ಮೂಢ ಉವಾಚ -48

ಮೂಢ ಉವಾಚ -48

             ಮೂಢ ಉವಾಚ -48


ಹುಳುಕು ಹುಡುಕುವರೆಲ್ಲೆಲ್ಲು ವಿಷವನೇ ಕಕ್ಕುವರು|
ಚಾಡಿಯನು ಹೇಳುವರು ಸಂಬಂಧ ಕೆಡಿಸುವರು||
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು|
ಸಂಬಂಧ ಉಳಿಸಿ ಬೆಳೆಸುವರವರು ಮೂಢ||


 


ಕ್ಷಮಿಸುವರು ನರರು ಬಲಹೀನತೆಯಿಂದ|
ಆಸೆ ಪಡದಿಹರು ದೊರೆಯದಿರುವುದರಿಂದ||
ಧೀರನಾ ಕ್ಷಮೆಗೆ ಬೆಲೆಯಿರುವ ಪರಿ ಯೋಗಿಯ|
ನಿರ್ಮೋಹತೆಗೆ ಬಲವುಂಟು ಮೂಢ||


*************************


-ಕವಿನಾಗರಾಜ್.

Rating
No votes yet

Comments