ಮೂಢ ಉವಾಚ - 162

ಮೂಢ ಉವಾಚ - 162

 

ಜಗವೆಂತಿಹುದು ಎಷ್ಟಿಹುದು ಬಲ್ಲವರು ಇಹರೇನು
ಯಾರಿಗಾಗೀ ಜಗವು ರಚಿಸಿದವರಾರು |
ಆದಿ ತಿಳಿಯದೀ ಜಗಕೆ ಅಂತ್ಯವಿಹುದೇನು
ಜಗಜನಕನೇ ಬಲ್ಲ ಪ್ರಶ್ನೆಗುತ್ತರ ಮೂಢ || ..323


ರವಿ ಸೋಮರಿಹರು ಇಹುದು ಭೂಮಂಡಲವು
ವಾಯು ಜಲವಿಹುದು ಆಗಸವು ತುಂಬಿಹುದು |
ಜಗವನನುಭವಿಪ ಜೀವಿಗಳ ಲೆಕ್ಕವಿಟ್ಟವರಾರು
ಎಲ್ಲದಕೆ ಕಾರಣನು ಎಂತಿಹನೊ ಮೂಢ || ..324
*************
-ಕ.ವೆಂ.ನಾಗರಾಜ್.
 

 

Rating
No votes yet

Comments