ಮೂಢ ಉವಾಚ - 149

ಮೂಢ ಉವಾಚ - 149

ಬಯಸಿದರು ಸಾವೆ ಬಯಸದಿದ್ದರು ಸಾವೆ


ಬೇಡವೆಂದರೆ ನೀನು ಬರದಿಹುದೆ ಸಾವು |


ಬೇಡದಿರು ಮನವೆ ಬೇಡದಿಹ ಸಾವ


ಅಡ್ಡದಾರಿಯಲಿ ನುಗ್ಗದಿರು ಮೂಢ || ..297


ಇತ್ತಿಹನು ಭಗವಂತ ಬದುಕಲೀ ಬದುಕು


ಬದುಕುವ ಮುನ್ನ ಸಾಯುವುದೆ ಕೆಡುಕು |


ಸಾಯುವುದು ಸುಲಭ ಬದುಕುವುದು ಕಷ್ಟ


ಸುಲಭದ ಸಾವ ಬಯಸದಿರು ಮೂಢ || ..298


****************


-ಕ.ವೆಂ.ನಾಗರಾಜ್.


 Rating
No votes yet

Comments