ಮುತ್ತು ಒಂದು ಮುತ್ತು
ಬಿಗಿದಪ್ಪುವ ಮೊದಲೊಂದು ಮುತ್ತಿದಿರಲಿ ! ಲೆತ್ತದಾ ಗೆಲುವಿಗೊಂದು
ತುಸುವೇ ಮೈ ಬಳಸುತ್ತ ಕೊಟ್ಟ ಮುತ್ತ ಮರಳಿಸಿದಳಾ ಕೂಡಲೆ
ಅರೆ ಹಾಗಲ್ಲ! ಹೀಗೆ ಕೊಡಲು ಸೊಗಸು ಎನ್ನುತ್ತ ಮುತ್ತನಿಡುತಾ
ಎಂತೋ ಈರ್ವರ ಮುತ್ತುಗಳಲೇ ಇರುಳಿಡೀ ಕಳೆದು ಹೋಯ್ತು
ಸಂಸ್ಕೃತ ಮೂಲ ( ಅಮರುಕನ ಅಮರು ಶತಕದಿಂದ)
ಗಾಢಾಲಿಂಗನ ಪೂರ್ವಮೇಕಮನಯಾ ದ್ಯೂತೇ ಜಿತಂ ಚುಂಬನಂ
ತತ್ಕಿಂಚಿತ್ ಪರಿರಭ್ಯ ದತ್ತಮಮುನಾ ಪ್ರತ್ಯರ್ಪಿತಂ ಚಾನಯಾ ।
ನೈತತ್ತಾದೃಗಿದಂ ನ ತಾದೃಷಮಿತಿ ಪ್ರತ್ಯರ್ಪಣ ಪ್ರಕ್ರಮೈಃ
ಯೂನೋಶ್ಚುಂಬನಮೇಕಮೇವ ಬಹುಧಾ ರಾತ್ರಿರ್ಗತಾ ತನ್ವಯೋಃ ।।
गाढालिङ्गनपूर्वमेकमनया द्यूते जितम् चुम्बनम्
तत्किञ्चित् परिरभ्य दत्तममुना प्रत्यर्पितं चानया ।
नैतत्तादृगिदं न तादृशमिति प्र्त्यर्पणप्रक्रमैः
यूनोस्चुम्बनमेकमेव बहुधा रात्रिर्गता तन्वयोः ।।
ಅಮರು, ಅಮರುಶತಕ, ಅಮರುಕ, ಅನುವಾದ,ಪ್ರೀತಿ, ಮುತ್ತು, ಚುಂಬನ
-ಹಂಸಾನಂದಿ
ಕೊ: ಲೆತ್ತ = ಪಗಡೆಯಾಟ
ಕೊ.ಕೊ : ಇದು ಅಮರುಕನ ಅಮರುಶತಕದಿಂದ ಎಂದು ಕೇಳಿದ್ದೇನೆ, ಆದರೆ ನನ್ನ ಬಳಿ ಇರುವ ಒಂದು ಪ್ರತಿಯಲ್ಲಿ ಇದು ಕಾಣಬರಲಿಲ್ಲವಾಗಿ ಎಷ್ಟನೇ ಪದ್ಯ ಅಂತ ಹಾಕಲಾಗಲಿಲ್ಲ
ಕೊ.ಕೊ.ಕೊ : "ಮುತ್ತು ಒಂದು ಮುತ್ತು" ಅನ್ನುವ ೮೦ರ ದಶಕದ ಕನ್ನಡ ಸಿನೆಮಾಗೂ , ಈ ಪದ್ಯಕ್ಕೂ ಯಾವುದೇ ಸಂಬಂಧ ಇಲ್ಲ!
Comments
ಉ: ಮುತ್ತು ಒಂದು ಮುತ್ತು
ಚೆನ್ನಾಗಿದೆ ನಿಮ್ಮ ಮುತ್ತು ಒಂದು ಮುತ್ತು!
ಅದೇ ಹೆಸರಿನ ಸಿನಿಮಾ ನೀವು ತಿಳಿಸಿದಂತೆ ಹಿಂದೆ ಬಂದಿತ್ತು. ಕಾದಂಬರಿ ಆದಾರಿತ. ಅನಂತನಾಗ್ ಅಭಿನಯದ್ದು. ಕಾಲದ ಅಲೆಯಲ್ಲಿ ಸಿಕ್ಕಿ ತನಗೆ ಅರಿಯದೆ ತನ್ನ ತಂದೆಯ ಎರಡನೆ ಹೆಂಡತಿಗೆ ಮೊದಲ ಗಂಡನಿಂದ ಜನಿಸಿದ್ದ ಮೂಗಿ ಹುಡುಗಿಯೊಬ್ಬಳನ್ನು ಮದುವೆ ಆಗುವ ಕತೆ. (ತಂಗಿ ?) . ತಾಯಿಯ ಕ್ರೌರ್ಯದಿಂದ ಮೂಗಿಯಾಗಿದ್ದ ಆಕೆ ತನ್ನ ತಾಯಿಯನ್ನು ನೋಡಿ ಶಾಕ್ ನಲ್ಲಿ ಪುನಹ ಮಾತು ಬರುವುದು ಅನ್ನುವುದು ಕತೆ .