ಮೂಢ ಉವಾಚ -47

ಮೂಢ ಉವಾಚ -47

          ಮೂಢ ಉವಾಚ -47


ಹೊಟ್ಟೆಯ ತೊಟ್ಟಿಯದು ತುಂಬುವುದು ಎಂದು?
ಹಸಿವು ಮಾಡಿಸುವ ಕುಕರ್ಮಗಳು  ಎಷ್ಟೊಂದು||
ಬಂಧಗಳ ಹೆಣೆಯುವುದು ಪಾಶಗಳ ಬೀಸುವುದು|
ಆತ್ಮಾಭಿಮಾನ ಮರೆಸುವುದಯ್ಯೋ ಮೂಢ||


 


ಗೊತ್ತಿಲ್ಲದವರನ್ನು ಹಾಡಿ ಹೊಗಳುವರು|
ಪ್ರೀತಿಸುವ ಜನರನೆ ಘಾಸಿಗೊಳಿಸುವರು||
ನಂಬದವರನೋಲೈಸಿ ನಂಬಿದವರ ಹೀನೈಸಿ|
ಪಡೆದುಕೊಂಬುವುದೇನೋ ಮೂಢ?||


***************


-ಕವಿನಾಗರಾಜ್.

Rating
No votes yet