ಮುಗಿದರೂ ಮುಗಿಯದ್ದು
ಈ ವರ್ಷ ಏನೆಲ್ಲಾ ಬರೆಯಬೇಕೆಂದುಕೊಂಡಿದ್ದೆ...
ಸ್ವಾರ್ಥದ ಒಳ್ಳೆತನ ಮತ್ತು ಅಗತ್ಯ. ಕನ್ನಡದ ಉಳಿವು ಬೇರೆಲ್ಲಾ ಸಂಗತಿಗಳ ಜತೆ ಬೆಸೆದುಕೊಂಡಿರುವುದು. ಕಳೆದ ದಶಮಾನದಲ್ಲಿ ಹಿಂದೂ ಮೂಲಭೂತವಾದಿತ್ವ ಎಷ್ಟೋ ಜನರಿಗೆ ತಮ್ಮ ನಿಲುವನ್ನು ಪರಿಶೀಲಿಸಿಕೊಳ್ಳಲು ಸಹಾಯ ಮಾಡಿದ್ದು. ಲೈಂಗಿಕತೆ ಮತ್ತು ಸಮಾನತೆಯ ನಡುವಿನ ಕೊಂಡಿ. ಹೀಗೆ ಪಟ್ಟಿ ತುಂಬಾ ಉದ್ದವಿದೆ. ಅವುಗಳಲ್ಲಿ ಕೆಲವನ್ನು ಬರೆದಿಟ್ಟು ತಿದ್ದಲು ಹೊತ್ತಾಗದೆ ಹಾಗೇ ಬಿಟ್ಟಿದ್ದೇನೆ.
ಇನ್ನು ನಾನು ಓದಿದ ಪುಸ್ತಕಗಳ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ, ನೋಡಿದ ಚಿತ್ರಗಳ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ, ಕಲಕಿದ ಘಟನೆಗಳ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ, ಇನ್ನೂ ಏನೇನೋ ಬರೆಯಬೇಕೆಂದುಕೊಂಡಿದ್ದೆ.
ಹಾಗೇ ನಾಕಾರು ಕತೆಗಳು, ಕಾದಂಬರಿ, ಚಿತ್ರಕತೆ ಎಲ್ಲ ನನ್ನ ಜತೆ ಇಡೀ ವರ್ಷ ಜಗಳ ಆಡಿವೆ. ಅವುಗಳಿಗೊಂದು ಇತ್ಯರ್ಥ ಕಾಣಿಸಬೇಕು ಅಂದುಕೊಂಡಿದ್ದೆ. ಆದರೆ ಅವುಗಳ ಜತೆ ಜಗಳ ಇನ್ನೂ ಮುಗಿದಿಲ್ಲ.
ಅಂದು ಕೊಂಡದ್ದು ನೂರಾದರೆ ಆಗಿದ್ದು ಒಂದಕ್ಕಿಂತ ಕಡಿಮೆ ಎಂದು ಮರುಗಿದರೆ ಏನು ಬಂತು? ನೂರಕ್ಕೆ ನೂರು ಆಗ ಮಾಡುವುದು ಹೇಗೆ ಎಂದು ಯೋಚಿಸುತ್ತಾ ಕುಳಿತಿದ್ದೇನೆ. ಹೊಸ ವರ್ಷ ಬರುತ್ತದೆ. ಮರೆತಿದ್ದ ಸಾಧ್ಯತೆಗಳನ್ನು ಮತ್ತೆ ನೆನಪಿಸುತ್ತದೆ,
ಶುಭದ ಆಶಯಕ್ಕಿಂತ ಆಶಯಗಳ ಸಫಲತೆ ಮೇಲು ಎಂದು ಕೂಡ...