ಮೈಲಾರಲಿಂಗ ಮತ್ತು ತಿರುಪತಿ ತಿಮ್ಮಪ್ಪ

ಮೈಲಾರಲಿಂಗ ಮತ್ತು ತಿರುಪತಿ ತಿಮ್ಮಪ್ಪ

ತಿರುಪತಿ ತಿಮ್ಮಪ್ಪ. (ವೆಂಕಟ ರಮನ)

ವೆಂಕಟೆಶ್ವರನಿಗೆ ತಿಮ್ಮಾಪ್ಪ ಎಂದು ಮತ್ತು ಅವರು ನೆಲಿಸಿದ ಬೆಟ್ಟಕ್ಕೆ ತುರುಪತಿ ಎಂದು ಎಕೆ ಕರೆಯಲಾಗುತ್ತದೆ? ನಿಮಗೆ ತಿಳಿದಿದ್ದರೆ ನನಗೆ ದಯಮಾಡಿ ತಿಳಿಸಿ

ಈ ವಿಚಾರವನ್ನು ನಾನು ಒಬ್ಬ ಕುರುಬನಿನ್ದ ತಿಳಿದುಕೊಂಡೆ.

ವೆಂಕಟೆಶನು ಮೊದಲಿಗೆ ಯಾದಗಿರಿ ಹತ್ತಿರ ಮೈಲಾರಂ ಹತ್ತಿರದಲ್ಲಿ ಒಂದು ಬೆಟ್ಟದಮೇಲೆ ವಸಿಸುತ್ತಿದ್ದನು. ಆಲ್ಲೆ ಸಮೀಪದ ಬೆಟ್ಟದಮೇಲೆ ಶಿವನು ನೆಲೆಸಿದ್ದನು. ಶಿವನ ಕೀರ್ಥಿ ಹೆಚ್ಹಾಗಿ, ವೆಂಕಟೆಶನು ಅಲ್ಲಿಂದ ಬೇರೆ ಸ್ತಳ್ಳಕ್ಕೆ ವಲೆಸೆ ಹೊಗುವದಾಗಿ ಶಿವನ ಹತ್ತಿರ ಹೆಳಿಕೊಂಡನು, ಮತ್ತು ಶಿವನಿಂದ ಎಳುಕೋಟಿ ಮಹಿಮೆಗಳ ಬೇಡಿದನು.

ಭೊಳ ಶಂಕರನು ತನ್ನಲ್ಲಿಯ ಎಳುಕೋಟಿ ಮಹಿಮೆಗಳನ್ನು ಎಳು ತಿಂಗಳ ವರೆಗೆ ಸಾಲ ವಾಗಿ ಕೊದುವೆನೆಂದಾಗ, ವೆಂಕಟೇಶನು ಅದಕ್ಕೆ ಒಪ್ಪಿಕೊಂಡನು. ಸಾಲವನ್ನು ಮಾತ್ರ ತಾನು ಎಕಾಂತವಾಗಿ ಇರುವಾಗ ಮತ್ತು ತಾನು ನೆಲೆಸಿರುವಲ್ಲಿಗೆ ಬಂದು ಕೇಳ ಬೇಕೆಂದು ಹೆಳಿ ಎಳುಕೋಟಿ ಮಹಿಮೆಗಳನ್ನು ತೆಗೆದುಕೊಂಡು ಹೊರಟನು.

ಏಲ್ಲ ಕಡೆ ತಿರುಗಿ, ತಿರುಗಿ ಒಂದು ಬೆಟ್ಟ ಸೇರಿಕೊಂಡನು. ತಿರುಗಿ, ತಿರುಗಿ ಸೆರಿಕೊಂಡ ಬೆಟ್ಟಕ್ಕೆ ತಿರು ಬೆಟ್ಟವೆಂದು ಮತ್ತು ಮಂಗನಂತೆ ಅಲೆದಾಡಿದಕ್ಕೆ ಆತನಿಗೆ ತಿಮ್ಮಪ್ಪ ಎಂದು ಕರೆಯಲಾಯಿತು.

ಎಳುಕೋಟಿ ಮಹಿಮೆಗಳನ್ನು ತಾನು ಭಕ್ತರಿಗೆ ಅನುಗ್ರಹಿಸಲು, ವೆಂಕಟೆಶನ ಮಹಿಮೆ ಹೆಚ್ಚಾಯಿತು.

ಎಳು ತಿಂಗಳಾದ ಮೇಲೆ ಶಿವ ವೆಂಕಟೆಶನನ್ನು ತಾನು ಕೊಟ್ಟಿರುವ ಸಾಲ ಪಡೆಯಲು ಹೋದ. ವೆಂಕಟೆಶನ ಕೀರ್ಥಿ ಪ್ರಪಂಚವೆಲ್ಲ ಹರಡಿತ್ತು. ಯಾವಗಲು ಜನ. ಭೇಟಿ ಮಾಡಲು ಊದ್ದವಾದ ಜನಸರಪಲಿ.

ಭೊಳ ಶಂಕರನು ತನ್ನ ಎಳುಕೋಟಿ ಮಹಿಮೆಗಳನ್ನು, ಹಿಂದಕ್ಕೆ ಪಡೆಯುವದ್ದಕಾಗಿ ಬಾಗಿಲ ಮುಂದೆ ನಿಂತು "ಎಳುಕೋಟಿ ಎಳುಕೋಟಿ ಘೇ" ಎಂದು ಕೂಗಿದನು. ಇದನ್ನು ಕೆಳಿಸಿಕೊಂಡ ವೆಂಕಟೇಶನು ಎಳುಕೋಟಿ ಮಹಿಮೆಗಳನ್ನು ಹಿಂತಿರುಗಿಸಿದರೆ ತನ್ನ ಕೀರ್ಥಿ ಕುಂದುವದೆಂದು ವಿಚಾರ ಮಾಡಿ, "ಗೋವಿಂದ, ಗೋವಿಂದ" ಎಂದು ಉತ್ತರಿಸಿಧನು.

ಆಗ ಶಿವನು, ಇಂದಿನಿಂದ ನಿನ್ನ ಭಕ್ತರು ನಿನ್ನನ್ನು ಗೋವಿಂದ ಎಂದು ಕೂಗಲಿ ಎನ್ನುವ ಶಾಪವನ್ನು ಕೊಟ್ಟನು. ಆದಕ್ಕೆ ವೆಂಕಟೇಶನು, ಶಿವನಿಗೆ- ಮೈಲಾರಲಿಂಗೆಶ್ವರನಿಗೆ, ನಿನ್ನ ಭಕ್ತರು ನಿನ್ನನ್ನು "ಎಳುಕೋಟಿ ಎಳುಕೋಟಿ ಮಲ್ಲಯ್ಯ" ಎಂದು ಕೂಗಿ ಕರೆಯಲು ಅವರ ಬೆಡಿಕೆಗಳು ನೆರವೇರಲಿ ಎಂದನು.

ಇದು ನಾನು ನಿಮ್ಮಗಳಗೆ ತಿಳಿಸಲಿಚ್ಹಿಸುವೆ.

ಆದರಿಂಧ ವೆಂಕಟೇಶ್ವನನ್ನು ಗೋವಿಂಧ ಎಂದು ಭಕ್ತರು ಕರೆಯುವರು ಮತ್ತು ಮೈಲಾಪುರದ ಶ್ರೀ ಮೈಲಾರಲಿಂಗೆಶ್ವರನ್ನನ್ನು "ಎಳುಕೋಟಿ ಎಳುಕೋಟಿ ಮಲ್ಲಯ್ಯ ಘೇ" ಎಂದು ಕೂಗಿಕರೆಯಲು ಅವರಗೆ ಅವರ ಸಂಕಲ್ಪಗಳು ನೆರವೆರುವವು.

ಇದು ಯಾದಗಿರಿ ತಾಲುಕಿನ (ಗುಲ್ಬರ್ಗ ಜಿಲ್ಲಾ) ಮೈಲಾರಪುರ ಗ್ರಾಮದ ಮೈಲಾರಲಿಂಗನ ಮಹಿಮೆ.

ನಿಮಗೆ ತಿಳಿದಿದ್ದರೆ ನನಗೆ ದಯಮಾಡಿ ತಿಳಿಸಿ

Rating
No votes yet