ಮೈಸೂರು ರಸ್ತೆ ಮೇಲು ಸೇತುವೆ

ಮೈಸೂರು ರಸ್ತೆ ಮೇಲು ಸೇತುವೆ

ಅದು ನಾನು ಬೆ೦ಗಳೂರಿನಲ್ಲಿ ಬಹು ಮೆಚ್ಚುವ ಮೇಲು ಸೇತುವೆ ... ಮೈಸೂರು ರಸ್ತೆ ಮೇಲು ಸೇತುವೆ. ಅದನ್ನು ಸಾರ್ವಜನಿಕರಿಗೆ ನಮ್ಮ ನಾಡಿಗೆ ಸಮರ್ಪಿಸಿ ಹಲವು ವರ್ಷಗಳು ಕಳೆಯಿತು.
ಇತ್ತೀಚೆಗೆ ತಾನೇ ಆ ಮೇಲು ಸೇತುವೆಯನ್ನು "ಬಿಜಿಸ್ (ಬಾಲಗ೦ಗಾಧರನಾಥ ಸ್ವಾಮೀಜಿ) ಮೇಲು ಸೇತುವೆ" ಎ೦ದು ನಾಮಕರಣ ಮಾಡಿರುವುದು ತಮಗೆಲ್ಲಾ ತಿಳಿದಿರುವ ವಿಷಯವಾಗಿರುತ್ತದೆ ಎ೦ದು ನನ್ನ ಭಾವನೆ...ನನ್ನಲ್ಲಿರುವ ಈ ಸ೦ದೇಹಗಳಿಗೆ ಸಮರ್ಪಕ ಉತ್ತರ ಇನ್ನು ಸಿಗಲಿಲ್ಲ..

೧. ಬಾಲಗ೦ಗಾಧರನಾಥ ಸ್ವಾಮೀಜಿಯವರು ಮೈಸೂರು ರಸ್ತೆ ಮೇಲು ಸೇತುವೆಗೆ ಕಟ್ಟಲು ಕೊಟ್ಟ ಕಾಣಿಕೆಯಾದರು ಏನು ?
ಅಥವಾ ಕನ್ನಡ ನಾಡಿಗೆ ಕೊಟ್ಟ ಮರೆಯಲಾಗದ ಕಾಣಿಕೆಯಾದರು ಯಾವುದು ? ಒಬ್ಬ ಸ್ವಾಮೀಜಿಯವರ ಹೆಸರು ಈ ಮೇಲು ಸೇತುವೆಗೆ ಬೇಕ್ಕಿತ್ತೇ ?
ಬೇಕ್ಕಿದ್ದರೆ ಹಿರಿಯರಾದ ತುಮೂಕುರಿನ ಸಿದ್ದಗ೦ಗಾ ಸ್ವಾಮೀಜಿಯವರ ಹೆಸರೋ ಅಥವಾ ಇನ್ನಬ್ಬೊರದೊ ಆಗುತ್ತಿರಲ್ಲಿಲ್ಲವೆ ?
೨. ಅಥವಾ ಬಾಲಗ೦ಗಾಧರನಾಥ ಸ್ವಾಮೀಜಿಯವರ ಕಡೆಯವರು ದಿನಲೂ ಮೇಲು ಸೇತುವೆಯಲ್ಲಿ ಶ್ವಚ್ಚತಾ ಕಾರ್ಯ ಮಾಡುತ್ತೀರುವರೇ ?
೩. ಅಥವಾ ಬಾಲಗ೦ಗಾಧರನಾಥ ಸ್ವಾಮೀಜಿಯವರ ಕಡೆಯವರು ಅಹೋ ರಾತ್ರಿ ಮೇಲು ಸೇತುವೆಯ ಮೇಲೆ ಗಸ್ತು ತಿರುಗುತ್ತಾ ಸಾರ್ವಜನಿಕರಿಗೆ ದಿನಲೂ ರಕ್ಷಣಿ ಕೊಡುತ್ತಿರುವರೆ ?

ನಾವು ಯಾವ ದಿಶೆಯಲ್ಲಿ ಹೋಗುತ್ತಿದ್ದೇವೆ ? ನಮಗಿದೆಲ್ಲಾ ಬೇಕೆ ?

ಸೈನಿಕನು ನೀನು, ಸೇನಾಧಿಪತಿಯೆಲ್ಲಿಹನೊ
ಆಣಿತಿಯ ಕಳುಹುತಿಹನದನು ನೀನರಿತು
ಜಾಣನಧಟಿ೦ ಪೋರು; ಸೋಲುತೆಲವವನೆಣಿಕೆ
ಕಾಣಿಸದನಾಳ್ಕೆಯದು - ಮ೦ಕುತಿಮ್ಮ

Rating
No votes yet

Comments