ಮುಕ್ತಾದ ಮಂಗಲತ್ತೆ ಒಂದಿಷ್ಟು ಪ್ರಶ್ನೆ ಎಸೆದರು...ನನ್ನುತ್ತರ ಹೀಗಿತ್ತು ಅವುಗಳಿಗೆ!!!
Jayalaxmi Patil:
ಪ್ರೀತಿ, ಸ್ನೇಹ, ಪರಿಚಯ, ಆತ್ಮೀಯತೆ, ನನ್ನವರು, ನಂಬಿಕೆ, ವೈರಿ...... ಈ ಎಲ್ಲದಕ್ಕೂ ಸೆಡ್ಡು ಹೊಡೆದು ನಿಲ್ಲುವುದು, ಎಲ್ಲವನ್ನೂ ಸುಳ್ಳಾಗಿಸುವುದು ಯಾವುದು ಗೊತ್ತಾ?
Shiela Nayak:
ಜವಾಬ್ದಾರಿ, ಮರ್ಯಾದೆ ಮತ್ತು ಸಂಪತ್ತು!
*******************************
Jayalaxmi Patil:
ಸ್ನೇಹವೆಂದರೆ.....
Shiela Nayak:
ಗಟ್ಟಿ ಅಪ್ಪುಗೆ!
*******************************
Jayalaxmi Patil:
ಪರಿಚಯವೆಂದರೆ......
Shiela Nayak:
ಹಿಂದಿನ ಜನ್ಮದ ಅಳಿದುಳಿದ ಬಂಧ!
****************************
Jayalaxmi Patil:
ನನ್ನವರು ಎಂದರೆ.......
Shiela Nayak:
ನನ್ನೊಳಗಿನ ನನ್ನನ್ನು ಅರಿತವರು...ಕಣ್ಣ ಭಾಷೆ, ಹೃದಯ ಭಾಷೆ ಅರಿತವರು!
***************
Jayalaxmi Patil:
ವೈರಿಯೆಂದರೆ......
Shiela Nayak:
ದ್ವೇಷ, ರೋಷ!
*****************
Jayalaxmi Patil:
ಆತ್ಮೀಯತೆಯೆಂದರೆ......
Shiela Nayak:
ಒಬ್ಬರನೊಬ್ಬರು ಅರ್ಥಮಾಡಿಕೊಳ್ಳುವುದು.....ಮಾತಿನ ಹಂಗಿಲ್ಲದೆ!
*****************************
Jayalaxmi Patil:
ನಂಬಿಕೆಯಂದರೆ.........
Shiela Nayak :
ನೀನೆ ನಾನು, ನಾನೇ ನೀನು!
*************
Jayalaxmi Patil:
ಪ್ರೀತಿಯೆಂದರೆ.....
Shiela Nayak:
ಆತ್ಮ ಬಲ!
*************
Comments
ನಾಯಕರೆ,
ನಾಯಕರೆ,
ಚೆನ್ನಾಗಿದೆ ಮಂಗಲತ್ತೆಯ ಯಕ್ಷ ಪ್ರಶ್ನೆಗಳು ಹಾಗು ಧರ್ಮನಂದನ ರೀತಿಯೇ ನೀವು ಅವಕ್ಕೆ ಉತ್ತರಿಸಿರುವುದೂ ಚೆನ್ನಾಗಿದೆ.
In reply to ನಾಯಕರೆ, by makara
ಧನ್ಯವಾದ ಶ್ರೀಧರ ಅವರೇ, ಯಕ್ಷ
ಧನ್ಯವಾದ ಶ್ರೀಧರ ಅವರೇ, ಯಕ್ಷ-ಧರ್ಮ ಸಂವಾದದಂತೆ ಎಂದು ಈ ನಿತ್ಯ ಸತ್ಯಕ್ಕೆ ಮೆರುಗು ನೀಡಿದಿರಿ! ಅಂದ ಹಾಗೆ ಈ ರೀತಿಯ ಶ್ಲಾಘನೆ ಸಿಕ್ಕಿದು ಇದು ಎರಡನೆಯ ಸಲ! ಮತ್ತೊಮ್ಮೆ ಧನ್ಯವಾದ!
-ಶೀಲಾ