ಮೂರು ಬಗೆಯ ಜನರು
ಎಡರುಗಳಿಗೆ ಹೆದರಿ ತೊಡಗರು ಬೀಡಾಡಿಗಳು
ನಡುನಡುವೆ ತಡೆಬರಲು ಬಿಡುವರು ನಾಡಾಡಿಗಳು
ಎಡಬಿಡದೆ ಬರುವೆಡರುತೊಡರುಗಳ ಹೊಡೆತದಲೂ
ಹಿಡಿದುದನು ಕೈ ಬಿಡದೆ ನಡೆಸು**ವವರಗ್ಗಳರು
(ಬೀಡಾಡಿ: ನೀಚ ; ನಾಡಾಡಿ : ಸಾಮಾನ್ಯ ; ಅಗ್ಗಳ : ಶ್ರೇಷ್ಟ)*
ಮೂಲ ಸಂಸ್ಕೃತ ಸುಭಾಷಿತ:
ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ:
ಪ್ರಾರಭ್ಯ ವಿಘ್ನ ವಿಹತಾ ವಿರಮಂತಿ ಮಧ್ಯಾಃ
ವಿಘ್ನೈಃ ಪುನಃಪುನರಪಿ ಪ್ರತಿಹನ್ಯಮಾನಾ:
ಪ್ರಾರಬ್ದಮುತ್ತಮ ಜನಾಃ ನ ಪರಿತ್ಯಜಂತಿ
-ಹಂಸಾನಂದಿ
*: ವೆಂಕಟಸುಬ್ಬಯ್ಯನವರ ನಿಘಂಟುವಿನ ನೆರವು ಪಡೆದಿದ್ದೇನೆಂದು ತಿಳಿಸಲು ನನಗೆ ಹಿಂಜರಿಕೆಯೇನಿಲ್ಲ :) ಕನ್ನಡದಲ್ಲಿ ಟ ಠ ಡ ಢ ಣ ಗಳು ಹೆಚ್ಚಾಗಿ ಇರುವುದೆಂದು ಪ್ರತೀತಿ. ಅದಕ್ಕೆಂದೇ, ಸ್ವಲ್ಪ ಡಕಾರವನ್ನು ಹೆಚ್ಚಿಸಿ ಅನುವಾದಿಸಿದ್ದೇನೆ.
**: ಅನಿಲ ಜೋಷಿಯವರ ಟಿಪ್ಪಣಿ ನೋಡಿದ ನಂತರ, ಅದು ಸರಿ ಎನ್ನಿಸಿ, 'ಮುಗಿಸು' ವನ್ನು 'ನಡೆಸು'ವಾಗಿ ಬದಲಾಯಿಸಿರುವೆ. ನಡೆಸುವುದರಲ್ಲೆ, ತಾನೇ ತಾನಾಗಿ, ವರ್ತಮಾನ ಕಾಲ ಹಾಗೂ ಮುಂದುವರೆಯುವ ಸೂಚನೆ ಎರಡೂ ಬರುತ್ತಲ್ಲವ :) ?
Rating
Comments
ಉ: ಮೂರು ಬಗೆಯ ಜನರು
ಉ: ಮೂರು ಬಗೆಯ ಜನರು
In reply to ಉ: ಮೂರು ಬಗೆಯ ಜನರು by aniljoshi
ಉ: ಮೂರು ಬಗೆಯ ಜನರು
ಉ: ಮೂರು ಬಗೆಯ ಜನರು