ಮೇಧಾವಿತನವೂ ಸಹ ಮೇಧಾವಿತನವನ್ನು ಮೂರ್ಖತನವನ್ನಾಗಿಸಲಾಗದು - ಗಾದೆಗೊಂದು ಗುದ್ದು--೭೧

ಮೇಧಾವಿತನವೂ ಸಹ ಮೇಧಾವಿತನವನ್ನು ಮೂರ್ಖತನವನ್ನಾಗಿಸಲಾಗದು - ಗಾದೆಗೊಂದು ಗುದ್ದು--೭೧

 (೩೬೧) ಪ್ರತಿಯೊಂದು ತಿರುವಿನಲ್ಲೂ ಹೊಸ ಹೊಳಹುಗಳನ್ನು ಕಂಡುಹಿಡಿಯಬಲ್ಲವರು ಚಾಲಾಕಿ ಜನ. ಆದರೆ ಮೇಧಾವಿಗಳು ತಿರುವು ತೆಗೆದುಕೊಳ್ಳುವ ಮುನ್ನವೇ ಹೊಳಹುಗಳನ್ನೇ ಹುಟ್ಟಿಹಾಕಿಬಿಟ್ಟಿರುತ್ತಾರೆ.

(೩೬೨) ಆದರ್ಶಮಯ ಆಟವೇ ಅತಿಕೆಟ್ಟ ಮ್ಯಾಚ್‍ಫಿಕ್ಸಿಂಗಿಗೆ ಅತ್ಯುತ್ತಮ ಉದಾಹರಣೆ.

(೩೬೩) ನಗರವೊಂದರ ಹಳೆಯ ಛಾಯಾಚಿತ್ರವು ಎರಡು ತರದ ಮೂರ್ಖತನವನ್ನು ಹೊಂದಿರುತ್ತವೆಃ (೧) ನಗರವು ಹೇಗೆ ಹಾಳಾಗುತ್ತಿದೆ ಎಂಬುದರ ಸೂಚನೆ ಅದರಲ್ಲಿರುತ್ತದೆ; ಮತ್ತು (೨) ಅದಕ್ಕೆ ಸ್ವತಃ ಆ ಛಾಯಾಚಿತ್ರವೇ ಸಾಕ್ಷಿಯಾಗಿಬಿಟ್ಟಿರುತ್ತದೆ!

(೩೬೪) ಮೇಧಾವಿತನಕ್ಕಿಂತಲೂ ಮೂರ್ಖತನವು ಹೆಚ್ಚು ಪ್ರಜಾಪ್ರಭುತ್ವವಾದಿ ಏಕೆಂದರೆ ಅದು ಹೆಚ್ಚು ಜನರನ್ನು ಒಳಗೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಇಚ್ಛೆ ಮತ್ತು ಸತತ ಪ್ರಯತ್ನದಿಂದ ಮೊದಲನೆಯದ್ದು ಎರಡನೆಯದ್ದಾಗಬಲ್ಲದು ಆದರೆ ಅದು ತಿರುವು ಮರುವು ಆಗಲಾರದು. ಎಷ್ಟೇ ಮೇಧಾವಿತನದ ಪ್ರಯತ್ನದಿಂದಲೂ ಮೇಧಾವಿತನವು ಮೂರ್ಖತನವಾಗಲಾರದು.

(೩೬೫) ನೈಜವಾದ ಅನುಭವವೊಂದನ್ನು ಹಾಯ್ದು ಹೋದ ನಂತರ, ಇತರರು ಸೂಚಿಸುವ ಕಾರಣಕ್ಕೇ ಅದು ಸುಳ್ಳು ಎಂದಾದಲ್ಲಿ ಅದನ್ನೇ ’ಸಮೂಹ ಸನ್ನಿ’ ಎನ್ನುವುದು.

Rating
No votes yet