ಮುಸ್ಸಂಜೆ ರಂಗಲ್ಲಿ ....
ನೆನ್ನೆ ಆಫೀಸ್ ಇಂದ ಹೊರಗಡೆ ೬ ಘಂಟೆಯ ಕ್ಯಾಬ್ನ ಕಡೆ ನಡೀತಾ ಇದ್ದರೆ ಏನೋ ಒಂಥರಾ ಖುಷಿ ಭಾಸವಾಗ್ತಾ ಇತ್ತು. ಕಾರಣ ಮಾತ್ರ ಸ್ಪಷ್ಟ ಇಲ್ಲ . ಇತ್ತೀಚಿಗೆ ತುಂಬಾ ಕೆಲಸ, ಕಾಲ್ ಹಾಗೆ ಹೀಗೆ ಹೇಗೋ ಪ್ರತಿನಿತ್ಯ ಆಫೀಸ್ ಇಂದ ಹೊರಡೋದು ತಡವಾಗುತ್ತಿತ್ತು, ಇವತ್ತು ಸಂಜೆ ಆಫೀಸ್ ಇಂದ ಆಚೆ ಬರ್ತಾ ಸಾಲಲ್ಲಿ ನಿಂತ ಕ್ಯಾಬ್ಗಳನ್ನು ನೋಡ್ತಾ ಇದ್ದರೆ ಸ್ವಲ್ಪ ಖುಷಿ . ಇನ್ನು ಮುಳಗೋ ಸೂರ್ಯನ ನೋಡಿದ್ರೆ ಅಂತು ನಂಗೆ ತುಂಬಾ ಇಷ್ಟ .ಆಫೀಸ್ ಅಲ್ಲಿ ಎಷ್ಟ್ ಕೆಲಸ ಅಂದ್ರೆ ನಾ ಇತ್ತೀಚಿಗೆ ಹಾಡುಗಳ್ನ ಕೇಳೋದು ನಿಲ್ಲಿಸಿದಿನಿ. ೬.೨೦ ಗೆ ಕ್ಯಾಬ್ ಹೊರಡ್ ಬೇಕಾದರೆ ಆಗ್ತಾ ಇದ್ದ ಖುಷಿಗೆ earphone ಹಾಕ್ಕೊಂಡು ಹಾಡು ಕೇಳೋಕೆ ಶುರು ಮಾಡ್ದೆ . ಆಕಾಶವಾಣಿ ಇಂದ ಸಂಪರ್ಕ ಸರಿ ಇರಲ್ಲಿಲ, ಅದಕ್ಕೆ ನನ್ನ ಮೆಚ್ಚಿನ playlist ಗೆ ಹೋದೆ. ecity fly over ಮೇಲೆ ನಮ್ಮ ಕ್ಯಾಬ್ ಹೋಗುತ್ತೆ . ಒಂದೇ ಸೀಟ್ ಇರೋ ಮೊದಲನೆ ಸೀಟ್ ಅಲ್ಲಿ ಕೂತಿದ್ದೆ . ಆ fly over ಏರುವ ತಿರುವು ಮತ್ತೆ fly over ಮೇಲೆ ಹೋಗೋ ವೇಗಕ್ಕೆ ತಂಗಾಳಿಯ ಸ್ಪರ್ಶ ಮನಸಿಗೆ ಮುದ ನೀಡುತಿತ್ತು.
ನನ್ನ ಮೆಚ್ಚಿನ ಹಾಡು "ಮುಸ್ಸಂಜೆ ರಂಗಲ್ಲಿ ನಿನ್ನ ಪ್ರೀತಿ ರಂಗಲ್ಲಿ ತೇಲಿ ಹೋದೆ" ಬರ್ತಾ ಇತ್ತು . ನಾನು ಸನ್ನಿವೇಶಕ್ಕೆ ತಕ್ಕಾಗಿದೆ ಅಂದ್ಕೊಂಡೆ . ಅದೇನೋ ಗೊತ್ತಿಲ್ಲ ಮುಸ್ಸಂಜೆ ಅಂದ್ರೆ ನಂಗೆ ತುಂಬಾ ಇಷ್ಟ . ಕೇಸರಿ ಬಣ್ಣ ಅಂದ್ರೆ ತುಂಬಾನೇ ಇಷ್ಟ . ಇನ್ನು ಕೇಸರಿ ಬಣ್ಣದ ಸೂರ್ಯ ಹೊಳಿತಾ ಇದ್ರಂತು ಮನಸಿಗೆ ಎಂಥ ಆಹ್ಲಾದ . ಆ ಕ್ಷಣದಲ್ಲಿ ನಾ ಎಲ್ಲಾ ಮರತೆ . ಆಫೀಸ್ ನ ಕೆಲಸ , ಜೀವನದ ಜಂಜಾಟ ಎಲ್ಲಾ ಮರ್ತೆ. ಮನಸಿನ ಎಲ್ಲಾ ನೋವನ್ನು ಮರೆತು ಇಂದು ಮುಸ್ಸಂಜೆ ರಂಗಲ್ಲಿ ಸವಿ ಸಂಗೀತದ ಗುಂಗಲ್ಲಿ ನಾ ತೇಲಿ ಹೋದೆ.
ದಿನ ಹೀಗೆ ಮುಸ್ಸಂಜೆ ರಂಗಲ್ಲಿ ತೇಲಿ ಹೋಗಬೇಕು ಅಂತ ಅಂದ್ಕೊಂಡಿದೀನಿ , ನೋಡೋಣ ಆಫೀಸ್ ಕೆಲಸ ಹೇಗೆ ಇರುತ್ತೆ ಅಂತ .
Comments
ಉ: ಮುಸ್ಸಂಜೆ ರಂಗಲ್ಲಿ ....
ಉ: ಮುಸ್ಸಂಜೆ ರಂಗಲ್ಲಿ ....