ಮೇಲು-ಕೀಳು (ಶ್ರೀ ನರಸಿಂಹ 69)

ಮೇಲು-ಕೀಳು (ಶ್ರೀ ನರಸಿಂಹ 69)

ಶೂದ್ರ, ವೈಶ್ಯ ,ಕ್ಷತ್ರಿಯ, ಬ್ರಾಹ್ಮಣ ಎನುವ ವಿಂಗಡಣೆಯು

ಹುಟ್ಟಿನಿಂದಲೀ ವಿಂಗಡಣೆ ಬರುವುದೆಂಬುವುದು ಭ್ರಮೆಯು

ಗುಣ, ಸ್ವಭಾವ,ಕರ್ಮಗಳಿಗನುಸಾರ ಪರಿಗಣಿಸಬೇಕಿವನು

ಮನಸಿನಿಂದಲಿ ನೀ ಹೊರಹಾಕು ಮೇಲು,ಕೀಳೆಂಬುದನು

 

ತಾಮಸಿಕನಾಗಿ ಲೋಕ ಕಂಟಕನಾದವ ಶೂದ್ರನಾಗಿಹನು

ರಾಜಸಿಕನಾಗಿ ವ್ಯಾವಹಾರಿಕ ಗುಣದವ ವೈಶ್ಯನಾಗಿಹನು

ಕ್ಷತ್ರಿಯನು ತಾ ನಾಯಕತ್ವವವ ವಹಿಸಿ ಸಜ್ಜನರ ರಕ್ಷಿಪನು

ಸಾತ್ವಿಕನಾಗಿ  ಜಗದೊಳಿತನು ಬಯಸುವವ ಬ್ರಾಹ್ಮಣನು

 

ಅಗ್ನಿ, ವಾಯು, ನೆಲ, ಜಲಕೆ ಎಲ್ಲುಂಟು ಮೇಲು ಕೀಳೆಂಬುವುದು

ಮೆಚ್ಚಿಸೆ ಶ್ರೀ ನರಸಿಂಹನ ಸಮದೃಷ್ಠಿಯಲೆಲ್ಲರ ಕಾಣಬೇಕಿಹುದು

Rating
No votes yet

Comments

Submitted by hpn Mon, 09/23/2013 - 09:39

ಬರಹಕ್ಕೆ ಮುನ್ನುಡಿ ಹಾಗೂ ವಿವರಣೆ ಇರಲಿ. ಎಷ್ಟೋ ದಿನಗಳ ನಂತರ ಬಂದು ನೋಡುತ್ತಿರುವ ಓದುಗರಿಗೆ ವಿಶೇಷವಾಗಿ ಈ ಪುಟ ಏನು, ಯಾವುದಕ್ಕೆ ಸಂಬಂಧಪಟ್ಟಿರುವುದು ಎಂಬುದೂ ತಿಳಿಯದು.
ಮೇಲಿನದ್ದು ನೀವೇ ಸ್ವತಃ ಬರೆದದ್ದೇ? ಇಲ್ಲವಾದಲ್ಲಿ ಪ್ರಕಟಣೆಗೆ ಬರೆದಿರುವವರ ಅನುಮತಿ ಪಡೆದಿದ್ದೀರಾ?

Submitted by sathishnasa Mon, 09/23/2013 - 11:09

In reply to by hpn

ಇದು ನನ್ನ ಸ್ವಂತ ಬರಹ ಈ ಸರಣಿಯನ್ನು ಪ್ರಾರಂಭಿಸಿದಾಗಲೇ ವಿವರಣೆ ನೀಡಿರುತ್ತೇನೆ ಹಾಗೂ ಇದು ಎಷ್ಟನೇಯದು ಎಂಬ ಬಗ್ಗೆ ಸಂಖ್ಯೆಯನ್ನು ಸಹ ಶೀರ್ಷಿಕೆಯೊಂದಿಗೆ ನೀಡಿರುತ್ತೇನೆ ಇನ್ನ ಯಾವುದಾದರು ಮಾಹಿತಿ ಸೇರಿಸ ಬೇಕೆಂದು ತಿಳಿಸಿದಲ್ಲಿ ಅದನ್ನು ಸೇರಿಸುತ್ತೇನೆ ಧನ್ಯವಾಗಳೊಂದಿಗೆ ......ಸತೀಶ್

Submitted by hariharapurasridhar Wed, 09/25/2013 - 15:55

In reply to by sathishnasa

[ತಾಮಸಿಕನಾಗಿ ಲೋಕ ಕಂಟಕನಾದವ ಶೂದ್ರನಾಗಿಹನು]

ಇಲ್ಲ,ಈ ಭಾವ ತಪ್ಪು. ಅವರವರ ಗುಣಕರ್ಮ ಸ್ವಭಾಗಳಿಗನುಗುಣವಾಗಿ ಸ್ವೀಕರಿಸುವುದು ವರ್ಣ ಸರಿ. ಆದರೆ ಶೂದ್ರ ಲೋಕಕಂಟಕನಲ್ಲ. ನಾಲ್ಕೂ ವರ್ಣವೂ ಶ್ರೇಷ್ಠವೇ. ಶೂದ್ರನಿಲ್ಲದ ವ್ಯವಸ್ಥೆ ಶೂನ್ಯ. ಅವನಿಲ್ಲದೆ ಪ್ರಪಂಚದಾಟ ನಡೆಯದು. ನಾಲ್ಕೂ ವರ್ಣದವರಿಗೂ ಅವರದೇ ಆದ ವಿಶೇಷ ಜವಾಬ್ದಾರಿಗಳಿವೆ. ಗುಣಶೇಖರ ಮೂರ್ತಿಯವರು ಯಾಕೆ ಹುರಿದಂಬಿಸಿದರೋ ತಿಳಿಯದು. ವೇದದ ಆಶಯದಂತೆ ಯಾರೂ ಮೇಲಲ್ಲ. ಯಾರೂ ಕೀಳಲ್ಲ. ಎಲ್ಲರೂ ಭಗವಂತನ ಮಕ್ಕಳು.

Submitted by sathishnasa Wed, 09/25/2013 - 16:10

In reply to by hariharapurasridhar

" ನಾಲ್ಕೂ ವರ್ಣವೂ ಶ್ರೇಷ್ಠವೇ. ಶೂದ್ರನಿಲ್ಲದ ವ್ಯವಸ್ಥೆ ಶೂನ್ಯ" ನಿಮ್ಮ ಮಾತು ನಿಜ. ಆದರೆ ಇಲ್ಲಿ ನಾನು ವರ್ಣಾಶ್ರಮದ ದೃಷ್ಠಿಯಿಂದ ಬರೆದಿಲ್ಲ ಲೋಕ ಕಂಟಕನಾದವನು ಯಾವ ವರ್ಣದವನಾದರೂ ಅವನಿಂದ ಲೋಕಕ್ಕೆ ಕೆಡುಕು ಎಂಬ ಭಾವೆಯಿಂದ ಬರೆದಿದ್ದೇನೆ ಅಷ್ಟೆ ಇದರಲ್ಲಿ ಶೂದ್ರರನ್ನು ನಿಂದಿಸುವ ಉದ್ದೇಶವಿಲ್ಲ ಆದುದರಿಂದ ತಪ್ಪಾಗಿ ಅರ್ಥೈಸಿಕೊಳ್ಳದಂತೆ ನಿಮ್ಮಲ್ಲಿ ಹಾಗೂ ಎಲ್ಲರಲ್ಲಿ ಮನವಿ ಧನ್ಯವಾದಗಳೊಂದಿಗೆ...........ಸತೀಶ್