ಮುಗಿಯದ ಬಿಹಾರಿಗಳ ಅಟ್ಟಹಾಸ

ಮುಗಿಯದ ಬಿಹಾರಿಗಳ ಅಟ್ಟಹಾಸ

ಎಲ್ಲರಿಗು ಶರಣು,
ನಾ ನೋಡಿಧಾಂಗ ಕರ್ನಾಟಕದಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಬೇಕು ಅನ್ನೋದು ನಮ್ಮ ಎಲ್ಲರಿಗು ಗೊತ್ತಿರೋ ವಿಷ್ಯ. ಅದ್ರ ಇಲ್ಲಿ ನೋಡ್ರಿ ಬ್ಯಾರೆ ರಾಜ್ಯದಿಂದ ಬಾರೋ ಮಂದಿ ನಮ್ಮ ಅನ್ನ ತಿಂದು, ನಮ್ಮ ರಾಜ್ಯದಾಗ ನೆಲಸಿ ನಮ್ಮ ಮಂದಿಮ್ಯಾಗ ದಬ್ಬಾಳಿಕೆ ಮಾಡ್ತಾರಂದ್ರ ಯಾವ ಮನಷ್ಯಾಗ ಇದು ಚೊಲೋ ಅನ್ನಿಸ್ತತಿ ಹೇಳ್ರಿ ನೋಡುನು. ಮೊನ್ನೆ ಬೆಂಗಳೂರಿನ ಮಲ್ಲೇಶ್ವರದಾಗ ನೀರಿನ ಸಲುವಾಗಿ ಅಲ್ಲಿ ಕೆಲಸ ಮಾಡ್ತಿದ್ದ ನಮ್ಮ ಉತ್ತರ ಕರ್ನಾಟಕದ ಬಂಧುಗಳ ಮ್ಯಾಲೆ ಬಿಹಾರ ರಾಜ್ಯದೋರು ಹಲ್ಲೆ ನಡಸ್ಯಾರ. ಇದನ್ನ ನೋಡಿದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯವರು ಅವ್ರನ್ನ ಪೊಲೀಸರಿಗೆ ಒಪ್ಪಿಸ್ಯಾರ.
==================================================================================
ಕನ್ನಡ ಬಂಧುಗಳೆ,

ಭಾರತದ ಯಾವುದೇ ರಾಜ್ಯದ ಪ್ರಜೆಯಾಗಿರಲಿ ಅವನು ಇತರೆ ಯಾವುದೇ ರಾಜ್ಯ-ಪ್ರದೇಶಗಳಿಗೆ ಹೋಗಿ ನೆಲಸುವ ಸವಲತ್ತನ್ನು ನಮ್ಮ ಸಂವಿಧಾನ ಒದಗಿಸಿಕೊಟ್ಟಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಈ ಸಡಿಲಿಕೆಯ ನಿಯಮ ನಿಧಾನವಾಗಿ ಸ್ಥಳೀಯರ ನೆಮ್ಮದಿಯ ಬದುಕಿಗೆ ಮುಳ್ಳಾಗಿ ಪರಿಣಮಿಸುತ್ತಿರುವುದು ಎಲ್ಲೆಡೆ ಕಂಡು ಬರುತ್ತಿರುವ ಸತ್ಯ.

ಮುಂಬೈನಲ್ಲಿನ ಬಿಹಾರಿ ವಲಸಿಗರ ಹಾವಳಿಯಂದ ಬೇಸತ್ತ ಸ್ಥಳೀಯರು ಆಕ್ರೋಷಕ್ಕೊಳಗಾದ ಘಟನೆಯನ್ನು ನಾವು ಕಂಡಿದ್ದೇವೆ. ಈಗ ವಲಸಿಗರು ಕನ್ನಡಿಗರ ಮೇಲೆ ದಾಂಧಲೆ ನಡೆಸಿರುವ ವಿವರ ಬೆಂಗಳೂರಿನ ಮಲ್ಲೇಶ್ವರದಿಂದ ವರದಿಯಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ನಮ್ಮ (ಕರವೇ) ಕಾರ್ಯಕರ್ತರು, ಸ್ಥಳೀಯ ಪೋಲಿಸರಿಗೆ ಸುದ್ದಿ ಮುಟ್ಟಿಸುವ ಮೂಲಕ ಪರಿಸ್ಶಿತಿಯನ್ನು ಹತೋಟಿಗೆ ತಂದು ಗಾಯಾಳುಗಳಾದ ಕನ್ನಡಿಗರನ್ನು ಆಸ್ಪತ್ರೆಗೆ ಸೇರಿಸಿ, ಗಲಾಟೆಗೆ ಕಾರಣರಾದವರನ್ನು ಪೋಲಿಸರ ವಶಕ್ಕೊಪ್ಪಿಸಿದ್ದಾರೆ.

ತಾನು ಬದುಕುಕಟ್ಟಿಕೊಳ್ಳಲು ಬಂದು ನೆಲಸುವ ನೆಲಕ್ಕೆ, ತಮಗೆ ಅನ್ನ-ನೀರು-ಬಟ್ಟೆ-ವಸತಿ ಒದಗಿಸುವ ಜನಾಂಗಕ್ಕೆ ಚಿರರುಣಿಯಾಗಿರಬೇಕಾದ್ದು ಯವುದೇ ವಲಸಿಗನ ಸಾಮಾಜಿಕ ಜವಾಬ್ದಾರಿಯಾಗಿರಬೇಕು. ಇದನ್ನು ಅರಿತು ಕರ್ನಾಟಕಕ್ಕೆ ಬಂದು ನೆಲಸುವ ಯಾವುದೇ ವಲಸಿಗ ಕನ್ನಡಿಗರೊಡನೆ ಬೆರೆತು, ಅವರ ಒಳಿತು ಕೆಡುಕುಗಳಲ್ಲಿ ಸಮನಾಗಿ ಭಾಗಿಯಾಗಿ ಕನ್ನಡಿಗನಾಗಿ ಮಾರ್ಪಾಡಾಗುವ ಕೆಲಸವಾಗಬೇಕಿದೆ. ವಲಸಿಗರಿಗೆ ಇದನ್ನು ವ್ಯವಸ್ಥಿತವಾಗಿ ತಿಳಿಹೇಳುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿರುತ್ತದೆ.

ಕರ್ನಾಟಕದಲ್ಲಿ ಅನಿಯಂತ್ರಿತ ವಲಸೆ ತಡೆಹಿಡಿಯಲು ಇತರ ರಾಜ್ಯಗಳಿಂದ ಇಲ್ಲಿ ಬಂದಿರುವವರ ಅಂಕಿ-ಅಂಶ ತಯಾರಿಸುವ ಪ್ರಯತ್ನ ನಡೆಯಬೇಕಿದೆ. ಒಂದು ನಾಡು ಕಟ್ಟಲು ಎಷ್ಟು ವಲಸಿಗರ ಅಗತ್ಯವಿದೆ ಎಂದು ಮನಗಂಡು, ಅನಿಯಂತ್ರಿತ ವಲಸೆಗೆ ಕಡಿವಾಣ ಹಾಕುವಂತ ಕಾನೂನು ಅವಶ್ಯಕತೆಯಿರುವುದನ್ನು ಸರ್ಕಾರ ಗಮನಿಸಬೇಕಿದೆ.ಕರ್ನಾಟಕ ರಕ್ಷಣಾ ವೇದಿಕೆಯ ಆಗ್ರಹಕ್ಕೆ ತಾವುಗಳೆಲ್ಲರೂ ಕೈ ಜೋಡಿಸಬೇಕೆಂದು ನಮ್ಮ ಸವಿನಯ ಮನವಿ.

ಅದರ ವರದಿಯನ್ನು ಇಲ್ಲಿ ನೋಡಿ.
http://karave.blogspot.com/ 2008/12/mugiyada-bihaarigala- attahaasa.html

Rating
No votes yet

Comments