ಮೂಲ ಯಕ್ಷ ಪ್ರಶ್ನೆಗಳಾವುವು ೟

ಮೂಲ ಯಕ್ಷ ಪ್ರಶ್ನೆಗಳಾವುವು ೟

ಭರತಖಂಡದ ಮಹಾಕಾವ್ಯಗಳಲ್ಲೊಂದಾದ ಮಹಾಭಾರತ ಎಲ್ಲರಿಗೂ ಪೂಜನೀಯ. ಮೂಲ ವ್ಯಾಸಭಾರತದ ನಂತರದಲ್ಲಿ ಕನ್ನಡವೂ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳಲ್ಲೂ ಹಲವಾರು ಮಹಾಭಾರತಗಳು ರಚಿತವಾಗಿವೆ. ಆದರೆ ಮೂಲ ಭಾರತಕ್ಕೂ ಮತ್ತು ಇತರೆ ಭಾಷೆಗಳಲ್ಲಿ ನಂತರ ರಚಿತವಾದ ಭಾರತಕ್ಕೂ ಕೆಲವೊಂದು ವ್ಯತ್ಯಾಸಗಳಿರುವುದು ಕಂಡುಬಂದಿದೆ. ಕಾರಣಗಳು ಹಲವಿರಬಹುದು.
ಪ್ರಸ್ತುತದ ಚರ್ಚೆ ಮಹಾಭಾರತದಲ್ಲಿ ಬರುವ ಯಕ್ಷಪ್ರಶ್ನಾ ಎನ್ನುವ ಪ್ರಸಂಗದ ಕುರಿತಾದದ್ದು. ಎಲ್ಲರಿಗೂ ತಿಳಿದಂತೆ ಧರ್ಮರಾಯನು ಯಕ್ಷರೂಪಿ ತನ್ನ ತಂದೆಯಾದ ಯಮಧರ್ಮರಾಯನಿಂದ ಪರೀಕ್ಷೆಗೊಳಗಾಗುತ್ತಾನೆ. ಯಕ್ಷ ಅವನ ಮುಂದಿಡುವ ಪ್ರಶ್ನೆಗಳು ಇಂದಿನ ಜಗತ್ತಿಗೂ ಸಹ ಪ್ರಸ್ತುತವೆನಿಸುವಷ್ಟು ಮೌಲ್ಯವನ್ನು ಹೊಂದಿರುವಂತಹವು.
ಆದರೆ ಬೇರೆ ಬೇರೆ ಭಾರತಗಳಲ್ಲಿ ಯಕ್ಷಪ್ರಶ್ನೆಯ ಕುರಿತಂತೆ ದ್ವಂದ್ವಗಳಿವೆ. ಅಂದರೆ ಪ್ರಶ್ನೆಗಳು ಬೇರೆಬೇರೆಯಾಗಿವೆ. ಕಾರಣ ತಿಳಿದಿಲ್ಲ.
ಹಾಗಾದರೆ, ಯಾವ ಪ್ರಶ್ನೆಗಳು ಮೂಲಭಾರತದಲ್ಲಿ ಮಾತ್ರವಿದೆ೟ ಬೇರೆ ಬೇರೆ ಭಾರತಗಳಲ್ಲಿ ಉಲ್ಲೇಖಿತವಾಗಿರುವ ಪ್ರಶ್ನೆಗಳು ಯಾವುವು೟ ಅವುಗಳ ಉತ್ತರ ಸಹಿತವಾಗಿ ಸಹೃದಯರು ತಿಳಿಸಿದರೆ ಸ್ವಾಗತಾರ್ಹ.
ದಯಮಾಡಿ ಪ್ರತಿಕ್ರಿಯಿಸಿ.

Rating
No votes yet