ಮೂಢ ಉವಾಚ - 165
ಮಾಯೆಯ ಮುಸುಕಿನಲಿ ನಡೆದಿಹುದು ಜಗವು
ಜಗದ ಅವಸಾನವದು ಮರೆಯಾಗೆ ಮಾಯೆ |
ಹುಡುಕಾಟ ಬೆದಕಾಟ ಚಣಚಣಕು ಪರದಾಟ
ಮಾಯೆಯಾಟದಲಿ ಮನವೆ ದಾಳ ಮೂಢ ||..329
ತಳಮಳಿಪ ಮನವನ್ನು ತಣಿಪುವುದೆ ಪೂಜೆ
ಕುಣಿಕುಣಿವ ಮನವನ್ನು ನಿಲಿಸುವುದೆ ಧ್ಯಾನ |
ಒಳಹೊರಗು ಒಂದೆನಿಸೆ ಜಪತಪವು ಮತ್ತೇಕೆ
ಚಿತ್ತಶಾಂತಿಯೆ ಮೋಕ್ಷ ಬೇರಲ್ಲ ಮೂಢ || ..330
******************
-ಕ.ವೆಂ.ನಾಗರಾಜ್.
Rating
Comments
ಇದು ಸಂಪದದಲ್ಲಿ ನನ್ನ 351ನೆಯ ಬರಹ
ಇದು ಸಂಪದದಲ್ಲಿ ನನ್ನ 351ನೆಯ ಬರಹ. ಸಂಪದದ ನಿರ್ವಾಹಕ ಮಂಡಳಿಗೆ, ಎಲ್ಲಾ ಓದುಗರಿಗೆ ನನ್ನ ಕೃತಜ್ಞತೆಗಳು.
In reply to ಇದು ಸಂಪದದಲ್ಲಿ ನನ್ನ 351ನೆಯ ಬರಹ by kavinagaraj
@ಹಿರಿಯರೇ-
ಹಿರಿಯರೇ- ೩೫೧, ೩೦೫೧,೩೫೦೫೧ ಆಗಲಿ...!!
ನಿಮ್ಮಿಂದ ಇನ್ನಸ್ಟು ವೈಚಾರಿಕ ಬರಹಗಳನ್ನು ನಿರೀಕ್ಷಿಸುತ್ತ ಶುಭ ಹಾರೈಸುವೆ..
ನನ್ನಿ..
ಶುಭವಾಗಲಿ..
\|
In reply to @ಹಿರಿಯರೇ- by venkatb83
ನಿಮ್ಮ ಹಾರೈಕೆಗೆ ವಂದನೆಗಳು,
ನಿಮ್ಮ ಹಾರೈಕೆಗೆ ವಂದನೆಗಳು, ವೆಂಕಟೇಶರೇ.
ಮಾಯೆಯ ಮುಸುಕಿನಲಿ
ಎಷ್ಟು ಬರೆದರು ತೀರದು ಮಾಯೆಯ ಬಗೆಗೆ.... ತಮ್ಮ ೩೫೧ ನೆ ಬರಹಕ್ಕೆ ಅಭಿನಂದನೆ
In reply to ಮಾಯೆಯ ಮುಸುಕಿನಲಿ by partha1059
ಒಳಹೊರಗು ಒಂದೆನಿಸೆ ಜಪತಪವು
ಒಳಹೊರಗು ಒಂದೆನಿಸೆ ಜಪತಪವು ಮತ್ತೇಕೆ
ಚಿತ್ತಶಾಂತಿಯೆ ಮೋಕ್ಷ ಬೇರಲ್ಲ ಮೂಢ |
ಸುನ್ದರ ಸಾಲುಗಳು.........ನಿರನ್ತರ ಸಾಗಲಿ ನಿಮ್ಮ ಬರಹ ಎಮ್ಬುದೆ ನಮ್ಮ ಹಾರೈಕೆ..
In reply to ಒಳಹೊರಗು ಒಂದೆನಿಸೆ ಜಪತಪವು by Prakash Narasimhaiya
ವಂದನೆಗಳು, ಪ್ರಕಾಶರೇ.
ವಂದನೆಗಳು, ಪ್ರಕಾಶರೇ.
In reply to ಮಾಯೆಯ ಮುಸುಕಿನಲಿ by partha1059
ಪಾರ್ಥರೇ, ವಂದನೆಗಳು.
ಪಾರ್ಥರೇ, ವಂದನೆಗಳು.
ಚೆನ್ನಾಗಿದೆ ಸರ್
ಚೆನ್ನಾಗಿದೆ ಸರ್
In reply to ಚೆನ್ನಾಗಿದೆ ಸರ್ by Chikku123
ವಂದನೆಗಳು, ಚಿಕ್ಕೂ.
ವಂದನೆಗಳು, ಚಿಕ್ಕೂ.
ಸೊಗಸಾಗಿದೆ 351 ನೇ ಉವಾಚ
ಸೊಗಸಾಗಿದೆ 351 ನೇ ಉವಾಚ ಧನ್ಯವಾದಗಳೊಂದಿಗೆ
....ಸತೀಶ್
In reply to ಸೊಗಸಾಗಿದೆ 351 ನೇ ಉವಾಚ by sathishnasa
ಧನ್ಯವಾದ, ಸತೀಶರೇ.
ಧನ್ಯವಾದ, ಸತೀಶರೇ.
ಮೂಢ ಉವಾಚ
ಶ್ರೀ ಕವಿನಾಗರಾಜ್ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಉತ್ತಮ ಕವನದ ಸಾಲುಗಳು. ಬೇಗ ಇವಗಳ ಸಂಗ್ರಹಗಳು ಪುಸ್ತಕವಾಗಿ ಹೊರಬರಲಿ ಎಂದು ತುಂಬು ಮನದ ಹಾರೈಕೆ.
In reply to ಮೂಢ ಉವಾಚ by lpitnal@gmail.com
ನಿಮ್ಮ ಹಾರೈಕೆಗೆ ಕೃತಜ್ಞತೆಗಳು,
ನಿಮ್ಮ ಹಾರೈಕೆಗೆ ಕೃತಜ್ಞತೆಗಳು, ಇಟ್ನಾಳರೇ.