ಮುತ್ತಿನ-ಶೃಂಗಾರ

ಮುತ್ತಿನ-ಶೃಂಗಾರ

ಕಗ್ಗತ್ತಲೆಯ ಕಾರ್ಮೋಡ ಕವಿದಿರುವ ಮನಸಿಗೆ
ಬಿರುಗಾಳಿಯುಕ್ತ ಮುಂಗಾರುಮಳೆಯಂತೆ
ಚುಂಬಿಸು ಒಮ್ಮೆ...........................
ನಾನಾಗುವೆ ಮುತ್ತಿನ ಕಡಲ
ಅಲೆ ಅಲೆಯ ಸಾಲು..........
ನಿನ್ನ ಮುತ್ತಿನ ಮಾತಿನಲ್ಲಿ ಏನಿಲ್ಲ ಪರಿಹಾರ
ಮತ್ತಿನ ಮಾತಲ್ಲಿ ಚುಂಬಿಸು ಒಮ್ಮೆ...........................
ಆ ತುಟಿಯ ಸ್ಪರ್ಶದ ಸಿಹಿಯ ಸವಿಗೆ...
ಆಗ ನಾ ಸೋಲುವೆ ನಿನ್ನ ಮೌನದ ನಗೆಗೆ
ಕನ್ಯೆಯಾದರೆ ನೀ ಕರಗೊಮ್ಮೆ ನೋಡಣ
ಇಲ್ಲವಾದರೆ,ಕಾಡದಿರು ಈ ತರಹ ನನ್ನ ,,,,,,

ನಿನ್ನ ಕಾಡುವ ಕೆಂದುಟಿಯ...
ಕಚ್ಚಿ ಕೆಂಪು ಮಾಡುವ ಆಸೆ
ಈ ಜಿದ್ದಿನಲ್ಲಿ ನೀ ಗೆದ್ದರೆ
ನಾ ನಿನ್ನ ಹಂಗಿನಲ್ಲಿ
ಇಲ್ಲವಾದರೆ....... ನೀ ನನ್ನ ತೆಕ್ಕೆಯಲ್ಲಿ
ಏನ್ ಅಂತಿಯ ಕಾಣದ ಕನ್ಯೆಯಂತೆ ಇರುವ
ನನ್ನ ಮನಮುಗಿಲ ಗೆಳತಿ.................
ಕನ್ಯೆಯಾದರೆ ನೀ ಕರಗೊಮ್ಮೆ ನೋಡಣ
ಇಲ್ಲವಾದರೆ,ಕಾಡದಿರು ಈ ತರಹ ನನ್ನ ,,,,,,

ಮರೆತಿರುವೆ ಎಂದೋ
ನಾ ನಿನ್ನ ಕಹಿ ನೆನಪುಗಳನ್ನ.....................
ಮರೆತರೆ ಮರುಕಳಿಸು ನಿನ್ನ ಮುತ್ತಿನ ಒಲೆಯ
ಮರೆಯದಿದ್ದರೆ ನನ್ನ ನೆನೆಸು ಒಮ್ಮೆ
ನಿನ್ನ ಮುತ್ತಿನ ಶೃಂಗಾರದಲ್ಲಿ........................
ಮುಸ್ಸಂಜೆ ವೇಳೆಯ ಹೊತ್ತ್ನಲ್ಲಿ ಮೂಡಿದ
ಈ ಪದಗಳ ಸಾಲಿನಲ್ಲಿ ನಿನ್ನ ಮಾತಿನ ಗುರುತಿಗೆ
ನನ್ನ ಮುತ್ತಿನ ಹೊರಡುವಿಕೆಗೆ ವಿದಾಯ ಗೆಳತಿ
ಕನ್ಯೆಯಾದರೆ ನೀ ಕರಗೊಮ್ಮೆ ನೋಡಣ
ಇಲ್ಲವಾದರೆ,ಕಾಡದಿರು ಈ ತರಹ ನನ್ನ ,,,,,,

Rating
No votes yet