ಮೂಢ ಉವಾಚ -60
ಮೂಢ ಉವಾಚ -60
ಮಾತಿನಲಿ ಹಿತವಿರಲಿ ಮಿತಿ ಮೀರದಿರಲಿ
ಮಾತಿನಿಂದಲೆ ಸ್ನೇಹ ಮಾತಿನಿಂ ದ್ವೇಷ |
ಮಾತಿನಿಂದಲೆ ಒಳಿತು ಮಾತಿನಿಂ ಕೆಡುಕು
ಮಾತು ಮುತ್ತಂತಿರಲಿ ಮೂಢ ||
ಮಾತು ಕಟ್ಟೀತು ಮಾತು ಕೆಡಿಸೀತು
ಮಾತು ಉಳಿಸೀತು ಮಾತು ಕಲಿಸೀತು|
ಮಾತು ಅಳಿಸೀತು ಮಾತು ನಲಿಸೀತು
ಅನುಭವದ ಮಾತು ಮುತ್ತು ಮೂಢ||
***************
-ಕ.ವೆಂ.ನಾಗರಾಜ್.
Rating
Comments
ಉ: ಮೂಢ ಉವಾಚ -60
In reply to ಉ: ಮೂಢ ಉವಾಚ -60 by gopaljsr
ಉ: ಮೂಢ ಉವಾಚ -60