ಮೂಢ ಉವಾಚ -39

ಮೂಢ ಉವಾಚ -39

        ಮೂಢ ಉವಾಚ -39


 


ಸತ್ಕುಲಜಾತನಿಗೆ ಹೆಸರು ಕೆಡುವ ಭಯ|
ಧನವಿರಲು ಚೋರಭಯ ಮೇಣ್ ರಾಜಭಯ||
ಸಜ್ಜನರಿಂಗೆ ಕುಜನರು ಕಾಡುವ ಭಯ|
ಭಯ ಭಯ ಭಯಮಯವೀ ಲೋಕ ಮೂಢ||

ಸಿರಿವಂತನಿಗೆ ದಾರಿದ್ರ್ಯ ಬಂದೀತೆಂಬ ಭಯ|
ಬಲಶಾಲಿಯಾದವಗೆ ಶತ್ರು ಸಂಚಿನ ಭಯ|
ಮೇಲೇರಿದವಗೆ ಕೆಳಗೆ ಬಿದ್ದೇನೆಂಬ ಭಯ|
ಭಯಮುಕ್ತನವನೊಬ್ಬನೇ ವಿರಾಗಿ ಮೂಢ||
*************
-ಕವಿನಾಗರಾಜ್.

Rating
No votes yet

Comments