ಮೂವತ್ಮೂರು ಕೋಟಿ ದೇವತೆಗಳೆಂದರೇನು?

ಮೂವತ್ಮೂರು ಕೋಟಿ ದೇವತೆಗಳೆಂದರೇನು?

ಇವತ್ತು  ತಿಳಿದವರಿಂದ ನನ್ನ ಸಂಶಯ ಪರಿಹರಿಸಿಕೊಳ್ಳಬೇಕೂಂತ ಈ ಚುಟುಕು ಬರಹ.ಮೊದಲೇ ಹೇಳಿಬಿಡುವೆ. ನನಗೇನೂ ಗೊತ್ತಿಲ್ಲ. ಗೊತ್ತಿದ್ದವರು ಅದನ್ನು ಗೊಂದಲಕ್ಕಾಸ್ಪದ ಕೊಡದೆ ತಿಳಿಸಿಕೊಡಿರೆಂಬ ಬಿನ್ನಹ. ಈ ಭೂಮಿಯಮೇಲಿರುವ ಪ್ರತಿಯೊಂದು ಜೀವಿಯಲ್ಲಿ ಒಂದು ಚೈತನ್ಯ ಇದೆ, ಎಂಬುದು ನಂಬಿಕೆ. ಆ ನಂಬಿಕೆ ನನಗೂ ಇದೆ.ಇಡೀ ಪ್ರಪಂಚವನ್ನು  ನಿಯಂತ್ರಣ ಮಾಡುವ ನಮ್ಮ ಕೈ ಮೀರಿದ ಒಂದು ಶಕ್ತಿ ಇದೆ, ಅದನ್ನು ನಾನು ದೇವರೆನ್ನುವೆ.ಆದರೆ ಮೂವತ್ಮೂರು ಕೋಟಿ ದೇವತೆಗಳೆನ್ನುತ್ತಾರಲ್ಲಾ, ಹಾಗಂದರೇನು? ಇಂದ್ರಾದಿ ದೇವತೆಗಳು, ಅಷ್ಟ ದಿಕ್ಪಾಲಕರು, ಹಾಗೆಂದರೇನು?ಅಂತೆಯೇ ಖುರಾನ್ ಮತ್ತು ಬೈಬಲ್ ನ  ಸಾರವೇನು?

ಇವು ಪ್ರಶ್ನೆಗಳು, ಸಂಪದದಲ್ಲಿ ಈ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಂಡವರು ಇದ್ದಾರೆ.ಅವರಿಂದ ಸಮಾಧಾನಕರ ಉತ್ತರಗಳು ಸಿಗುತ್ತದೆಂಬ ಆಸೆಯಿಂದ ಬರೆದಿರುವೆ.ತಿಳಿದವರು ಒಂದಷ್ಟು ಮಾಹಿತಿಗಳನ್ನು ದಯಮಾಡಿ ಕೊಡಿ. ನನ್ನಂತ ಅನೇಕರಿಗೆ ಉಪಯೋಗ ವಾಗಬಹುದು.

Rating
No votes yet

Comments