'ಮೈಸೂರಿನ ರಂಗಾಯಣ ನಾಟಕ ಸಂಸ್ಥೆ,' ಮುಂಬೈನಲ್ಲಿ ನಡೆಸಿಕೊಡುತ್ತಿರುವ ಎರಡನೆಯದಿನದ ಕೊಡುಗೆ-'ಶೂದ್ರ ತಪಸ್ವಿ' !

'ಮೈಸೂರಿನ ರಂಗಾಯಣ ನಾಟಕ ಸಂಸ್ಥೆ,' ಮುಂಬೈನಲ್ಲಿ ನಡೆಸಿಕೊಡುತ್ತಿರುವ ಎರಡನೆಯದಿನದ ಕೊಡುಗೆ-'ಶೂದ್ರ ತಪಸ್ವಿ' !

ಚಿತ್ರ

'ಮೈಸೂರಿನ ರಂಗಾಯಣ ನಾಟಕ ಸಂಸ್ಥೆ'ಯವರು ಮುಂಬೈನಲ್ಲಿ  ನಡೆಸಿಕೊಡುತ್ತಿರುವ  ತಮ್ಮಹೆಮ್ಮೆಯ  ಕನ್ನಡ ನಾಟಕೋತ್ಸವದ ಎರಡನೆಯ ದಿನದ  ಕೊಡುಗೆ : 

ಸನ್. ೨೦೧೨ ರ,  ಫೆಬ್ರವರಿ, ಶನಿವಾರ , ೧೧ ರಂದು, ಸಾಯಂಕಾಲ, ೬-೪೫ ಕ್ಕೆ,  ಮುಂಬೈನ ಮೈಸೂರ್ ಅಸೋಸಿಯೇಷನ್ ಕರ್ನಾಟಕ ಸಂಘ ಮುಂಬೈ ಜಂಟಿಯಾಗಿ ನಡೆಸಿಕೊಟ್ಟ ಕುವೆಂಪುರವರ  'ಶೂದ್ರತಪಸ್ವಿ' ಎಂಬ ನಾಟಕವನ್ನು  ಪ್ರದರ್ಶಿಸಲಾಯಿತು. ನಾಟಕದ ನಿರ್ದೇಶನ ಸಿ. ಬಸವಲಿಂಗಯ್ಯನವರಿಂದ. ಕೆ. ಮಂಜುನಾಥಯ್ಯನವರು ಆಹ್ವಾನಿತ ಸಭಿಕರನ್ನು ಆಹ್ವಾನಿಸಿದರು. ಕರ್ನಾಟಕ ಸರಕಾರದ ಹಿರಿಯ ಅಧಿಕಾರಿಗಳ ಸಹಕಾರ ಮತ್ತು ಪ್ರೋತ್ಸಾಹಗಳ ಬಗ್ಗೆ ಮಾತಾಡುತ್ತಾ ಮಂಜುನಾಥಯ್ಯನವರು, ಮುಂಬೈನಿಂದ  ತಮ್ಮ ರಂಗತಂಡವನ್ನು ಬೆಂಗಳೂರಿಗೆ ಕರೆದುಕೊಂಡು ಹೋದಾಗ, ಈ  ಅಧಿಕಾರಿಗಳು 
ತೋರಿಸಿದ ಪ್ರೀತಿ ಸೌಹಾರ್ದಗಳಿಗೆ ಚಿರಋಣಿಗಳಾಗಿರುವುದಾಗಿ ಸ್ಮರಿಸಿಕೊಂಡರು. ಅಸೋಸಿಯೇಷನ್ ನ  ಅಧ್ಯಕ್ಷರಾದ ಶ್ರೀ. ರಾಮ ಭದ್ರರವರು, ಅಧಿಕಾರಿಗಳಿಗೆ ಪುಷ್ಪಗುಚ್ಹವನ್ನಿತ್ತು ಗೌರವಿಸಿದರು.
 
ರಂಗಾಯಣದ ನಿರ್ದೇಶಕ, ಡಾ. ರಾಜಾರಾಂರವರು ಸಭಿಕರ ಮಧ್ಯೆ ಉಪಸ್ಥಿತರಿದ್ದರು. ಈ ನಾಟಕವನ್ನು ವಿಕ್ಷಿಸಲು ನಿವೃತ್ತ ನ್ಯಾಯಾಧೀಶ ಶ್ರೀ. ಶ್ರೀಕೃಷ್ಣ, ಶ್ರೀಮತಿ. ಪೂರ್ಣಿಮಾ  ಶ್ರೀಕೃಷ್ಣ,  ಶ್ರೀಮತಿ. ಶಾರದಮ್ಮನಾರಾಯಣಸ್ವಾಮಿ, ,ಮೊದಲಾದ ಗಣ್ಯರು ಬಂದಿದ್ದರು. ಸಭಾಂಗಣ ತುಂಬಿತುಳುಕುತ್ತಿತ್ತು.
 
ರವಿವಾರ ೧೨ ರಂದು, ಸಂಜೆ ೬-೩೦ ಕ್ಕೆ, 'ಏನ್ ಹುಚ್ಚೂರೀ ಯಾಕಿಹ್ಮ್ಗಾಡ್ತೀರಿ', ರೂಪಾಂತರ  ಮತ್ತು ನಿರ್ದೇಶನ, ಶ್ರೀ. ಪ್ರಸನ್ನರವರಿಂದ. ಕೊನೆಯದಿನವಾದ ರವಿವಾರದಂದು ರಂಗ ಕಲಾವಿದರನ್ನೆಲ್ಲ ಗೌರವಿಸುವ ಕಾರ್ಯಕ್ರಮವಿರುವುದರಿಂದ ಶನಿವಾರದಂದು ಕಲಾವಿದರ ಪರಿಚಯ ಮಾಡಿಕೊಡಲಿಲ್ಲ.
 
'ಶೂದ್ರ ತಪಸ್ವಿನಾಟಕದ ಬಗ್ಗೆ' :
 
೧೯೪೦ ರಲ್ಲಿ  ರಾಷ್ಟ್ರಕವಿ  ಕುವೆಂಪುರವರು  ರಚಿಸಿದ ‘ಶೂದ್ರ ತಪಸ್ವಿ’ ನಾಟಕದಲ್ಲಿ ಬ್ರಾಹ್ಮಣಕುಮಾರನೊಬ್ಬ ಮೃತನಾಗಿದ್ದು ಅದಕ್ಕೆ ಕಾರಣ  ಶೂದ್ರ ವ್ಯಕ್ತಿಯೊಬ್ಬರು ತಪಸ್ಸು ಮಾಡುತ್ತಿರುವುದರಿಂದ  ಎನ್ನುವ ವಿಚಾರ ಧಾರೆಯಿಂದ ಪ್ರೇರಿರರಾದ ರಾಜ ದೂತರು ಶ್ರೀರಾಮನ ಆಸ್ಥಾನದಲ್ಲಿ ಬಂದು ಅವರಿಗೆ  ದೂರು ಕೊಡುತ್ತಾರೆ. ದುಷ್ಟ ಶಿಕ್ಷಕ, ಶಿಷ್ಟ ರಕ್ಷಕನಾದ ರಾಘವನು ತಾನೇ  ತಪ್ಪಿತಸ್ಥನನ್ನು ಹುಡುಕಿ ದಂಡಿಸಲು ಹೊರಟುಬಂದಾಗ,  ಅಲ್ಲಿ ಆತ  ಕಂಡಿದ್ದು 'ಶಂಭುಕ'ನೆಂಬ ಶೂದ್ರನು ತಪಸ್ಸುಮಾಡುತ್ತಿರುವ ದೃಷ್ಯವನ್ನು !
 
ಮರ್ಯಾದ ಪುರುಷೋತ್ತಮ ರಾಮಚಂದ್ರನು ಈ ದೃಶ್ಯದಿಂದ ವಿಚಲಿತನಾಗದೆ, ಸಂತಸಗೊಂಡು,  ದೂರನ್ನುತಂದ ವ್ಯಕ್ತಿಯನ್ನು ಕರೆದು ತಪಸ್ಸುಮಾಡುತ್ತಿರುವ ವ್ಯಕ್ತಿಯನ್ನು ವಿರೋಧಿಸದಂತೆ  ಸಲಹೆ ನೀಡುತ್ತಾನೆ.
 
ವರ್ಣಾಶ್ರಮದ ಪ್ರಕಾರ ಶೂದ್ರನೋರ್ವನು ಹೇಗೆ ತಪ್ಪಸ್ಸು ಮಾಡಲು ಸಾಧ್ಯವೆನ್ನುವ ಅಭಿಪ್ರಾಯವನ್ನು ದಶರಥನಂದನನ ಮುಂದೆ ಇಟ್ಟಾಗ, ಶ್ರೀರಾಮಚಂದ್ರನು ತಕ್ಕ ಪರಿಹಾರವನ್ನು ಸೂಚಿಸುತ್ತಾನೆ. ನಾನು ತೊಡುವ ಬಾಣವು ಯಾರನ್ನು ಶಿಕ್ಷಿಸುವುದೋ ಅವರು ನಿಜವಾದ ತಪ್ಪಿತಸ್ಥರು ಎಂದುಸುರಿ ಬಾಣವನ್ನು ಬಿಟ್ಟನು. 
 
ಆ ಬಾಣವು ಮೊದಲು ಶಂಭುಕನ ಬಳಿಗೆ ಬಂದು, ಆತನಿಗೆ ವಂದಿಸಿ, ನಂತರ ಬ್ರಾಹ್ಮಣನ ಹತ್ತಿರ ಬಂದಾಗ ಆತನು ಭಯಭೀತನಾಗಿ ಶ್ರೀರಾಮ ಚಂದ್ರನ ಪಾದಗಳಿಗೆರಗಿ, ಶಂಭುಕನ ಹತ್ತಿರಕ್ಕೆ ಬಂದು ಆತನ ಕ್ಷಮೆ ಯಾಚಿಸುತ್ತಾನೆ. ಹೀಗೆ ಶಂಭುಕನಿಗೆ ಶಿಕ್ಷೆಯಾಗುವುದೆಂಬ ಭ್ರಮೆಯಲ್ಲಿದ್ದ  ಬ್ರಾಹ್ಮಣನಿಗೆ ಪ್ರಭು ರಾಘವನು ಬುದ್ಧಿಕಲಿಸುವ ಪ್ರಸಂಗದಿಂದಾಗಿ  ಆತನಿಗೆ ಕಣ್ಣುತೆರೆಸುತ್ತದೆ. ಮುಖ್ಯವಾಗಿ, ಸತ್ತಿರುವ ಆತನ  ಮಗ ಬದುಕಿ  ಎದ್ದು ಕೂಡುತ್ತಾನೆ.  ಈ ದೃಷ್ಯದೊಡನೆ ನಾಟಕದ  ತೆರೆ ಬೀಳುತ್ತದೆ.  
 
 
ಮೈಸೂರು ಅಸೋಸಿಯೇಶನ್‌ ಮುಂಬಯಿ,, ,ಕರ್ನಾಟಕ ಸಂಘ ಮುಂಬಯಿ,, ಹಾಗೂ 'ಕನ್ನಡ ಕಲಾಕೇಂದ್ರ ಮುಂಬಯಿ' ಸಂಯುಕ್ತ ಆಶ್ರಯದಲ್ಲಿ ರಂಗಾಯಣ ಮೈಸೂರು, ಅಭಿನಯಿಸುವ ಕನ್ನಡ ನಾಟಕೋತ್ಸವವು ಫೆ. ೧೦  ರಿಂದ ಫೆ. ೧೨  ರವರೆಗೆ ಮೂರು ದಿನಗಳ ಕಾಲ ನಗರದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಇದು ಎರಡನೆಯ ದಿನವಾಗಿದೆ.
 
-ಚಿತ್ರ ಮತ್ತು ನಿರೂಪಣೆ,
 
-ಹೊರಂಲವೆಂ 
 
 
 
 
 
 
 
Rating
No votes yet