ಮೂಢ ಉವಾಚ -61

ಮೂಢ ಉವಾಚ -61

      ಮೂಢ ಉವಾಚ -61


ಮಾತಿನಲಿ ವಿಷಯ ಭಾಷೆಯಲಿ ಭಾವ
ಅನುಭವದಿ ಪಾಂಡಿತ್ಯ ಮೇಳವಿಸಿ|
ಕೇಳುಗರಹುದಹುದೆನುವ ಮಾತುಗಾರ
ಸರಸತಿಯ ವರಸುತನು ಮೂಢ||


 


ಗಂಟಿರಲು ನಂಟಿಹುದು ಇಲ್ಲದಿರೆ ಏನಹುದು|
ಕಸುವಿರಲು ಬಂಧುಗಳು ಇಲ್ಲದಿರೆ ಉಂಡೆಲೆಯು||
ನಗುವಿರಲು ನೆಂಟತನ ಇಲ್ಲದಿರೆ ಒಂಟಿತನ|
ಜಗದ ಪರಿಯಿದು ಏನೆನುವಿಯೋ ಮೂಢ||
 


******************


-ಕ.ವೆಂ.ನಾಗರಾಜ್.

Rating
No votes yet

Comments