ಮೃತ್ಯುಂಜಯ

ಮೃತ್ಯುಂಜಯ

ಮೃತ್ಯುಂಜಯ ಇದು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಶಿವಾಜಿ ಸಾವಂತರ ಮೇರು ಕೃತಿ. ಇದರಲ್ಲಿ ಸಾವಂತರು ಮಹಾಭಾರತವನ್ನು ಕರ್ಣನ ದೃಷ್ಟಿಯಲ್ಲಿ ಬರೆದಿದ್ದಾರೆ. ಒಂದು ರೀತಿ ನೋಡಿದರೆ ಭೈರಪ್ಪನವರ ಪರ್ವದ ತರಹ. ಇದು ಮೂಲ ಮರಾಠಿಯಲ್ಲಿದೆ. ಇದು ಕನ್ನಡಕ್ಕೂ ಕೂಡ ಅನುವಾದಗೊಂಡಿದೆ. ನಾನು ಇದರ ಕನ್ನಡ ಆವೃತ್ತಿಗೆ ಬಹಳಷ್ಟು ಹುಡುಕಾಡಿದೆ, ನಂತರ ಹಿಂದಿ ಆವೃತ್ತಿಗೆ ಹುಡುಕಾಡಿದೆ. ಕೊನೆಗೆ ಲಖನೌದಿಂದ ಒಬ್ಬರು ಹಿಂದಿ ಆವೃತ್ತಿಯನ್ನು ತಂದುಕೊಟ್ಟರು. ಈ ಪುಸ್ತಕವನ್ನು ಕನ್ನಡದಲ್ಲಿ ಯಾರಾದರೂ ಓದಿದ್ದೀರಾ? ಇದು ೧೯೯೦ರಲ್ಲಿ ಕನ್ನಡಕ್ಕೆ ಅನುವಾದಗೊಂಡಿತ್ತು. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಯಾರು, ಈ ಪುಸ್ತಕ ಮುದ್ರಣದಲ್ಲಿದೆಯೇ, ಎಲ್ಲಿಯಾದರೂ ಸಿಗುತ್ತದಯೇ ಈ ಮಾಹಿತಿ ಯಾರಾದರೂ ಕೊಡಬಲ್ಲೀರಾ?

 ಶಿವಾಜಿ ಸಾವಂತರ ಇನ್ನೊಂದು ಒಳ್ಳೆಯ ಪುಸ್ತಕ 'ಯುಗಾ0ಧರ' ಇದು ಕೃಷ್ಣನ ಮೇಲೆ ಬರೆದಿರುವ ಪುಸ್ತಕ. ಇದರ ಹಿಂದಿ ಆವೃತ್ತಿ ಇದೆ, ಕನ್ನಡ ಅನುವಾದಗೊಂಡಿದೆಯೋ ಇಲ್ಲವೋ ಗೊತ್ತಿಲ್ಲ. ಕನ್ನಡಕ್ಕೆ ಅನುವಾದಗೊಂಡಿದ್ದರೆ ತಿಳಿಸಿ.

Rating
No votes yet

Comments