ಮುಚ್ಚಿದ ಬೊಗಸೆ
ಎರಡು
’ಸಾವಿರದ’
ಹದಿ-ನೆಂಟೆ’
ಸುರಿದು ಸುಖ ದು:ಖ
ನಿರ್ಲಿಪ್ತ ಸರಿ-ದೆ .....
ಇದೀಗ
ಎರಡು ಸಾವಿರದ
ಹತ್ತೊಂಭತ್ತು -
ತೆರೆ ಸರಿಸಿ
ಮುಚ್ಚಿದ ಬೊಗಸೆ .....
ಬಾ ಹೊಸತೆ
ಕೊಡು
ಭರವಸೆಯ ಬತ್ತಳಿಕೆ
ನೀಡು
ಆಸೆಗಳಿಗಾಸರೆ
ಹೂಡು ಭಾಗ್ಯ
ಗುರಿಯಿಡು
ನೊಂದವರ
ಬದುಕ ಬಾಗಿಲಿಗೆ
ಈಡಾಡು ಬೆಳಕೆ .....
ಮುಗಿಬೀಳಲಿ
ಮಿಗಿಲಿಲ್ಲದ ಹರ್ಷ
ಅದಕ್ಕಿರಲಿ ಗುರಿ
ಮುಗಿಲೆ!
- ಅನಂತ ರಮೇಶ್
Rating