ಮೂಢ ಉವಾಚ - 113

ಮೂಢ ಉವಾಚ - 113

ಸಾತ್ವಿಕತೆಯಿಂ ಅರಿವು ಶಾಂತಿ ಆನಂದ

ರಾಜಸಿಕ ಪಡೆಯುವನು ಆಯಾಸ ನೋವ |

ಪರರ ನೋಯಿಪ ತಾಮಸವೆ ಅಜ್ಞಾನ

ಹಿತವದಾವುದೀ ಮೂರರಲಿ ಮೂಢ ||


ಶ್ರದ್ಧೆಯಿರಬೇಕು ಮಾಡುವ ಕಾರ್ಯದಲಿ

ಕಾಯಕದ ಅರಿವು ಮೊದಲಿರಬೇಕು  | 

ಬಿಡದಿರಬೇಕು ಗುರಿಯ ಸಾಧಿಪ ಛಲವ 

ಯೋಗ ಭೋಗಸಿದ್ಧಿಗಿದುವೆ ದಾರಿ ಮೂಢ ||

**************

-ಕ.ವೆಂ.ನಾಗರಾಜ್.

Rating
No votes yet

Comments