ಮೂಢ ಉವಾಚ -52

ಮೂಢ ಉವಾಚ -52

        ಮೂಢ ಉವಾಚ -52


ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು|
ಪ್ರಾಣವಿರದಿರೆ ದೇಹಕರ್ಥವಿಹುದೇನು?
ನಿನಗರ್ಥ ನೀಡಿರುವ ಜೀವಾತ್ಮ ನೀನಲ್ಲದೆ|
ತನುವು ನೀನಲ್ಲವೆಂಬುದರಿಯೋ ಮೂಢ||


 


ಹಿಂದೆ ಇರಲಿಲ್ಲ ಮುಂದೆ ಇರದೀ ದೇಹ|
ಈಗಿರುವ ದೇಹಕರ್ಥ ಬಂದುದು ಹೇಗೆ||
ಶುದ್ಧ ಬುದ್ಧಿಯಲಿ ನೋಡೆ ತಿಳಿದೀತು ನಿನಗೆ|
ಅಂತರಾತ್ಮನ ಕರೆಯು ಕೇಳಿಪುದು ಮೂಢ||


****************


-ಕವಿನಾಗರಾಜ್.

Rating
No votes yet

Comments