ಮುತ್ತುಗಕ್ಕೆ ಮೂರೇ ಎಲೆ!
ಅರಸ ಮೆಚ್ಚಿ ಎಷ್ಟು ಕೊಡುವ?
ಬರೆದಷ್ಟು ಹಣೆಯಲಿ ಬೊಮ್ಮ!
ಇರುಳುಹಗಲು ಸುರಿದರೂ ಮಳೆ
ಮೂರೇ ಎಲೆ ಮುತ್ತುಗಕೆ*
*- ಮುತ್ತುಗದ ಎಲೆಗಳು ಮೂರುಮೂರಾಗಿ ಒಟ್ಟಾಗಿರುತ್ತವೆ. ಅಲ್ಲದೆ, ಮೂಲದಲ್ಲಿ ಅರಸ ಎಂದಿದ್ದರೂ, ಇವತ್ತಿಗೂ ಹೊಂದುವ ಮಾತು ಎಂದು ನನಗನಿಸುತ್ತೆ.
ಚಿತ್ರ : ವಿಕಿಪಿಡಿಯಾದಿಂದ
ಸಂಸ್ಕೃತ ಮೂಲ:
ತುಷ್ಟೋ ಹಿ ರಾಜಾ ಯದಿ ಸೇವಕೇಭ್ಯೋ
ಭಾಗ್ಯಾತ್ ಪರಂ ನೈವ ದದಾತಿ ಕಿಂಚಿತ್
ಅಹರ್ನಿಶಂ ವರ್ಷತಿ ವಾರಿವಾಹಃ
ತಥಾಪಿ ಪತ್ರತ್ರಿತಯಃ ಪಲಾಶಃ
-ಹಂಸಾನಂದಿ
Rating
Comments
ಉ: ಮುತ್ತುಗಕ್ಕೆ ಮೂರೇ ಎಲೆ!