ಮೂಢ ಉವಾಚ - 122

ಮೂಢ ಉವಾಚ - 122

ಹಿತಮಿತದ ಮಾತು ಬಾಳಿಗಾಧಾರ

ಹಿತಮಿತದ ಊಟ ಆರೋಗ್ಯಧಾರ |

ಹಿತಮಿತದ ಕರ್ಮ ಸೊಗಸಿನ ಮರ್ಮ

ಇತಿಮಿತಿಯಲಿ ಬಾಳೆಲೋ ಮೂಢ || . .243


ಸಂಕಲ್ಪದಿಂ ಕಾಮ ಕಾಮದಿಂ ಕರ್ಮ

ಕರ್ಮದಿಂ ಬಹುದು ಸುಖ ದುಃಖ ಪ್ರಾಪ್ತಿ

ಪುನರಪಿ ಮರಣ ಪುನರಪಿ ಜನನ

ಸಂಸಾರ ಚಕ್ರಕೆ ಮೂಲ ಸಂಕಲ್ಪ ಮೂಢ || . .244 

*******************

-ಕ.ವೆಂ.ನಾಗರಾಜ್.


Rating
No votes yet

Comments