ಮೂಢ ಉವಾಚ - 165

ಮೂಢ ಉವಾಚ - 165

 

 

ಮಾಯೆಯ ಮುಸುಕಿನಲಿ ನಡೆದಿಹುದು ಜಗವು
ಜಗದ ಅವಸಾನವದು ಮರೆಯಾಗೆ ಮಾಯೆ |
ಹುಡುಕಾಟ ಬೆದಕಾಟ ಚಣಚಣಕು ಪರದಾಟ
ಮಾಯೆಯಾಟದಲಿ ಮನವೆ ದಾಳ ಮೂಢ ||..329
 
ತಳಮಳಿಪ ಮನವನ್ನು ತಣಿಪುವುದೆ ಪೂಜೆ
ಕುಣಿಕುಣಿವ ಮನವನ್ನು ನಿಲಿಸುವುದೆ ಧ್ಯಾನ |
ಒಳಹೊರಗು ಒಂದೆನಿಸೆ ಜಪತಪವು ಮತ್ತೇಕೆ
ಚಿತ್ತಶಾಂತಿಯೆ ಮೋಕ್ಷ ಬೇರಲ್ಲ ಮೂಢ || ..330
******************
-ಕ.ವೆಂ.ನಾಗರಾಜ್.
 
 
 
 
 
 
 
Rating
No votes yet

Comments

Submitted by venkatb83 Wed, 10/10/2012 - 18:46

In reply to by kavinagaraj

ಹಿರಿಯರೇ- ೩೫೧, ೩೦೫೧,೩೫೦೫೧ ಆಗಲಿ...!!
ನಿಮ್ಮಿಂದ ಇನ್ನಸ್ಟು ವೈಚಾರಿಕ ಬರಹಗಳನ್ನು ನಿರೀಕ್ಷಿಸುತ್ತ ಶುಭ ಹಾರೈಸುವೆ..

ನನ್ನಿ..
ಶುಭವಾಗಲಿ..

\|

Submitted by partha1059 Wed, 10/10/2012 - 18:58

ಎಷ್ಟು ಬರೆದರು ತೀರದು ಮಾಯೆಯ ಬಗೆಗೆ.... ತಮ್ಮ ೩೫೧ ನೆ ಬರಹಕ್ಕೆ ಅಭಿನಂದನೆ

Submitted by Prakash Narasimhaiya Wed, 10/10/2012 - 20:33

In reply to by partha1059

ಒಳಹೊರಗು ಒಂದೆನಿಸೆ ಜಪತಪವು ಮತ್ತೇಕೆ
ಚಿತ್ತಶಾಂತಿಯೆ ಮೋಕ್ಷ ಬೇರಲ್ಲ ಮೂಢ |
ಸುನ್ದರ‌ ಸಾಲುಗಳು.........ನಿರನ್ತರ‌ ಸಾಗಲಿ ನಿಮ್ಮ ಬರಹ‌ ಎಮ್ಬುದೆ ನಮ್ಮ ಹಾರೈಕೆ..

Submitted by lpitnal@gmail.com Thu, 10/11/2012 - 16:08

ಶ್ರೀ ಕವಿನಾಗರಾಜ್ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಉತ್ತಮ ಕವನದ ಸಾಲುಗಳು. ಬೇಗ ಇವಗಳ ಸಂಗ್ರಹಗಳು ಪುಸ್ತಕವಾಗಿ ಹೊರಬರಲಿ ಎಂದು ತುಂಬು ಮನದ ಹಾರೈಕೆ.