ಮೂಢ ಉವಾಚ -54
ಮೂಢ ಉವಾಚ -54
ಸುಕ್ಕುಗಳು ಮೂಡಿಹವು ತಲೆಯು ನರೆತಿಹುದು|
ಮುಪ್ಪು ಬಂದಡರಿ ಕೈಕಾಲು ನಡುಗಿಹುದು||
ರೋಗಗಳು ಮುತ್ತಿ ಬಳಲಿ ಬೆಂಡಾಗಿಹರು|
ತೀರದಿಹ ಆಸೆಗೆ ಮುಪ್ಪಿಲ್ಲ್ಲವೋ ಮೂಢ||
ವೃದ್ಧಾಪ್ಯ ಮುಸುಕಿರಲು ದಂತಗಳುದುರಿರಲು|
ಕಿವಿಯು ಕೇಳದಿರೆ ನೋಟ ಮಂದವಾಗಿರಲು||
ತನುವು ಕುಗ್ಗಿರಲು ಯಾರು ಗಣಿಸುವರು ನಿನ್ನ|
ಜಯವಿರುವವರೆಗೆ ಭಯವಿಲ್ಲ ಮೂಢ||
******************
-ಕ.ವೆಂ.ನಾಗರಾಜ್.
Rating
Comments
ಉ: ಮೂಢ ಉವಾಚ -54
ಉ: ಮೂಢ ಉವಾಚ -54
In reply to ಉ: ಮೂಢ ಉವಾಚ -54 by partha1059
ಉ: ಮೂಢ ಉವಾಚ -54
In reply to ಉ: ಮೂಢ ಉವಾಚ -54 by partha1059
ಉ: ಮೂಢ ಉವಾಚ -54