವನ್ನು ಮೆಚ್ಚಿಕೊಂಡಿದ್ದು ಅವನು ಅನೇಕ ಹಿಂದಿನ ಸಂಚಿಕೆಗಳಿಂದ ಆ ಅಂಕಣದ ಪುಟಗಳನ್ನು ಕತ್ತರಿಸಿಟ್ಟುಕೊಂಡ ಬೈಂಡ್ ಮಾಡಿಸಿ ಇಟ್ಟುಕೊಂಡಿದ್ದ! ಅದನ್ನು ನನಗೆ ಓದಲು ಕೊಟ್ಟ. ಅದರಲ್ಲಿ ಈ ಮುಕುಲ್ ಶರ್ಮ ಬಗೆ ಬಗೆಯ ಗಣಿತ ಹಾಗೂ ತರ್ಕದ ಸಮಸ್ಯೆಗಳನ್ನು ತುಂಬ ಸ್ವಾರಸ್ಯಪೂರ್ಣ ವಾಗಿ ಚರ್ಚಿಸುತ್ತಿದ್ದರು. ಅದನ್ನು ಪಡೆದುಕೊಂಡು ನಾನು ಸತತವಾಗಿ ಮೂರ್ನಾಲ್ಕು ದಿನ ಊಟ ತಿಂಡಿಯ ಸಮಯದಲ್ಲಿ ಕೂಡ ಓದಿ ಮರಳಿಸಿದೆ. ಈ ಓದು ನನ್ನ ವೃತ್ತಿ ಜೀವನದಲ್ಲಿ ಒಂದು ಪ್ರಮುಖ ತಿರುವಿಗೆ ಕಾರಣವಾಯಿತು ಎನ್ನಬಹುದು. ( ಮತ್ತೆ ಈ ಗೆಳೆಯ ಕೂಡ ಮುಂದೆ ಕೆಲ ವರ್ಷಗಳ ನಂತರ ಅಂಥದೇ ತಿರುವು ಪಡೆದುಕೊಂಡು ನಂತರ ಇನ್ನೂ ಏನೇನೋ ಅವಕಾಶಗಳಿಂದ ತನ್ನ ಯೋಗ್ಯತೆ ಅರ್ಹತೆ ಗುಣನಡತೆಗಳಿಗೆ ತಕ್ಕ ಹಾಗೆ ಒಂದು ಭಾರಿ ಕಂಪನಿಯಲ್ಲಿ ಭಾರಿ ದೊಡ್ಡ ಉದ್ಯೋಗದಲ್ಲಿ ಇದ್ದಾನೆ. ಈತನ ಬಗ್ಗೆ 12 ವರ್ಷಗಳ ಹಿಂದೆ ಇದೇ ಸಂಪದ ತಾಣದಲ್ಲಿ ಬರೆದಿದ್ದೆ . https://sampada.net/blog/shreekant_mishrikoti/08/12/2006/2537 ಅದನ್ನು 2650 ಜನ ಈ ತನಕ ಓದಿದ್ದಾರೆ )

ಆ ಅಂಕಣದಲ್ಲಿ ಬಂದ ಸಮಸ್ಯೆಯೊಂದು ಇನ್ನೂ ನೆನಪಿದೆ. ಅದರ ಕುರಿತು ಓದುವ ಮೊದಲು ಅಂಥ ಒಂದು ನಗೆ ಹನಿ ಯನ್ನು ಮೊದಲು ಕೇಳಿ!

ಒಂದು ಶಾಲೆಯಲ್ಲಿ ಇನ್ಸ್ಪೆಕ್ಷನ್ ಗೆ ಬಂದ ಇನ್ಸ್ಪೆಕ್ಟರ್ ಒಬ್ಬರು ಈ ಪ್ರಶ್ನೆಯನ್ನು ಮಕ್ಕಳಿಗೆ ಕೇಳಿದರು.
ಒಂದು ವಿಮಾನ ಮೇಲೆ ಗಂಟೆಗೆ ನಾಲ್ಕು ನೂರು ಕಿಲೋಮೀಟರ್ ವೇಗದಲ್ಲಿ ಹಾರುತ್ತಿದೆ - ಕೆಳಗೆ ಅದೇ ದಿಕ್ಕಿನಲ್ಲಿ ಒಂದು ರೈಲು ಗಂಟೆಗೆ ನೂರು ಕಿಲೋಮೀಟರ್ ವೇಗದಲ್ಲಿ ಓಡುತ್ತಿದೆ. ಇವೆರಡರ ನಡುವೆ ನಾನು ಇದ್ದರೆ ನನ್ನ ವಯಸ್ಸು ಎಷ್ಟು?
ಈ ವಿಚಿತ್ರ ಪ್ರಶ್ನೆಗೆ ಒಬ್ಬ ಹುಡುಗ ಉತ್ತರ ಹೇಳಿ ಯ ಬಿಟ್ಟ, 40 ಅಂತ! ಇನ್ಸ್ಪೆಕ್ಟರ್ ಗೆ ಆಶ್ಚರ್ಯವಾಯಿತು ಏಕೆಂದರೆ ಅವರು ಅವರು ನಿಜಕ್ಕೂ 40 ಆಗಿತ್ತು!! ಆ ಹುಡುಗನಿಗೆ ಕೇಳಿದರು ಅದು ಹೇಗೆ ಸರಿಯಾಗಿ ಲೆಕ್ಕ ಹಾಕಿದೆ ? ಅಂತ.

ಆ ಹುಡುಗ ಹೇಳಿದ..... ಸರ್ ನಮ್ಮ ಮನೆಯಲ್ಲಿ ಒಬ್ಬ ಅರೆ ಹುಚ್ಚ ಇದ್ದಾನೆ ಅವನಿಗೆ ವಯಸ್ಸು 20 ವರ್ಷ!

ಈಗ ಈ ನನ್ನ ತಲೆ ಹರಟೆಯನ್ನು ಕ್ಷಮಿಸಿ, ಮುಕುಲ್ ಶರ್ಮ ಅವರು ಹೇಳಿದ ಸಮಸ್ಯೆಯನ್ನು ಕೇಳಿ -

ಒಬ್ಬ ದಕ್ಷಿಣ ದಿಕ್ಕಿಗೆ ಹತ್ತು ಕಿಲೋಮೀಟರ್ ಹೋಗುತ್ತಾನೆ ಆಮೇಲೆ ಪೂರ್ವದಿಕ್ಕಿಗೆ 10 ಕಿಲೋಮೀಟರ್ ಹೋಗುತ್ತಾನೆ ನಂತರ ದಿಕ್ಕು ಬದಲಿಸಿ ಉತ್ತರ ದಿಕ್ಕಿಗೆ ಹತ್ತು ಕಿಲೋಮೀಟರು ಹೋಗುತ್ತಾನೆ ಆಮೇಲೆ ಪಶ್ಚಿಮ ದಿಕ್ಕಿನಲ್ಲಿ 10 ಕಿಲೋಮೀಟರ್ ಹೋಗುತ್ತಾನೆ ಆಗವನು ತನ್ನ ಪ್ರಾರಂಭದ ಸ್ಥಳದಲ್ಲೇ ಇರುತ್ತಾನೆ ಹಾಗಾದರೆ ಅಲ್ಲಿ ಇರುವ .......... ಪ್ರಾಣಿಯ ಬಣ್ಣ ಏನು??!!

ಇದಕ್ಕೆ ಒಂದು ಉತ್ತರ, ಬಿಳಿ ಏಕೆಂದರೆ ಆ ಪ್ರಾಣಿ ಹಿಮ ಕರಡಿ ಯಾಗಿರುತ್ತದೆ. ಯಾಕೆಂದರೆ ಅದು ಧ್ರುವ ಪ್ರದೇಶ ಆಗಿರುತ್ತದೆ.

ಈ ಉತ್ತರ ಕೊಟ್ಟ ಮುಕುಲ್ ಶರ್ಮ ಈ ಸಮಸ್ಯೆಯನ್ನು ವಿವರವಾಗಿ ವೈಜ್ಞಾನಿಕವಾಗಿ ಚರ್ಚಿಸಿದ್ದರು. ಉತ್ತರವನ್ನು ಸಮರ್ಥಿಸಿದ್ದರು ಅಷ್ಟೇ ಅಲ್ಲದೆ ಇಂಥ ಜಾಗ ಕೇವಲ ಧ್ರುವ ಪ್ರದೇಶ ಅಷ್ಟೇ ಅಲ್ಲ ಬೇರೆ ಎಲ್ಲಿವೆ ಎಷ್ಟಿವೆ ಎಂದಲ್ಲ ತಿಳಿಸಿದ್ದರು!
ಈಗ ಅವರು ತೀರಿಕೊಂಡಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುವೆ.

Rating
Average: 4 (1 vote)