ಮುಕೆಶ್ ರ "ಕಹಿ ದೂರ್ ಜಬ್ ದಿನ್ ಡಲ್ ಜಾಯೆ" ಕನ್ನಡೀಕರಣಗೊಂಡಾಗ.............
ಜಾನೇ ಕಹಾ ಗಯೇ ವೋ ದಿನ್.....
ಹೃದಯದ ನೋವೆಲ್ಲಾ ಬಸಿದು ಹಾಡುತಿದ್ದ , ದಶಕಗಳ ಕಾಲ ತನ್ನ ದು:ಖತಪ್ತ ಗೀತೆಗಳಿಂದಲೇ ಹಿನ್ನೆಲೆಗಾಯನದ ಲೋಕವನ್ನು ಆಳಿದ, ನೆಚ್ಚಿನ ಗಾಯಕ ಮುಕೇಶ್ ಇಂದು ಬದುಕಿರುತ್ತಿದ್ದರೆ ೯೦ ರ ಅಜ್ಜನಾಗಿರುತ್ತಿದ್ದ. ೨೨ನೇ ಜುಲೈ ಮುಕೇಶ್ರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಆ ಮಹಾನ್ ಚೇತನವನ್ನು ನೆನೆಯುತ್ತಾ, ಆತನೇ ಹಾಡಿದ "ಆನಂದ್" ಸಿನಿಮಾದ "ಕಹಿ ದೂರ್ ಜಬ್ ದಿನ್ ಡಲ್ ಜಾಯೆ" ಹಾಡನ್ನು ಗುನುಗುತ್ತಾ ಈ ಹಾಡನ್ನು ಕನ್ನಡೀಕರಣಗೊಳಿಸಲು ಪ್ರಯತ್ನಿಸಿದ್ದೇನೆ. ನಾನು ಸ್ವತಃ ಹಾಡುಗಾರನಲ್ಲದಿದ್ದರೂ ನನ್ನ ನೆಚ್ಚಿನ ಗಾಯಕನಿಗೆ ಅರ್ಪಿಸುವ ಶ್ರದ್ಧಾಂಜಲಿಯ ಪ್ರಯತ್ನವೇ ಇಲ್ಲಿ ಮುಖ್ಯವಾದುದು ಎಂದು ಕೇಳುಗರು ನನ್ನ ಭರಿಸಬೇಕು.....
ಹಾಡಿನ ಆಶಯಕ್ಕೆ ಚ್ಯುತಿ ಬರದಂತೆ ಅದರ ಭಾವಕ್ಕೆ ಮಾತ್ರ ಕನ್ನಡದ ಅಕ್ಷರಗಳನ್ನು ಪೋಣಿಸಿದ್ದೇನೆ. ಓದುಗರು ಮತ್ತು ಕೇಳುಗರು ಇದನ್ನು ಆಲಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರೆ ಆ ಮಹಾನ್ ಗಾಯಕನ ಹಾಡಿಗೆ ನನ್ನ ಈ ತೃಣ ಮಾತ್ರದ ಸೇವೆ ಸಂದಂತೆ ಎಂದು ಭಾವಿಸುತ್ತೇನೆ.
ಮೊದಲಿಗೆ ಹಿಂದಿಯ ಆ ಹಾಡನ್ನು ಯೂ ಟ್ಯೂಬ್ ಅಲ್ಲಿ ಕೇಳಿ ಆನಂದಿಸೋಣ.
ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ....
https://www.youtube.com/watch?v=BmYT79bYIQw.
ಕನ್ನಡದ ಸಾಲುಗಳಲ್ಲಿ ...ನನ್ನ ದನಿಯಲ್ಲಿ...
https://drive.google.com/?authuser=0&usp=gmail#folders/0BzlvEoNlCWozVXVz...
ನಾನು ಬರೆದ ಕನ್ನಡದ ಸಾಲುಗಳು ಇಂತಿವೆ....
ಈ ದಿನ ಹಾಡಾಗಿದೆ ಮನವು ಮರೆತೆನು ನನ್ನ...ನೆನಪಲಿ ನಿನ್ನ ...ಮಿಂಚಿನ ಕಣ್ಣ....
ನನ್ನೀ ಮನದ ಅಂಗಳದಲ್ಲಿ ...ಅರಳಿದ ಸುಮವು ಆದರೆ ನೀನು ..ಎಂತಹ ಚೆನ್ನ...
ಮುಳುಗಿಹ ಸೂರ್ಯನ ನೆನಪಲಿ ಇಳೆಯು...
ಕಂಬನಿ ಹರಿಸಲು ಸುರಿದಿದೆ ಮಳೆಯು.....
ಉದಿಸಿದ ಸೂರ್ಯ ...ಒರೆಸುತ ಹನಿಯ ..ಭುವಿಯ ಮೊಗದಲಿ ಮೂಡಿತು ನಗೆಯು...
ಮೂಡಿತು ನಗೆಯು....
ಹೃದಯವು ಬೆಸೆಯದೆ ಹೋದರೂ ಎಂದೂ...........
ಭಾವದ ವೀಣೆಯು ಮಿಡಿದಿದೆ ತಂತು ...........
ಆದಾವ ಜನ್ಮದ ಪ್ರೇಮದ ನಂಟು....ಉಳಿದಿಹ ಜನ್ಮಕು ಮಿಗಿಸಲಿ ಕಂತು ....
ಮಿಗಿಸಲಿ ಕಂತು.....................
ಇಂತಿ ನಿಮ್ಮ
ಭಾರ್ಗವ.
Comments
ಉ: ಮುಕೆಶ್ ರ "ಕಹಿ ದೂರ್ ಜಬ್ ದಿನ್ ಡಲ್ ಜಾಯೆ" ಕನ್ನಡೀಕರಣಗೊಂಡಾಗ.......
ಭಾರ್ಗವ ರವರೇ,ನಮಸ್ಕಾರ. ಕಹೀಂ ದೂರ..... ಸುಂದರ ಅನುವಾದ. ಮುಖೇಶ್ ಈ ದೇಶ ಕಂಡ ಅಮರ ಗಾಯಕ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನನ್ನದೂ ಪ್ರಾರ್ಥನೆ.
ಉ: ಮುಕೆಶ್ ರ "ಕಹಿ ದೂರ್ ಜಬ್ ದಿನ್ ಡಲ್ ಜಾಯೆ" ಕನ್ನಡೀಕರಣಗೊಂಡಾಗ.......
ಭಾರ್ಗವರೆ
ನಿಮ್ಮ ಕಡತಕ್ಕೆ ಪಬ್ಲಿಕ್ ಅಕ್ಸೆಸ್ ಕೊಡಿ ; ನನಗೆ ಅದು unable to access ; check folder permissions ಅಂತ ಬರ್ತಿದೆhttps://drive.google.com/?authuser=0&usp=gmail#folders/0BzlvEoNlCWozVXVz...
ಅನುವಾದ ತುಂಬ ಚೆನ್ನಾಗಿದೆ.